ತುಂಡುಬಟ್ಟೆಯಲಿ ತೂಕದ ವ್ಯಕ್ತಿತ್ವ
- Advertisement -
ಸ್ವಾತಂತ್ರ್ಯವೆಂಬ ಸುಂದರ ಕಡಲೊಳು
ತೇಲಿ ಬರುತಿದೆ ಗಾಂಧಿ ನೆನಪು
ಲೋಕಪ್ರಿಯ ಇವರು ರಾಷ್ಟ್ರಪಿತರು
ಭಾರತಾಂಬೆಯ ಶ್ರೇಷ್ಠ ಸುತರು
ಶಿಕ್ಷಣ ಸತ್ಯಾಗ್ರಹ ಗಂಟೆ ಜಾಗಟೆಯಿಂದ
ಸತ್ತಂತಿಹರನು
ಬಡಿದೆಬ್ಬಿಸಿದವರು
ಕೊಬ್ಬಿದ ವಿದೇಶಿಯರ ಸೊಕ್ಕಡಗಿಸಿ
ದಾಸ್ಯದ ಸಂಕೋಲೆಗೆ ಮುಕ್ತಿ ನೀಡಿದವರು….
ಲೋಕಪ್ರಿಯರು ರಾಷ್ಟ್ರಪಿತರು
ತನ್ನ ಬದುಕಿನ ಕಂದರ ಲೆಕ್ಕಿಸದೇ
ಮನೆ ಮನಗಳ ಬಡಿದೆಬ್ಬಿಸಿದವರು
ಭಾರತಾಂಬೆಯ ನಿಜದಿ ಬಿಡುಗಡೆಗೊಳಿಸಿ
ತ್ಯಾಗದ ಮೂಟೆಯ ಹೊತ್ತು ನಿಂತವರು….
- Advertisement -
ದಮನಿತರ ಕಣ್ಣೀರಿಗೆ ಕರಗಿದ ರಾಷ್ಟ್ರಪಿತ
ಅಧಿಕಾರ ಅಂತಸ್ತನ್ನು ದೂರ ತಳ್ಳಿದ ನಿಜಸುತ
ತುಂಡು ಬಟ್ಟೆಯಲ್ಲಿ ತೂಕದ ವ್ಯಕ್ತಿ ತ್ವ…
ನಿನಗಾರು ಸರಿ ತಾತ
ಅಹಿಂಸೆಯೇ ನಿನ್ನ ಪರಮ ತತ್ವ
ಸತ್ಯ ಶಾಂತಿ ತ್ಯಾಗ ಮೂರ್ತಿ
ಜಗದ ತುಂಬ ನಿನ್ನ ಕೀರ್ತಿ
ಬಂದೊಮ್ಮೆ ನೋಡು
ಭರತ ಭೂಮಿಯ ಪಾಡು
ನೀ ತಂದ ಸ್ವಾತಂತ್ರ್ಯ ಸ್ವೇಚ್ಛೆಯಾಗಿರಲು
ಮತ್ತೊಮ್ಮೆ ಬಾ ನೀ ಚಾಟಿ ಬೀಸಲು….
ಶ್ರೀಮತಿ ಮೀನಾಕ್ಷಿ ಸೂಡಿ
ಕಿತ್ತೂರ