ಭಕ್ತಿ ಪಂಥದ ಆದ್ಯ ಪ್ರವರ್ತಕ ಕನಕದಾಸ
ಕನ್ನಡ ನಾಡುನುಡಿ ಕಂಡ ಭಕ್ತಾಗ್ರೇಸರ ಅಗ್ರಗಣ್ಯ ನೇತಾರ ಕನಕದಾಸ,
ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿ ವೈರಾಗ್ಯ ಮೂರ್ತಿಯಾದ ಧಾರ್ಮಿಕ ಲೋಕದ ಮಾನಸ,
ಸಮಾಜದಲ್ಲಿಡಗಿದ್ದ ಮೂಢನಂಬಿಕೆಗಳ ವಿರುದ್ಧ ಸಮಾಜಕ್ಕೆ ವಿಶೇಷ ಬೆಳಕು ಚೆಲ್ಲಿದ ದಾಸಶ್ರೇಷ್ಠ,
ತಿರುಪತಿ ತಿಮ್ಮಪ್ಪನ ಆಶಿರ್ವಾದಿಂದ ಜನಿಸಿದ ಮಹಾಮಹಿಮನು ದಾಸಲೋಕಕೆ ವಿಶಿಷ್ಟ
ಕಾಗಿನೆಲೆಯಾದಿ ಕೇಶವರಾಯನ ಪರಮಭಕ್ತನಾಗಿ ಕಾಯಕಲ್ಪ ನೀಡಿದ ಸಾಕಾರಮೂರ್ತಿ,
ತನ್ನಲ್ಲಿದ್ದ ಸಂಪತ್ತನ್ನು ದಾನ ಮಾಡಿದ ವೈಖರಿ ಸಮಾಜದಲ್ಲಿನ ಸಂಚಲನಕೆ ಸ್ಫೂರ್ತಿ,
ದಾಸ ಸಾಹಿತ್ಯದಲ್ಲಿ ದೈವಭಕ್ತಿ ಧಾರ್ಮಿಕತೆಯ ನೆಲೆಗಟ್ಟನ್ನು ಉದ್ದೀಪನಗೊಳಿಸಿದ ಕೀರ್ತಿಶೇಷ,
ಹೆಮ್ಮೆಯ ಕರುನಾಡಿನಲ್ಲಿ ಜನ್ಮವೆತ್ತಿ ಜನಸಾಮಾನ್ಯರಲ್ಲಿಡಗಿದ್ದ ಮೌಢ್ಯಗಳ ತೊಲಗಿಸಿದ್ದು ವಿಶೇಷ,
ದಾಸ ಸಾಹಿತ್ಯ ಪರಮ ಶ್ರೇಷ್ಠ ಪದ ಭಜನೆಗಳಿಂದ ಜ್ಞಾನೋದಯವಾಗಲೆಂದು ಆಶಿಸುತ್ತಾ ಭೂ ತಾಯಿಯ ಪುತ್ರರಾಗೋಣ,
ದಾಸರ ಜನ್ಮದಿನದಂದು ನಮ್ಮಲ್ಲಿರುವ ಮೂಢನಂಬಿಕೆಗಳಿಗೆ ಇತಿಶ್ರೀ ಹೇಳಿ ಸುಧರ್ಮ ಪಥದಲ್ಲಿ ಸಾಗೋಣ,
ಜಿ.ಎಸ್.ಕರ್ಪೂರಮಠ, ಘಟಪ್ರಭಾ