- Advertisement -
ಯುಗದ ಪುರುಷ ಟಾಟಾ
ಕರೆಯಿತು ಕಾಲನ ಕರೆ
ಹೋದರು ಟಾಟಾ
ದೇಶದ ನೈಜ ರತ್ನ
ಪದ್ಮವಿಭೂಷಣ
ಸಾಟಿ ಇಲ್ಲದ ಸಾಧಕ
ಕರೆದ ಕಾಲನ ಕರೆ
ಹೋದರು ಟಾಟಾ
ಮದುವೆ.. ಮಕ್ಕಳು..ಇಲ್ಲ
ದೇಶದ ಹಿತಕೆ ಅವನದೆಲ್ಲ
ಅವನನಂಥ ಸೇವೆಯ ಧಣಿ
ಹೋಲುವರಾರಿಲ್ಲ
ಜನ್ಮಭೂಮಿಯ ಋಣಕೆ
ಬದುಕ ದಾನ ನೀಡಿದ. ಆಧುನಿಕ ಕರ್ಣ..
- Advertisement -
ಆಡು ಮುಟ್ಟದ ಕಸವಿಲ್ಲ
ಟಾಟಾ ಕೈಯಾಡಿಸದ
ಉದ್ಯೋಗ ಕ್ಷೇತ್ರವಿಲ್ಲ.
ದೇಶಕ್ಕೆ ಬಂದರೆ ಆಪತ್ತು
ಟಾಟಾ ಕಟಾಕ್ಷ ಯಾವತ್ತೂ
ಇಂಥ ಟಾಟಾ.. ನಮ್ಮ ಟಾಟಾ
ಜಗದ ತುಂಬ ಇವರ ಆಟ..
ದೇಶಕಾಗಿ.. ಇವರ ನೋಟ..
ದೇಶಹಿತವೇ ಇವರ ಹಠ..!!
ಮುಖದ ಮೇಲೆ ಮಂದಹಾಸ
ಆರದ ಛಾಯೆ..
ಹಠವ ತೊಟ್ಟು ಸ್ವಹಿತ ಬಿಟ್ಟು
ದೇಶಹಿತಕೆ ಮಿಡಿದ ಹೃದಯ
ದೇವಸಮಾನ ದಾನಗುಣದ
ಯುಗ ಯುಗದ ಆದರ್ಶ ಪುರುಷ
ನಡೆದೇ ಬಿಟ್ಟ ಎಲ್ಲ ಬಿಟ್ಟು
ಕರೆಯಿತು ಕಾಲನ ಕರೆ
ಹೋದರು ಟಾಟಾ..
ದೇಶದ ಪಾಲಿನ ನೈಜರತ್ನ
ಸೋಮಶೇಖರ ವೀ. ಸೊಗಲದ. ರಾಮದುರ್ಗ.