- Advertisement -
ನಮ್ಮ ರೈಲು
ನಮ್ಮ ರೈಲು
ನಮ್ಮ ಹಕ್ಕು
ಮಕ್ಕಳಾಡಲಿ
ಚುಕು ಬುಕು
ನಾಲ್ಕು ದಶಕದ
ಕೂಗು ಸಾಕು ಸಾಕು
ರಾಮದುರ್ಗಕೆ ರೈಲು
ಬೇಕೇ ಬೇಕು
ರೈತ ಕಾರ್ಮಿಕ
ಹಿಡಿದ ನೆಯ್ಗೆಯ
ಎಲ್ಲ ಜನರ
ಒಂದೇ ಬೇಡಿಕೆ
ಗುಡ್ಡ ಬೆಟ್ಟ
ಹತ್ತ ಬೇಕು
ಹಳ್ಳ ನದಿ
ದಾಟ ಬೇಕು
ಅಚ್ಚ ಹಸುರಿನ
ಪೈರು ಮಧ್ಯೆ
ಗಟ್ಟಿ ಕೇಕೆ
ಹಾಕಬೇಕು
ಎದ್ದು ನಿಂತು
ಗುಡುಗು ಹಾಕು
ರಾಮದುರ್ಗಕೆ ರೈಲು
ಬೇಕೇ ಬೇಕು
ಮಹಿಳೆ ಪುರುಷರು
ಹೊರಗೆ ಬನ್ನಿ
ಗಡುವು ನೀಡಿ
ಧುಮುಕ ಬೇಕು
ನಮ್ಮ ರೈಲು
ಪಡೆಯ ಬೇಕು
ನಮ್ಮ ರೈಲು
ನಮ್ಮ ಹಕ್ಕು
ಮಕ್ಕಳಾಡಲಿ
ಚುಕು ಬುಕು
ಡಾ.ಶಶಿಕಾಂತ ರುದ್ರಪ್ಪ ಪಟ್ಟಣ