spot_img
spot_img

ಕವನ: ಶರಣು ಗುರುವೆ ಶರಣು

Must Read

spot_img

ಶರಣು ಗುರುವೆ ಶರಣು

ರಣು ಗುರುವೆ ಶರಣು ನಿನಗೆ
ರಣು ದೇವನಿಗಿಂತ ಮಿಗಿಲಾದವಗೆ

ಶಾಕಿಣಿಯರ ಆಟಮಾಟ ಸುಳ್ಳೆಂದು
ಶಾಲೆಯನ್ನು ದೇವ ಮಂದಿರ ಮಾಡಿದವಗೆ

ಶಿಲೆಯಲ್ಲಿ ಕಲೆಯನು ಅರಳಿಸಿ
ಶಿಖರದೆತ್ತರಕೆ ನಮ್ಮ ಬೆಳಸಿದಾತಗೆ

ಶೀಲ ಮಾಡದಿರಿ ಎಂದು ತಿಳಿಹೇಳಿ
ಶೀಲ ಸುಶೀಲ ಸಂಸ್ಕಾರ ನೀಡಿದಾತಗೆ

ಶುದ್ಧ ಭಾವಗಳ ಮೂಡಿಸಿದ
ಶುಭ್ರ ಮನದ ದೇವ ಮಾನವಗೆ

ಶೂನ್ಯವೀ ಜಗತ್ತು ಎಂದ್ಹೇಳಿ
ಶೂನ್ಯದ ಬೆಲೆಯ ತಿಳಿಸಿದಾತಗೆ

ಶೃಂಖಲೆಯಿಂದ ನಮ್ಮ ಬಿಡಿಸಿ
ಶೃಂಗಾರಗೊಳಿಸಿ ಆನಂದಿಸಿದವಗೆ

ಶೆಲೆ ಇಲ್ಲವಾದರೆ ನಾವೆಲ್ಲಿ
ಶೆಲೆ ನೀನು ನಮಗೆಲ್ಲ ಪ್ರಭುವೇ

ಶೇಷಧರನು ಕರ ಮುಗಿದ ನಿನಗೆ
ಶೇಷಶಯನನೂ ಶಿರ ಬಾಗಿದಾತಗೆ

ಶೈತ್ಯೋಪಚಾರ ಮಾಡುವೆ ನಿನಗೆ
ಶೈಕ್ಷಣಿಕ ಲೋಕದ ಹೆಮ್ಮೆಯ ದಿಗ್ಗಜಗೆ

ಶೊತ್ತಿಯ ಜ್ಞಾನವಿದ್ದರೂ
ಶೊತ್ರದಾಸೆ ಇಲ್ಲದವನಿಗೆ

ಶೋಷಿತರನ್ನು ಹುರಿದುಂಬಿಸಿ
ಶೋಧನೆ ಮಾಡಿ ಜಯ ತಂದವಗೆ

ಶೌರ್ಯ ಪರಾಕ್ರಮಗಳ ಕಲಿಸಿ
ಶೌರಿಯನ್ನಾಗಿ ಮಾಡಿದಾತಗೆ

ಶಂಕರ ರೂಪಣೆ ನೀನಾಗಿ
ಶಂಖನಾದ ಮೊಳಗಿಸಿದಾತಗೆ

ಶರಣು ಗುರುವೆ ಶರಣು ನಿನಗೆ


ರಚನೆ ಶ್ರೀಮತಿ ಜ್ಯೋತಿ ಕೋಟಗಿ
ಬಿ ಆರ್ ಪಿ ಚನ್ನಮ್ಮನ ಕಿತ್ತೂರ

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!