- Advertisement -
ಬಿಟ್ಟು ಬಿಡು
ಮರೆಯಾಗಿ ಬಿಡು
ಅಮವಾಸ್ಯೆಯ ಚಂದ್ರನಹಾಗೆ
ತೊರೆದು ಬಿಡು
ನಿನ್ನ ಆದರಿಸದವರನು.
ತೆರೆಯೆಳೆದು ಬಿಡು
ದೂಷಿಸುವವರನು ಕಡೆಗಣಿಸಿ
ಮೇರೆ ಮೀರಿಬಿಡು
ನಿನ್ನದಲ್ಲದ ತಪ್ಪಿಗೆ ಒಪ್ಪಿಸಿದವರನು.
- Advertisement -
ಗೆರೆಯೆಳೆದು ಬಿಡು
ಅವಕಾಶವಾದಿಗಳ ದೂರಿಕರಿಸಿ
ತಾರೆಯಂತಾಗಿ ಬಿಡು
ಬೇರೆಯಾದವರು ಹಪಹಪಿಸುವಂತಾಗಿ.
ಕೆರೆ ಕಟ್ಟೆಯಾಗಿ ಬಿಡು
ಬಸವಳಿದವರ ಸಂತೈಸುವಿಕೆಯಲಿ
ನೆರವಾಗಿ ಬಿಡು
ನೆರೆಮನೆಯವರು ನನ್ನವರೆಂದು ಓಲೈಸುವಂತಾಗಿ.
ತೆರಳಿ ಬಿಡು
ನರಳುವ ಮನ್ನವೇ
ಬೆರಳಾಗಿ ಬಿಡು
ಕರುಳ ಕುಡಿಯ ಮಮತೆಗೆ.
- Advertisement -
ಸರಳಾಗಿ ಬಿಡು
ನಂಬಿಕೆ ದ್ರೋಹ ಬಗೆದವರಿಗೆ
ಹೊರಳಿ ಬಿಡು
ಬೇಡದ ವಸ್ತುಗಳ ಆಹ್ವಾನಕೆ.
ಬಿಟ್ಟು ಬಿಡು
ರಾಗ ದ್ವೆಷಗಳ ನಡೆಯ
ಕೊಟ್ಟು ಬಿಡು
ಒಲವಾಮೃತದ ಸುಧೆ.
ಕೊಟ್ಟು ಬಿಡು
ನಿನ್ನದಲ್ಲದ ವಸ್ತುವ
ಹೊಟ್ಟು ತೂರಿಬಿಡು
ಸತ್ವಯುತ ಜೀವನದ ನಡೆಗೆ.
ರೇಷ್ಮಾ ಕಂದಕೂರ
ಶಿಕ್ಷಕಿ
ಸಿಂಧನೂರು