- Advertisement -
ಕಲ್ಯಾಣ ಕನ್ನಡ
ಇರಬೇಕು ಕನಿಕರ ಕಟ್ಟುವ ಕಲ್ಯಾಣ ಜ್ಯೋತಿ
ಕಟ್ಟಿದರು ಕನ್ನಡ ಕಲ್ಯಾಣದ ಪಣತಿ
ಕನ್ನಡಾಂಬೆಯ ಮಡಿಲ ಕಂದನ ಪ್ರೀತಿ
ದ್ವೇಷ ಮತ್ಸರವ ಭಾವ ದೂಡಿ
ನೀತಿಯಾ ಮಾರ್ಗದಲಿ ಸತ್ಯದಾ ಪಟವು ಹಾರಿ
ತಿಳಿಯಬೇಕು ಮನ ಕರೆವ
ನೂರೆಂಟು ನಮನ
ಸಲ್ಲದು ಸಂಕುಚಿತ
ವಿಶ್ವವೆಲ್ಲ ಒಂದೇ ಕುಟುಂಬ
ತಿಳಿದು ಸಾಗಿದರು ವಿಶ್ವ ಮಾನವ
ಮನುಜ ಮತ ವಿಶ್ವ ಪಥ
ಕಟ್ಟಿ ಎಳೆದರು
ಕನ್ನಡದ ರಥ
ಹಲವು ಹೂ ಪುಷ್ಪ
ಮನಕೆ ನಮಿಸಿ
ಸಾಗುತ್ತಿದೆ ಕಲ್ಯಾಣದ ಕೀರುತಿ
ಹೊಗಳಿಕೆ ತೆಗಳಿಕೆ ಸೋಲು ಗೆಲುವು ಒಂದೇ
ಎಂದರು ಸಿದ್ಧಪುರುಷರು
ಮನದ ವೈರ ಕಿತ್ತು ವಗೆದು
ಭಾವ ನಿರ್ಮಲ ಜಗಕೆ ಸಾರಿ
ಇರುಳು ಬೆಳಗು ಕಾಯಕಯೋಗಿ
ಕಲಿಸಿ ನಡೆಸಿದ ಶರಣ ಯೋಗಿ
ಮಾತು ನಡೆ ಒಂದೇ ಇರಲಿ
ಬಡವ ಬಲ್ಲಿದ ಭೇದ ಅಳಿಯಲಿ
ಅಕ್ಕ ಅಣ್ಣ ಒಂದೇ ಆತ್ಮ
ಸಿದ್ಧ ಪುರುಷರು ಎದ್ದು ನಡೆದರು
ಜಗವ ಬೆಳಗಿದ ಬುದ್ಧ ಬಸವ
ಕಟ್ಟಿ ನಡೆದರು ಕಲ್ಯಾಣ ಕನ್ನಡ
ವಚನ ಕಟ್ಟು ಹೃದಯ ತಟ್ಟಿ
ಹುಟ್ಟು ಹಾಕಿದರು ಕಲ್ಯಾಣ ಕನ್ನಡ
_____________________
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪೂರ