spot_img
spot_img

ಕವನ : ಸಾಲುಗಳ ದೀಪದಲ್ಲಿ ಸಮಾನತೆ

Must Read

spot_img
- Advertisement -

ಸಾಲುಗಳ ದೀಪದಲಿ ಸಮಾನತೆ

ಭಾವ ಪರಿಮಳ ಸೂಸಿ ನಗುತ್ತಿವೆ
ಕೊಚ್ಚೆ ನೀರಿನ ಹರಿವು ನಲುಗುತ್ತಿವೆ
ಮನವೆಂಬ ಕತ್ತಲೆಯ ರೂಪಾ
ಬೆಳಗಬೇಕು ಸಾಲು ದೀಪಾ
ಅರಳಿ ನಗುವ ಹೂವಕೆ
ಚೆಲ್ಲಿದೆ ಕಾರ್ಮೋಡ ಕನವರಿಕೆ

ದುಗುಡ ದುಮ್ಮಾನ ತೊಲಗಬೇಕು
ಅರಿವು ಗುರು ಜ್ಞಾನ ಬೆಳಗಬೇಕು
ತನ್ನ ಬನ್ನಿಸದೇ ತಳದಿಂದ ತುದಿಯವರೆಗೆ
ತಾಳ್ಮೆಯಲಿ ಸನ್ಮಾರ್ಗ ಸಮ ಸಮಾಜಕೆ ಬೆಳಕ
ತೋರಿ ನಡೆಯಬೇಕು ಶರಣ ಕುಲಕೆ

- Advertisement -

ಅದಾವ ದ್ವೇಷ ಮನಕೆ ಶಾಶ್ವತ ಇಳೆಯಲಿ
ಹೋಗುವಾ ಕಾಲ ಜವರಾಯನ ಕರದಲಿ
ಕಟ್ಟುವಾ ರಜ್ಜುಗ ಮಮತೆ ಮರೆತು
ಮಡಿಲ ಕಂದನಂತೆ ನಾನು ಹರಸು
ತಾಯಂತೆ ನೀನು
ಭೇದ ಭಾವವ ದೂಡಿ ನಗುವ ಹೆಚ್ಚಿಸು ಹೇ ಬಸವಾ

ಕಿಚ್ಚು ಹೆಚ್ಚಿದೆ ಮಮತೆಯ ನೇಹ ಪ್ರೀತಿಯಲಿ
ಕುರುಡು ಕಾಂಚಾಣಕೆ ಮೈ ಮರೆತಿದೆ ಬಾಂಧವ್ಯ
ಅಧಿಕಾರದ ಅಹಂಮಿಕೆಯಲಿ
ಸುಲಿಯುತ್ತಿವೆ ನರ ಆವೇಶ
ತೋರಿ ನಡೆ ಸಾಲುಗಳ ದೀಪದಲಿ
ಸಮಾನತೆ

ಡಾ.ಸಾವಿತ್ರಿ ಕಮಲಾಪೂರ

- Advertisement -
- Advertisement -

Latest News

ಕಿಟದಾಳದಲ್ಲಿ ಜರುಗಿದ ಕಲಿಕಾ ಹಬ್ಬ

ಸೀರೆ ತೊಟ್ಟುಕೊಂಡು ಬಂದ ಬಾಲಕಿಯರು, ಮದುವಣಗಿತ್ತಿಯಂತೆ ಕಂಗೊಳಿಸಿದ ಶಾಲಾ ಆವರಣ. ಎಲ್ಲರ ತಲೆ ಮೇಲೊಂದು ಕಲರ್ ಕಲರ್ ಪೇಪರ್ ಟೋಪಿ. ಹೌದು, ಹೀಗೆ ಶಾಲೆಯಲ್ಲೊಂಥರಾ ಹಬ್ಬದ...
- Advertisement -

More Articles Like This

- Advertisement -
close
error: Content is protected !!
Join WhatsApp Group