ಬೈಲಹೊಂಗಲ: ಕವಿತೆ ಎಂದರೆ ಹೃದಯ ಅರಳಿಸುವ ನವಿರಾದ ಭಾವ ಎಂದು ಬೆಂಗಳೂರಿನ ಕ್ರೆಸ್ಟ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಶಿವಾನಂದ ಟವಳಿ ಹೇಳಿದರು.
ಕರ್ನಾಟಕ ಸಂಭ್ರಮ 50 ಹಾಗೂ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಘೋಷಣೆ ನಿಮಿತ್ತವಾಗಿ ಕನ್ನಡ ಸಾಹಿತ್ಯ ಪರಿಷತ್ತು ಬೈಲಹೊಂಗಲ ತಾಲೂಕು ಘಟಕ ಹಾಗೂ ಗ್ಲೋಬಲ್ ವುಮನ್ರೈಸ್ ಫೌಂಡೇಶನ್, ಬೆಂಗಳೂರು ಇವರ ಸಹಯೋಗದಲ್ಲಿ ಪಟ್ಟಣದ ಚನ್ನಮ್ಮ ರಸ್ತೆಯಲ್ಲಿರುವ ಗಣಾಚಾರಿ ಮಹಾವಿದ್ಯಾಲಯದಲ್ಲಿ ರವಿವಾರ ನಡೆದ ರಾಜ್ಯಮಟ್ಟದ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾವ್ಯದ ಆಳ, ವಿಸ್ತಾರ ಅವರವರ ಭಾವಕ್ಕೆ ಅನುಗುಣವಾಗಿ ವಿಭಿನ್ನವಾಗಿರುತ್ತದೆ. ಮಣ್ಣಿನ ಸತ್ವ ಹೀರಿದ ಮಾವಿನ ಮರ ಸಿಹಿ ಹಣ್ಣು ನೀಡುವಂತೆ ಓದುಗರು ಖುಷಿಯಿಂದ ಆಸ್ವಾದಿಸುವ ಕಾವ್ಯವನ್ನು ಕವಿಗಳು ರಚನೆ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು. ಕವಿತೆ ಎಂದರೇನು ಎನ್ನುವುದಕ್ಕೆ ನಾನಾ ರೀತಿಯ ವ್ಯಾಖ್ಯಾನಗಳಿದ್ದು ಭಾಷೆ ಮತ್ತು ಭಾವಗಳ ಸಮಾಗಮದಿಂದ ಅರ್ಥಗರ್ಭಿತ ಸಾಲುಗಳು ಮಾತ್ರ ಸರ್ವಕಾಲಕ್ಕೂ ಸಲ್ಲುತ್ತವೆ ಎಂದು ಅವರು ಹೇಳಿದರು.
ಆಶಯ ನುಡಿಗಳನ್ನಾಡಿದ ಬೈಲಹೊಂಗಲ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಅವರು ಕವಿ ಆತ್ಮಶೋಧನೆ ಮಾಡಿಕೊಳ್ಳುತ್ತ ಜೀವನದ ಅನುಭವಗಳನ್ನು ವಿಶಿಷ್ಟ ರೀತಿಯಲ್ಲಿ ದಾಖಲು ಮಾಡುವುದನ್ನು ಕಲಿತರೆ ಉತ್ತಮ ಸಾಹಿತ್ಯ ಸೃಷ್ಟಿಯಾಗುತ್ತದೆ ಎಂದರು.
ಮಾನವೀಯತೆ ಕವಿತೆಯ ಮೂಲ ಆಶಯವಾಗಬೇಕು. ಕವಿಗಳು ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಬೆಂಗಳೂರಿನ ಗ್ಲೋಬಲ್ ವುಮೇನ್ರೈಸ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಡಾ. ಮನ್ಮತಯ್ಯ ಸ್ವಾಮಿ ಮಾತನಾಡಿ ರಾಜ್ಯದ ವಿವಿಧೆಡೆಯಿಂದ ಅತ್ಯಂತ ಉತ್ಸಾಹದಿಂದ ಕವಿಗೋಷ್ಠಿಗೆ ಆಗಮಿಸಿದ ಕವಿಗಳ ಸಾಹಿತ್ಯ ಪ್ರೀತಿ ಮೆಚ್ಚುವಂತದ್ದು ಎಂದರು.
ಕನ್ನಡ ನಾಡು ನುಡಿಗೆ ಎಲ್ಲರೂ ಮುಕ್ತ ಮನಸ್ಸಿನಿಂದ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು. ಬೆಂಗಳೂರಿನ ಗ್ಲೋಬಲ್ ವುಮೇನ್ರೈಸ್ ಫೌಂಡೇಶನ್ ಕಾರ್ಯದರ್ಶಿಗಳಾದ ಮಿಥುನ ಹುಗ್ಗಿ ಮಾತನಾಡಿ 12 ನೆಯ ಶತಮಾನದ ವಚನಗಳು ಕನ್ನಡ ಸಾಹಿತ್ಯನ್ನು ಮತ್ತಷ್ಟು ಶ್ರೀಮಂತಗೊಳಿಸಿವೆ. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ಹೆಮ್ಮೆಯ ಸಂಗತಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಂಗಲಾ ಶ್ರೀಶೈಲ ಮೆಡಗುಡ್ಡ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಹಿತ್ಯ ಪರಿಷತ್ತು ಸದಾ ಕನ್ನಡವನ್ನು ಕಟ್ಟುವ ಕೆಲಸ ಮಾಡುತ್ತಿದ್ದು ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಸಾಕಷ್ಟು ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದೆ ಎಂದರು. ಕವಿಗಳಿಂದ ಇನ್ನೂ ಶ್ರೇಷ್ಠಮಟ್ಟದ ಸಾಹಿತ್ಯ ರಚನೆ ಆಗಲಿ ಎಂದು ಅವರು ಹಾರೈಸಿದರು. ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾವಿಷಯತ್ ಸದಸ್ಯರಾದ ಡಾ. ಚಂದ್ರಶೇಖರ ಬಿ. ಗಣಾಚಾರಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಬೆಳಗಾವಿ ಜಿಲ್ಲಾಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಶಂಕರ ಸಾಗರ, ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಸಂಗಮೇಶ ಖನ್ನಿನಾಯ್ಕರ, ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದ ಕಾರ್ಯ ನಿರ್ವಾಹಕ ಸಮಿತಿ ಸದಸ್ಯರಾದ ಗುರು ಮೆಟಗುಡ್ಡ, ಜಾಗತಿಕ ಲಿಂಗಾಯತ ಮಹಾಸಭೆಯ ಬೈಲಹೊಂಗಲ ನಗರ ಘಟಕದ ಅಧ್ಯಕ್ಷರಾದ ಮಹೇಶ ಕೋಟಗಿ ಅವರನ್ನು ಸನ್ಮಾನಿಸಲಾಯಿತು.
ರಾಜ್ಯದ ವಿವಿಧ ಭಾಗಗಳಿಂದ 70 ಕ್ಕೂ ಹೆಚ್ಚು ಕವಿಗಳು ಭಾಗವಹಿಸಿದ್ದರು. ಪ್ರೇಮಕ್ಕ ಅಂಗಡಿ, ಡಾ. ನಾಗೇಂದ್ರ ಚಲವಾದಿ, ಡಾ. ಮಲ್ಲಿಕಾರ್ಜುನ ಛಬ್ಬಿ, ಡಾ. ದಿಗಂಬರ ದತ್ತಾತ್ರೇಯ ಕುಲಕರ್ಣಿ, ಡಾ. ಡಿ. ಪ್ರಾನ್ಸಿಸ್ ಕ್ಸೇವಿಯರ್, ಚಂದ್ರಶೇಖರ ಕೊಪ್ಪದ, ಬಸವಣ್ಣೆಪ್ಪ ಕಾದ್ರೊಳ್ಳಿ, ಅನ್ನಪೂರ್ಣ ಆರ್. ಕನೋಜ, ಪ್ರಕಾಶ ಮರಿತಮ್ಮನವರ, ಶಿಶಿರ ರಮೇಶ ಪಾಟೀಲ, ಬಸವರಾಜ ಕಳಕಪ್ಪ ವಾರಿ, ಪುರಂದರ ಮಲಕರಿಮೆಕ್ಕಳಿಕೆ, ಕಿರಣ ಗಣಾಚಾರಿ, ಟಿ.ಜಿ.ಯಂ ಸುಲೋಚನ, ಮುತ್ತುರಾಜು ಚಿನ್ನಹಳ್ಳಿ, ಜವಾಹರ ಧ. ಕನ್ನೂರ, ಮಹಾಂತೇಶ ಮಲ್ಲಪ್ಪ ರಾಜಗೋಳಿ, ಸಿ.ವಾಯ್. ಮೆಣಸಿನಕಾಯಿ, ಗಿರೆಪ್ಪ ಶೆಟ್ಟೆಪ್ಪ ಬೊಂಬ್ರಿ, ಉದಯಚಂದ್ರ ದಿಂಡವಾರ, ಭಾರತಿ ಗುರುಶಿದ್ದಯ್ಯ ಕಿತ್ತೂರಮಠ, ಸಿದ್ದಪ್ಪ ಗೊಡಚಿ, ಶ್ರೀಶೈಲ ಕಂಬಾರ, ಗಿರಿಜಾದೇವಿ ಮ. ಗಂಜಿಹಾಳ, ನಾಗಯ್ಯ ಈಶ್ವರಯ್ಯ ಹುಲೆಪ್ಪನವರಮಠ, ಸಾವಿತ್ರಿ ಮಹೇಶ್ವರ ಹೊತ್ತಿಗಿಮಠ, ಜ್ಯೋತಿ ಸಿ.ಎಂ, ರಮೇಶ ಕೆ.ಎನ್, ವೀರನಗೌಡ ವಿ.ಸರನಾಡಗೌಡ್ರ, ದಾನಮ್ಮ ಅಂಗಡಿ, ಶಿವಾನಂದ ಬಸನಾಯ್ಕ ಪಟ್ಟಿಹಾಳ, ಶ್ರೀಶೈಲ್ ಹೆಬ್ಬಳ್ಳಿ, ನೇಹಾ ಶ್ರೀನಿವಾಸ ಬಡಿಗೇರ, ಪುಷ್ಪಾ ದುಂ. ಖನ್ನಿನಾಯ್ಕರ, ಆನಂದ ಹಕ್ಕೆನ್ನವರ, ಬಿ.ವಿ.ಪತ್ತಾರ, ಎ.ಎಸ್.ಗಡದವರ, ಸಂತೋಷ ಬಸವರಾಜ ಸಂಗೊಳ್ಳಿ, ಗೋದಾವರಿ ಎಸ್. ಪಾಟೀಲ, ರೂಪರಾಣಿ ಪಟಗಾರ, ಕಿರಣ ಯಲಿಗಾರ, ಶೈಲಜಾ ಎಂ. ಕೋರಿಶೆಟ್ಟರ, ಮಲ್ಲಿಕಾರ್ಜುನ ಬಿರಾದಾರ, ಕಲ್ಲಪ್ಪ ಬಾ. ಹರಿಜನ, ಕಲ್ಪನಾ ಎಸ್. ಪಾಟೀಲ, ಗೊಮೆಧಿಕಾ ಎ.ಎಂ, ಸಂಗೀತಾ ಸಕ್ರೆಣ್ಣವರ, ವಾಯ್.ಕೆ. ಕೊಣ್ಣೂರ, ಜಯಶ್ರೀ ವಾಲಿಶೆಟ್ಟರ, ಮಲ್ಲಿಕಾರ್ಜುನ ಕುರಿ, ದಾನಯ್ಯ ಹಿರೇಮಠ, ಗೌರಿ ವೈ. ಮೇಳೇದ, ಅಮರಗುಂಡಪ್ಪ ಹೂಗಾರ, ಬಸಪ್ಪ ಹೊಳೆಪ್ಪ ಶೀಗಿಹಳ್ಳಿ, ಬಾಹುಬಲಿ ಉಪಾಧ್ಯೆ, ಶೃತಿ ನಾ. ಕುದರಿಮೋತಿ, ಜ್ಯೋತಿ ಎಂ. ಚಿನಗುಂಡಿ, ಶಂಕರಬಾಯಿ ಕ. ನಿಂಬಾಳಕರ, ರವಿ ದಂಡಗಿ, ಆನಂದ ಯಲ್ಲಪ್ಪ ಕೊಂಡಗುರಿ, ಚನ್ನಬಸಯ್ಯ ಕೋಳಿವಾಡ, ಬಸಯ್ಯ ಚಿಕ್ಕಮಠ, ಅಬ್ಬಾರ, ಆನಂದ ಕುಲಕರ್ಣಿ, ಚಂದ್ರಶೇಖರ ಚನ್ನಂಗಿ ಕವಿ-ಕವಯತ್ರಿಯರು ಕವನ ವಾಚಿಸಿದರು.
ಕಾರ್ಯಕ್ರಮದಲ್ಲಿ ಕವಿಗಳು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಅಮಜವ್ವ ಬೋವಿ ಕನ್ನಡ ಗೀತೆಗಳನ್ನು ಹಾಡಿದರು. ಕಸಾಪ ಗೌರವ ಕಾರ್ಯದರ್ಶಿಗಳಾದ ಮಂಜುಳಾ ಶೆಟ್ಟರ ಸ್ವಾಗತಿಸಿದರು. ಶಿಕ್ಷಕಿ ಪಿ.ಜಿ. ಖೇಮಲಾಪುರೆ ಪ್ರಾರ್ಥಿಸಿದರು. ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರಾದ ಸಂತೋಷ ಪಾಟೀಲ ನಿರೂಪಿಸಿದರು. ರಾಜು ಹಕ್ಕಿ ವಂದಿಸಿದರು.