ಕವನ : ಹೃದಯದ ಮಾತು ಕೇಳಿ

Must Read

ಹೃದಯ ಮಾತು ಕೇಳಿ

ಮಿಡಿವ ಹೃದಯ
ನಿಲ್ಲುವುದು ಗೊತ್ತಿಲ್ಲ
ದುಡಿವ ಜೀವ
ಮಣ್ಣಾಗುವುದು ತಿಳಿದಿಲ್ಲ.

ಬಣ್ಣನೆಗೆ ನಿಲುಕದ ಜೀವ
ಬಣ್ಣದ ಮಾತಿಗೆ ಮರುಳಾಯಿತಲ್ಲ
ಒಮ್ಮೆ ಕಣ್ಣ ಬೆಳಕು
ಮಗದೊಮ್ಮೆ ಮಸುಕು.

ಅದರ ಸಿಹಿ ಮಾತು
ಉದರ ಕಹಿ ಸಂಪತ್ತು
ತಿರುಗಣಿಯ ಬದುಕು
ಉಬ್ಬು ತಬ್ಬುಗಳಲಿ ಜೀಕು.

ಆವೇಗದ ಸನ್ನೆ
ಮರೆತ ನನ್ನನ್ನೇ
ಕಲಿತು ಬಿಡಬೇಕು
ಅನುಭವಿಸುತ ನೂಕು.

ಕೆರಳಿ ಕೆಂಡವೇಕೆ
ಬೆರಳೆಣಿಕೆಯ ಜೀವನಕೆ
ನೆರಳು ಬೆಳಕಿನ ಆಟಕೆ
ಕೊರಳು ಹಿಸುಕುವುದೇಕೆ.

ತೆರಳುವುದು ನಿಶ್ಚಿತ
ನಂಬಿಕೆಯೇ ಭಗವಂತ
ನೆಮ್ಮದಿಯ ನಿಟ್ಟುಸಿರಾಗಲಿ
ಸಾಧನೆಯ ಪಥವಾಗಲಿ.

ಸದ್ದಿಲ್ಲದೇ ಬಾನೆತ್ತರಕ್ಕೆ ಏರು
ಸುದ್ದಿ ಬಿತ್ತರವಾಗಲಿ
ಬಿದ್ದೆ ಎಂದು ಕುಗ್ಗದೇ
ಶೋಧನೆಯ ಸಿದ್ದಿಸುತ.

ಮಾತು ಮಾತಿಗೆ ಮುನಿಸೇಕೆ
ಮತಿಯ ಕಡೆಗಣಿಸಿ
ಭ್ರಾಂತಿಯ ಕಳಚು
ಸಂಕ್ರಾಂತಿ ರೂಪಕಕೆ.

ರೇಷ್ಮಾ ಕಂದಕೂರ

Latest News

ಉಪ್ಪಾರ ಸಮಾಜ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನೆರವು – ಬರಮಣ್ಣ ಉಪ್ಪಾರ

ಮೂಡಲಗಿ: ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ರೂ.೫ ಕೋಟಿ ಹಣವಿದೆ ಸಮಾಜದ ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಸಾಧನೆ...

More Articles Like This

error: Content is protected !!
Join WhatsApp Group