spot_img
spot_img

ಕವನ: ನಮಿಪೆ ಗಣಪ

Must Read

ನಮಿಪೆ ಗಣಪ

ಣೇಶ ನಿನ್ನಯ ಬರುವಿಕೆಯಿಂದ
ಸಂತಸ ಸಂಭ್ರಮ ಮನೆ ತುಂಬ||

ಗಾಯನ ಲಹರಿಯ ಹರಿಸುತ ಎಲ್ಲ
ಸಿಹಿಯನು ಸವಿಯುತಿಹರು ಮೆಲ್ಲ||

ಗಿಟುಕು ಕೊಬ್ಬರಿಗೆ ಬೆಲ್ಲವ ಸೇರಿಸಿ
ಮೋದಕ ತಯಾರಿ ನಡೆಸಿಹವು ಕೂಡಿ||

ಗೀತ ಪ್ರಿಯ ನೀ ಗಣಪತಿರಾಯ
ಶಿರವನು ಬಾಗಿಸಿ ಮುಗಿವೆನು ಕೈಯ್ಯ||

ಗುಡಿಯೊಳು ನೀ ಪ್ರಥಮ ಪೂಜಿತನು
ದೇವ ದೇವತೆಗಳಿಗೆ ಗಣನಾಯಕನು||

ಗೂಡನು ಕಟ್ಟುವ ಮುನ್ನದಿ ನಾವು
ಕಷ್ಟ ನಿವಾರಿಸೆಂದು ಬೇಡುವೆವು||

ಗೆಲುವಿಗೆ ಕಾರಣ ಕರ್ತನು ನೀನು
ಜಯವನು ನಿನ್ನಲಿ ಬೇಡುವೆವು||

ಗೇಣು ಬಟ್ಟೆಗೆ ಪರದಾಟವು ಇರೆ
ನಿಲ್ಲಿಸು ನಮ್ಮಯ ಅಲೆದಾಟಾ||

ಗೈವೆವು ಆದರದಿ ಸ್ವಾಗತವನು
ಅನುದಿನ ನಿನ್ನನು ಪೂಜಿಪೆವು||

ಗೊಣಗಾಟವನು ದೂರೀಕರಿಸುವ
ವಿಘ್ನೇಶ್ವರ ಹೇ ವಿನಾಯಕನೇ ||

ಗೋಕರ್ಣದಲಿ ವಟುವಿನ ವೇಷದಿ
ಆತ್ಮ ಲಿಂಗವ ಹಿಂಪಡೆದವನೆ||

ಗೌರಿ ತನಯ ಗಜವದನನು ನೀ
ಹೇ ಲಂಬೋದರ ಹರಿಸೆಮ್ಮನು||

ಗಂಧ ಧೂಪಾರತಿ ಬೆಳಗುತ ನಾವು
ರಾಗದಿ ಮಂಗಲ ಹಾಡುವೆವು||

ಗಃಹ ಗಃಹ ನಕ್ಕ ಚಂದಿರನನ್ನು
ಕ್ಷಮಿಸಿ ಬಿಡೆಂದು ಬೇಡುವೆವು||


ರಚನೆ ಶ್ರೀಮತಿ ಜ್ಯೋತಿ ಕೋಟಗಿ
ಬಿ ಆರ್ ಪಿ ಚನ್ನಮ್ಮನ ಕಿತ್ತೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!