spot_img
spot_img

ಕವನ: ಅಕ್ಷಯದ ರಕ್ಷೆಯಾಗಲಿ ಈ ರಕ್ಷಾಬಂಧನ

Must Read

ಅಕ್ಷಯದ ರಕ್ಷೆಯಾಗಲಿ ಈ ರಕ್ಷಾಬಂಧನ

ಭ್ರಾತೃತ್ವ ಭಾವವ ಹೃದಯಾಂತರಾಳದಲಿ ತುಂಬಿ
ಪ್ರೀತಿ ವಾತ್ಸಲ್ಯ ನಂಬಿಕೆಗಳ ಬೆಸೆದು
ಸಹೋದರತ್ವ ಸಂಬಂಧಗಳ ಹುರಿಗೊಳಿಸುವ
ಜಗದ ಸ್ತ್ರೀತ್ವದ ರಕ್ಷಾಕವಚ ಪುರುಷ ಸಂಬಂಧ ಈ ರಕ್ಷಾಬಂಧನ//೧//

ಅಕ್ಷಯವಾಗದ ಪ್ರೀತಿಯ ಹೃದಯಮಂದಿರದಿ ನೆಲೆಗೊಳಿಸಿ
ಆರದ ಜ್ಯೋತಿಯ ಆರತಿಯ ಬೆಳಕಿನಲಿ ತಿಲಕಧರಿಸಿ
ಯತ್ರ ನಾರೀ ಪೂಜ್ಯಂತೆ ರಮಂತೆ ಎಂಬುದನರಿವ
ಸ್ತ್ರೀ ಕುಲಗೌರವ ಭದ್ರತೆ ಕೋರುವುದೀ ರಕ್ಷಾಬಂಧನ//೨//

ಢಾಂಬಿಕತೆ ಒಡಮೂಡದಿರಲಿ ರಕ್ಷೆಯಲಿ
ಭಾವಾಂತರಂಗದಲ್ಲಿ ಭ್ರಾತೃತ್ವ ಭಾವತುಂಬಿರಲಿ
ಸ್ತ್ರೀ ತಾಯಿ ಸಹೋದರಿ ಎಂಬ ಮನೋಭಾವದಲಿ
ರಕ್ಷಾಬಂಧನದ ಸುಸಂಬಂಧಕೆ ಅಗಾಧವರ್ಥವಿರಲಿ//೩//

ಜಗವ ತುಂಬಿ ತುಂಬಿತುಳುಕುತಿಹ ಅತ್ಯಾಚಾರ ಕೊನೆಗೊಳ್ಳಲಿ
ಕಾಮುಕ ದೃಷ್ಟಿಯಿಂದ ಗಂಡುಜಾತಿಯ ವಿಮುಕ್ತಗೊಳಿಸಲಿ
ಇವಳೆಮ್ಮಕ್ಕ ತಂಗಿಯೆಂಬ ಅಕ್ಕರತೆ ಸದಾ ಮನದಿ ಹರಿಯಲಿ//೪//

ಸಹೋದರ ಶ್ರೀರಕ್ಷೆಯಿಂದ ಸಬಲೆ ಇವಳೆಂದೆಂದಿಗೂ
ಸ್ತ್ರೀ ಪೂಜ್ಯ ಮನೋಭಾವದ ಪ್ರೀತಿ-ವಾತ್ಸಲ್ಯದ ಕಂಗಳು ತೆರೆಯಲಿ
ಅಚಾತುರ್ಯಗಳಿಲ್ಲದ ಸ್ವಸ್ಥಸಮಾಜ ರಚನೆಗೊಳ್ಳಲಿ
ಸಾರ್ಥಕಗೊಳ್ಳಲಿ ಈ ರಕ್ಷಾ ಬಂಧನದ ಸುದಿನ//೫//

ಭ್ರಾತೃತ್ವ ಭಾವ ಬೆಸೆಯುವ ಸುಮಧುರ ಸಂಗಮ
ವರುಷ ವರುಷಕೂ ಹುರಿಗೊಳ್ಳುತಿರಲಿ ಭಾವಗಳ ಬಂಧನ
ಪ್ರೀತಿ-ಸ್ನೇಹದೊಳು ಕಂಗೊಳಿಸಲಿ ಮನೆಯಂಗಣದ ತೋರಣ//೬//


ಶ್ರೀಮತಿ ಗಿರಿಜಾ ಹಿರೇಮಠ

- Advertisement -
- Advertisement -

Latest News

ಕೆನಡಾ ಮೇಯರ್ ಗೆ  ಭಾರತದ ಸಂವಿಧಾನದ ಪ್ರತಿ

ಸದ್ಯ ಕೆನಡಾ ಪ್ರವಾಸದಲ್ಲಿರುವ ಹಿರಿಯ ಸಾಹಿತಿ , ಸಂಶೋಧಕ ಬೆಂಗಳೂರಿನ ಡಾ.ಕೆ.ಜಿ.ಲಕ್ಷ್ಮೀನಾರಾಯಣಪ್ಪರವರು ಇತ್ತೀಚೆಗೆ ಕೆನಡಾದ ಎಡ್ಮಾಟನ್ ನಗರದ ಮೇಯರ್ ಕಚೇರಿಯ ಸಭಾಂಗಣದಲ್ಲಿ ಅಲ್ಲಿನ ಪ್ರಥಮ ಪ್ರಜೆ ಚೆರಿಯಲ್...
- Advertisement -

More Articles Like This

- Advertisement -
close
error: Content is protected !!