spot_img
spot_img

ಕವನ: ರೈಲು ನಿಲ್ದಾಣದಲ್ಲಿ…

Must Read

- Advertisement -

ರೈಲು ನಿಲ್ದಾಣದಲ್ಲಿ

ತುಂಟ ನಿಹಾಲ್ ನನ್ನು ಇಂದು

ರೈಲು ನಿಲ್ದಾಣಕ್ಕೆ ಕರೆದೊಯ್ದಾಗ 

ಅವ ಕೇಳಿದ ಪ್ರಶ್ನೆಗೆ ಸುಸ್ತೋ ಸುಸ್ತು! 

- Advertisement -

ದಾರಿಯಲ್ಲಿ ಸಿಕ್ಕ ಕುದುರೆ ಟಾಂಗಾ 

ನೋಡಿ ಕುದುರೆಯನ್ನು ಮುಟ್ಟಿದ್ದೇ ಮುಟ್ಟಿದ್ದು!

ಆ ಖುಷಿ ಕುದುರೆ ಮಾಲೀಕನಿಗೂ ಸಿಕ್ಕಿದೆಯೋ ಇಲ್ಲವೋ ದೇವನೇ ಬಲ್ಲ ! 

- Advertisement -

ಅವನಿಗಂತೂ ಖುಷಿಯಾಗಿತ್ತು. 

ಆಗ ನನಗನಿಸಿದ್ದು 

ಚಿಕ್ಕ ಚಿಕ್ಕ ಸಂಗತಿಗಳು ನೀಡುವ ಖುಷಿ

ಕೋಟಿ ಕೋಟಿ ಕೊಟ್ಟು ಖರೀದಿಸುವ ವಸ್ತುವಿನಲ್ಲಿಲ್ಲವಲ್ಲಾ ಎಂದು!

ನಿಲ್ದಾಣ ಪ್ರವೇಶಿಸಿದಾಗ ಅವ ಕೇಳಿದ ಪ್ರಶ್ನೆ

 ಮಾಮಾ ,

ರೈಲು ಇಲ್ಲಿ ಏಕೆ ನಿಂತಿದೆ? 

ಜೀವನ ಪಯಣವೆಂಬ ರೈಲಿನಲಿ 

ಚಲಿಸುತ್ತಿರುವ ನಮ್ಮ ಜೀವನವು 

ಒಮ್ಮೆ ನಿಲ್ಲುತ್ತದೆ ಪುಟ್ಟಾ! 

ಹಾಗಾಗಿ ಅದು ತನ್ನ ಕೆಲಸ ಮುಗಿಸಿ ನಿಂತಿದೆ  ಎಂದೆ. 

ನಿಮಿಷ ಕಳೆಯುವಷ್ಟರಲ್ಲಿ 

ಅಂವಾ ರೈಲು ಇನ್ನೂ 

ಯಾಕೆ ಬರಲಿಲ್ಲ ಮಾಮಾ ?  

ಎಂದು ಕೇಳಿದ.

ಜೀವನ ಪಯಣವೆಂಬ ರೈಲಿನಲಿ 

ಕೆಲವೊಮ್ಮೆ ನಮ್ಮ ಭಾಗ್ಯದಲ್ಲಿಲ್ಲದ ವಸ್ತುಗಳ 

ನಿರೀಕ್ಷೆಯಲ್ಲಿದ್ದಾಗ 

ಅವು ಬಾರದೇ ಹೋದಾಗ 

ನಮ್ಮ ರೈಲು ಬಂದಿಲ್ಲವೆಂದೇ ತಿಳಿಯಬೇಕು !

ಸಮಯ ಬಂದಾಗ 

ನಮ್ಮ ಬದುಕಿನ

ರೈಲು ಬಂದೇ ಬರುತ್ತದೆ 

ಅದಕಾಗಿ ಕಾಯಬೇಕು ಎಂಬ ತತ್ವ ತಿಳಿಸಿದೆ.

ಸದ್ದುಗದ್ದಲದ ನಡುವಿನ ಅವನ   

ನಿಲ್ದಾಣದಲ್ಲಿನ ಓಡಾಟ 

ನನ್ನ ಬದುಕೆಂಬ ರೈಲಿನ ಓಡಾಟಕ್ಕೆ 

ಬೆಳಕ ತೋರಿಸಿತು.


ಪ್ರೊ. ಶಿವಕುಮಾರ ಕೋಡಿಹಾಳ, ಮೂಡಲಗಿ

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group