spot_img
spot_img

ಕವನ: ಕನ್ನಡಾಭಿಮಾನ

Must Read

ಕನ್ನಡಾಭಿಮಾನ

ಕನ್ನಡಾಂಬೆಯ ಮಡಿಲಲಿ ಜನಿಸಿದ ನಾನು
ಕನ್ನಡಾಂಬೆಗೆ ನಮಿಸುವೆನು.
ಕನ್ನಡ ತಾಯಿಯ ಸೇವೆಯ ಮಾಡಿ ಕರುನಾಡಿನೆಳ್ಗೆಯನು
ಬಯಸುವೆನು.
ಕನ್ನಡ ಭಾಷೆಯ ಪ್ರೀತಿಸುವೆನು
ಕನ್ನಡ ಕವಿತೆಯ ಬರೆಯುವೆನು.
ದೇಶ ವಿದೇಶದಿ ಕನ್ನಡ ಕೀರ್ತಿ ಹರಡುವೆನು.
ಶ್ರೀಗoಧದ ಸ್ನಾನವ ಮಾಡುವೆನು.
ಸುಗಂಧವ ಎಲ್ಲೆಡೆ ಸೂಸುವೆನು
ಕನ್ನಡ ಕವಿಗಳಿಗೆ ವಂದಿಸುವೆನು.
ಶಕ್ತಿಮಾತೆಯ ಸ್ಮರಿಸುವೆನು.
ಕನ್ನಡ ಮಕ್ಕಳು ನಾವಿನ್ನು ಎನ್ನುತ ಸಕಲೆಡೆ ಸಾರುವೆನು.
ಕಾವೇರಿ ನೀರನು ಕುಡಿಯುವೆನು.
ಕನ್ನಡ ಮಣ್ಣಲಿ ಪವಡಿಸುವೆನು
ಉಸಿರುಸಿರು ಕನ್ನಡ ಎನ್ನುವೆನು
ಸಿರಿಗನ್ನಡಕಾಗೆ ದುಡಿಯುವೆನು.
ಸಿರಿಗನ್ನಡಕಾಗೆ ಮಡಿಯುವೆನು.
ಉಸಿರಾಗಲಿ ಕನ್ನಡ ಎನ್ನುವೆನು
ಹಸಿರಾಗಲಿ ಕನ್ನಡ ಎಂದು ಬಯಸುವೆನು.
ಅರ್ಪಿಸುವೆನಿ ಈ ಕವನವನು
ಕನ್ನಡ ಮಾತೆಗೆ ತೋರಿಸಿ ಹೆಮ್ಮೆಯನು


ಉಮಾದೇವಿ.ಯು. ತೋಟಗಿ ಸ. ಶಿ ಸ. ಕ. ಹಿ. ಪ್ರಾ. ಶಾ. ರಾಮಾಪುರ
ತಾ ಸವದತ್ತಿ

- Advertisement -
- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!