spot_img
spot_img

ಕವನ – ಬುದ್ಧನೇಕೆ ನಕ್ಕ

Must Read

spot_img
- Advertisement -

ಬುದ್ಧನೇಕೆ ನಕ್ಕ…..

ಬುದ್ಧನಂತಾಗಬೇಕೆಂದು
ಮನೆ ಬಿಟ್ಟು ಬರುವವರ ನೋಡಿ
ಬುದ್ಧ ಮುಗಳ್ನಗೆ ನಕ್ಕ
ಬುದ್ಧ ಬೌದ್ಧತ್ವಗಳನ್ನರಿಯದೆ
ಆಸೆ. ಅಧಿಕಾರದ, ಮೋಹ
ತೊರೆಯದೆ ತೋಳಲಾಡುವವರ
ಕಂಡು ತುಟಿ ಬಿಚ್ಚದೆ ಮೌನದಿ ನಕ್ಕ.

ಜರಿ ಪೀತಾoಬರ, ಒಡವೆ
ತೊರೆದವನ ಹಲ್ಲಿಗೆ
ಬಂಗಾರದ ಕವಚ ತೊಡಿಸಿ
ಪೂಜಿಸುವ ದೇಶ ವಿದೇಶಗಳ
ಜನರ ಕಂಡು ಖೇದದಿಂದ ಬುದ್ಧ ನಕ್ಕ.

- Advertisement -

ವಾಸ್ತುವಿಗಾಗಿ, ಅದೃಷ್ಟದ ಸಂಕೇತ
ವಾಗಿ ನಗುವ ಬುದ್ಧ
ಮನೆ ಅಲಂಕಾರದ ವಸ್ತುವಾಗಿ
ಕೊಣೆಯ ಮೂಲೆಯಲಿ ವಿರಾಜಮಾನನಾದ
ಲಾಫಿoಗ ಬುದ್ಧ
ತನ್ನ ಅವಸ್ಥೆಗಾಗಿ ತಾನೇ ನಕ್ಕ.

ಅಷ್ಟಐಶ್ವರ್ಯ ತೊರೆದು
ಸರ್ವ ಸಂಗ ಪರಿತ್ಯಾಗಿಯಾದ
ಬುದ್ಧನ, ಪ್ರತಿಮೆಗೆ
ಬಂಗಾರದ ಎರಕ ಹೊಯ್ದು
ಸಾಲುಗಟ್ಟಿ ಆರಾಧಿಸುವದ
ನೋಡಿ ಬುದ್ಧ ನಕ್ಕ.

ಬುದ್ಧo ಶರಣo ಗಚ್ಚಾಮಿ
ಧರ್ಮo ಶರಣo ಗಚ್ಚಾಮಿ
ಸಂಘo ಶರಣo ಗಚ್ಚಾಮಿ
ಎನ್ನುತ್ತ ವೈರತ್ವ ಮೆರೆಯುವವರ
ಕಂಡ ಬುದ್ದ ನಕ್ಕ.

- Advertisement -

ನಮಗೆ ಜಗತ್ತು ಅನಿವಾರ್ಯವೇ
ಹೊರತು
ಜಗತ್ತಿಗೆ ನಾವು ಅನಿವಾರ್ಯವಲ್ಲ
ಎಂದು ಭೋದಿಸಿದ
ಇಂದು ದೇಶ, ವಿದೇಶಗಳ ಕಿತ್ತಾಟ ನೋಡಿ
ನಮ್ಮ ಮೌಢ್ಯಕ್ಕೆ ಬುದ್ಧ
ನಗದೇ ಇದ್ದಾನೆಯೇ

ಬುದ್ಧನೇಕೆ ನಕ್ಕ?
ಈಗಲೂ ಕಾಲ ಮಿಂಚಿಲ್ಲ.
ಬುದ್ಧನ ಬದ್ಧತೆಗೆ ಬದ್ಧರಾಗೋಣ.

✍️ಶ್ರೀಮತಿ. ವಿದ್ಯಾ. ಹುಂಡೇಕರ.

- Advertisement -
- Advertisement -

Latest News

ಯತ್ನಾಳ ಉಚ್ಛಾಟನೆ ಮರುಪರಿಶೀಲಿಸಿ –  ಸತೀಶ ಹಿರೇಮಠ

ಸಿಂದಗಿ: ಮಾಜಿ ಕೇಂದ್ರ ಸಚಿವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟನೆಯನ್ನು ಹೈ ಕಮಾಂಡ್ ಮರು ಪರಿಶೀಲನೆ ಮಾಡಿ, ರದ್ದು ಮಾಡಬೇಕೆಂದು ಜ್ಞಾನ...
- Advertisement -

More Articles Like This

- Advertisement -
close
error: Content is protected !!
Join WhatsApp Group