ಭರವಸೆಯ ಬಂಧು ಅಪ್ಪ
ನನಗೆ ಯಾವತ್ತೂ ಕಣ್ಣೀರೇ ಗೊತ್ತಿಲ್ಲ
ಕಾರಣ ನಿಮ್ಮ ಬೆವರ ಹನಿ ನಿಂತಿಲ್ಲ
ಉಸಿರಿಗೆ ಹೆಸರು ನೀಡಿದವನು ನೀನು
ನಿಮ್ಮ ಹೆಸರುಳಿಸುವ ಮಗನಾಗುವೆ ನಾನು
ಭರವಸೆ ಎಂದರೆ ಅಪ್ಪ
ಜವಾಬ್ದಾರಿ ಎಂದರೆ ಅಪ್ಪ
ಪ್ರಯತ್ನ ಅಂದರೆ ಅಪ್ಪ
ಕಾಳಜಿ ಅಂದರೆ ಅಪ್ಪ
ನಿನಗಾಗಿ ಎಂದೆಂದಿಗೂ ನೀ ದುಡಿಯಲಿಲ್ಲ
ಯಾವುದಕ್ಕೂ ಕೊರತೆ ಮಾಡಲಿಲ್ಲ
ನಿನ್ನ ದುಃಖವ ನಮಗೆ ಹೇಳಲಿಲ್ಲ
ಬಾಳಿನ ಉದ್ದಕ್ಕೂ ನೋವನ್ನು ನುಂಗಿದೆಯಲ್ಲ
ನಾ ಮರವಾದರೆ ನೀ ಬೇರು ಆದೆ
ನಾ ಹನಿಯಾದರೆ ನೀ ಮೋಡವಾದೆ
ನಾ ಹೂವಾದರೆ ನೀ ಬಳ್ಳಿಯಾದೆ
ನಾ ಕಣ್ಣಾದರೆ ನೀ ರೆಪ್ಪೆಯಾದೆ
ನನಗೆ ಚೆಂದದ ಅರಿವೆ ತೊಡಿಸಿದೆ
ನಿನ್ನಂಗಿ ಹರಿದುದನೇ ಮರೆಮಾಚಿದೆ
ಹಗಲಿರುಳು ನೀ ದುಡಿದು ಓದಿಸಿದೆ
ನೋವಿದ್ದರೂ ಒಳಗೊಳಗೇ ರೋಧಿಸಿದೆ
ನಿನ್ನ ಬೆವರಲಿ ತಂದ ಬೂಟು ನಾ ತೊಟ್ಟೆ
ನಿನ್ನ ಅಂಗಾಲ ಗಾಯ ಬಿರುಕುಗಳ ಮುಚ್ಚಿಟ್ಟೆ
ಮಗ ಕೋಟು ಧರಿಸಲೆಂದು ಬಯಸಿದೆ
ನೀ ಅನ್ಯರ ತೋಟದಲಿ ಬೆವರು ಬಸಿದೆ
ನನಗೆ ಮಾತು ಕಲಿಸಿದ ಮಾಣಿಕ್ಯ ನನಗೆ ನೀತಿ ಹೇಳಿದ ಚಾಣಕ್ಯ
ನನಗೆ ಸತ್ಯದ ಅರಿವು ತೋರಿಸಿದ ಗಾಂಧೀಜಿ
ಸರಳತೆ ವಿನಯ ಕಲಿಸಿದ ಶಾಸ್ತ್ರೀಜಿ
ಮುತ್ತು ಯ.ವಡ್ಡರ
ಶಿಕ್ಷಕರು
ಬಾಗಲಕೋಟ
9845568484