spot_img
spot_img

ಕವನ : ರಾಜ್ಯೋತ್ಸವ

Must Read

spot_img
- Advertisement -

ರಾಜ್ಯೋತ್ಸವ
—————–
ಕಾವೇರಿಯಿಂದ ಮಾ ಗೋದಾವರಿ
ಕಳೆದು ಕೊಂಡೆವು ನೆಲ ಜಲ
ಭಾಷೆಯ
ಕನ್ನಡವೇ ಸತ್ಯ ಕನ್ನಡವೇ ನಿತ್ಯ.
ಮಾತೃ ಭಾಷೆ ಕಡ್ಡಾಯವಿಲ್ಲ
ಸುಪ್ರೀಂ ಕೋರ್ಟ್ ಆಜ್ಞೆ.
ಮಳೆಯಿಲ್ಲ ಬರಗಾಲ
ಗುಳೆ ಹೋದರು ನನ್ನವರು.
ಕುಣಿಯಲು ಇರಲಿಲ್ಲ ಲಂಬಾಣಿ .
ನದಿ ನಮ್ಮದಾದರೂ ಮಹಾದಾಯಿ
ಗೋವಾದವರ ಅಡ್ಡಿ ಕಳಸಾ ನಾಲೆಗೆ.
ಮೇಕೆ ದಾಟು ತೂಗುಗತ್ತಿ.
ಹೊಗೆನಕಲ್ಲಿನಲ್ಲಿ ಅನಾಥ ಗತಿ.
ಕಾವೇರಿ ಒಣಗಿದೆ ಬಿಡಬೇಕು ನೀರು
ಇಲ್ಲದಿರೆ ಮಂತ್ರಿಗಳು ರಾಜ್ಯದಿ ಗಡಿಪಾರು.
ಹೂಳು ತುಂಬಿದೆ ತುಂಗೆಯಲಿ
ತೆಗೆಯಲು ದುಡ್ಡಿಲ್ಲ ಸಮಯವಿಲ್ಲ.
ಉತ್ಸವಕೆ ಹಬ್ಬಕ್ಕೆ ಬಿದ್ದಿದೆ ಕಾಂಚಾಣ.
ಬೆಂದೊಡಲು ನೆಲವು ತಣಿವುದೆಂದು?
ಬೆಳಗಾವಿಯ ಮೇಲೆ
ಮಹಾರಾಷ್ಟ್ರ ಕಣ್ಣು
ನಿದ್ರೆಯಲ್ಲಿ ಇರುವರು
ನಮ್ಮವರು ಚಿನ್ನು..
ಕಸಿದರು ಕಾಸರಗೋಡು ಕೇರಳದ ಕಣ್ಮಣಿಗಳು.
ಬಡವಾಗಿವೆ ಸೊಲ್ಲಾಪುರ ಜತ್ತ
ಸಾಂಗ್ಲಿಯ ಮಕ್ಕಳು.
ಅತ್ತ ಎಕ್ಕಡ ಇತ್ತ ಎನ್ನಡ
ನಡುವೆ ನಮ್ಮ ಕನ್ನಡ.
ಓಹೋ ಇದು ಬೆಂಗಳೂರು ನಮ್ಮ ರಾಜ್ಯಧಾನಿ.
ಇಲ್ಲಿ ಮಟ್ಕಾ ರೇಸ್ ಮದ್ಯ ಮಾರಾಟ ನಡೆದಿದೆ.
ನಾವು ವೀರರು ಶೂರರು
ಕವಿಗಳು ಕಲಿಗಳು.
ಭಾಷಣ ಉಟ್ಟು ಓರಾಟಗಾರರು ಫ್ಲೆಕ್ಷಿನಲ್ಲಿ .
ಆನೆ ಕುದುರೆ ಒಂಟಿಯ ಸವಾರಿ.
ಚಾಲುಕ್ಯ ಕದಂಬ ವಿಜಯನಗರ
ಹೊಯ್ಸಳರ ವೈಭವ
ಶರಣರ ದಾಸರ ವಚನ ಧ್ವನಿ ವರ್ಧಕ ಕೀರ್ತನೆ
ಡೊಳ್ಳು ಕುಣಿತ ರೂಪಕ ಪೋಲೀಸರ ಪರೇಡ್ .
ಕಲಾವಿದ ಸಾಹಿತಿ ಸಾಧಕರ ಪ್ರಶಸ್ತಿ ಸನ್ಮಾನ ಹೊಗಳಿಕೆ .
ವೇದಿಕೆಯ ಮೇಲೆ ನಿದ್ರಾಮಯ್ಯನವರ ತೂಕಡಿಕೆ.
ಕನ್ನಡ ಉಳಿಸೋಣ ಬೆಳೆಸೋಣ ನೃತ್ಯ ನಾಟಕ .
ಕನ್ನಡ ಬರದ ಇಂಗ್ಲಿಷ ನಟ ನಟಿಯರು.
ಸಂಜೆ ದೂರದರ್ಶನದಿ ರಂಗು ರಂಗಿನ ಚರ್ಚೆ.
ಲಡ್ಡು ಮಂಡಕ್ಕಿ ಪೆಪ್ಪರಮೆಂಟು ಚಾಕಲೇಟು.
ಕೈ ಬಾಯಿ ಒರೆಸಿ ಚಪ್ಪಾಳೆ ತಟ್ಟುತ್ತೇವೆ.
ಅಂತೂ ಮಾಡಿ ಮುಗಿಸಿದೆವು ಕನ್ನಡ ರಾಜ್ಯೋತ್ಸವ.
————————————
ಡಾ ಶಶಿಕಾಂತ.ಪಟ್ಟಣ.ರಾಮದುರ್ಗ

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಅವ ಹಿಂದು ಅವ ಜೈನ ಅವ ಬೌದ್ಧ ಅವ ಸಿಖ್ಖ ಅವ ಕ್ರೈಸ್ತ ಅವ ಮಹಮದೀಯನೆಂದು ದಯಮಾಡಿ ಕರೆಯದಿರು ಬೇರೆಯವರೆನ್ನದಿರು ಅವರು ನಮ್ಮವರೆನ್ನು - ಎಮ್ಮೆತಮ್ಮ ಶಬ್ಧಾರ್ಥ ಮಹಮದೀಯ‌ = ಮುಸಲ್ಮಾನ ತಾತ್ಪರ್ಯ ಜಗತ್ತಿನಲ್ಲಿ‌ ಹಿಂದು‌,...
- Advertisement -

More Articles Like This

- Advertisement -
close
error: Content is protected !!
Join WhatsApp Group