spot_img
spot_img

ಕವನ: ಬುದ್ಧ ಪೂರ್ಣಿಮೆ

Must Read

- Advertisement -

ಬುದ್ಧ ಪೂರ್ಣಿಮೆ

ಆಸೆ ಗಳಿಗಾಗಿ ಬದುಕಲ್ಲ
ಆದರ್ಶಕ್ಕಾಗಿ ಬದುಕು
ಶಾಂತಿ ಸಂದೇಶ ಸಾರಿದ
ಭಗವಾನ್ ಬುದ್ಧ ನಮ್ಮ ಆದರ್ಶ

ಸಾವಿರ ಯುದ್ಧಗಳ ಗೆಲ್ಲುವ
ಮೊದಲು ನಿಮ್ಮ ನೀವು ಗೆಲ್ಲಿ
ನಿಮ್ಮ ಬಳಿ ಇರುವುದರ ಪ್ರೀತಿಸಿ
ಇರದುದರೆಡೆಗೆ ಚಿಂತಿಸಿ ಫಲವಿಲ್ಲ ಸಂದೇಶ ನಮಗೆ ಪ್ರೇರಕ

- Advertisement -

ಕೆಳಗೆಕುಳಿತ ವ್ಯಕ್ತಿ ಎಂದೂ
ಬೀಳಲಾರ
ನಾನೇ ಶ್ರೇಷ್ಠ ಎನ್ನುವ ಅಹಂಕಾರ ಬೇಡವೆನುತ
ಆತ್ಮವಿಶ್ವಾಸದ ಪ್ರತೀಕ

ಶಾಂತಿ ಕರುಣೆ ಅಹಿಂಸಾ ಜೀವನ ನಮ್ಮದಾಗಲಿ
ದ್ವೇಷ ಅಸೂಯೆ ಅಳಿಯಲಿ
ಹುಟ್ಟು ಸಾವಿನ ನಡುವೆ ಇರಲಿ ಪ್ರೀತಿ
ದುಃಖ ಶಾಶ್ವತವಲ್ಲ ಪ್ರೀತಿ ಅಮರ

ಬುದ್ಧ ನುಡಿಗಳೆಮಗೆ ದಾರಿದೀಪ
ಅನುದಿನದ ಪಾಲಿಸುತ ಅವನ ಆದರ್ಶ
ಬುದ್ಧ ಪೂರ್ಣಿಮೆ ಸಾರ್ಥಕಗೊಳಿಸೋಣ
ಶಾಂತಿ ಅಹಿಂಸಾ ಜೀವನ ಸಂದೇಶ ಸಾರೋಣ

- Advertisement -

ನಂದಿನಿ ಸನಬಾಳ್

(ಯುವ ಕವಯತ್ರಿ ನಂದಿನಿ ಸನಬಾಳ್ ಅವರ ಕವನ ಬುದ್ಧ ಪೂರ್ಣಿಮೆ ಗೆ ರೇಖಾಚಿತ್ರವನ್ನು ನೀಡಿದ ಶಿಕ್ಷಕಿ ರೇಖಾ ಮೊರಬ ಅಣ್ಣಿಗೇರಿ)

- Advertisement -
- Advertisement -

Latest News

ಸಾವಿಲ್ಲದ ಶರಣರು -ಮಹಾ ದಾಸೋಹಿ ಎಲೆ ಮಲ್ಲಪ್ಪ ಶೆಟ್ಟರು

ಎಲೆ ಮಲ್ಲಪ್ಪ ಶೆಟ್ಟರ ಅವರ ಹಿರಿಯರು ಚಿಕ್ಕಮಗಳೂರಿನ ಹತ್ತಿರ ನಂದಿಹಳ್ಳಿ ಗ್ರಾಮದವರು. ರಾಜ ಮಹಾರಾಜರಿಗೆ ಸಮಾರಂಭ ಗಳಲ್ಲಿ ವೀಳ್ಯವನ್ನು ಸರಬರಾಜು ಮಾಡುವ ಕಾಯಕದವರು. ಶರಣ ಸಂಸ್ಕೃತಿಯ...
- Advertisement -

More Articles Like This

- Advertisement -
close
error: Content is protected !!
Join WhatsApp Group