spot_img
spot_img

ಕವನ: ಶ್ರೀ ಗಣೇಶ

Must Read

ಶ್ರೀ ಗಣೇಶ

ಭಾದ್ರಪದ ಶುಕ್ಲಪಕ್ಷ ಚೌತಿಯ ಹಬ್ಬ
ಭಾರತೀಯ ವೈಭವ ಸಂಸ್ಕೃತಿಯ ಪ್ರತೀಕ
ಭೂಲೋಕಕ್ಕೆ ವೈಕುಂಠದಿಂದಿಳಿದ ಶ್ರೀ ಗಣೇಶ
ಮನೆ ಮನಗಳಲ್ಲೆಲ್ಲ ವೃದ್ಧಿಸಿ ಸಂತಸ ಸಡಗರ//

ಡೊಳ್ಳುಕುಣಿತ ತಾಳ ಮೇಳಗಳಿಂದಾಗಮನ
ಓಣಿ ಓಣಿಯೆಲ್ಲ ವರ್ಣರಂಜಿತ ತೋರಣ
ಗಲ್ಲಿಗಲ್ಲಿಗೂ ಗಣಪನಿಗೆ ವಿಧ ವಿಧ ಒಪ್ಪ ಓರಣ
ವರುಷ ವರುಷಕ್ಕೂ ಸಂಭ್ರಮದ ಸಮಾಗಮ//

ವಿಘ್ನನಿವಾರಕ ಇಷ್ಟಾರ್ಥ ಪರಿಪೂರಕ
ಸಕಲಸಿದ್ಧಿ ಎಲ್ಲೆಲ್ಲೂ ಸಮೃದ್ಧಿ ದ್ಯೋತಕ
ಸರ್ವ ಸನ್ಮಂಗಳ ನೀವ ಶ್ರೀ ಗಣಪ
ಗೌರೀಸುತ ಶ್ರೀ ಸಿದ್ಧಿವಿನಾಯಕ ದೇವಸುತ//

ಏಕದಂತ ವಕ್ರತುಂಡ ಸದಾ ಮೊಗದಿ ಮಂದಹಾಸ
ಮೋದಕಪ್ರಿಯ ಲಂಬೋದರನೇ ಲೋಕಪ್ರಿಯ
ಅವಿರ್ಭಾವ ಮಂಗಳಕರ ಪ್ರಥಮ ಪೂಜಿತ
ನಿನ್ನಿಂದಲೇ ಜಗವೆಲ್ಲ ಇಂದು ಸಂತಸಸಾಗರ//

ಜ್ಞಾನ, ಬುದ್ಧಿ, ಸಮೃದ್ಧಿ, ಸಿದ್ಧಿಗಳ ಒಡನಾಡಿ
ತಿಂಡಿಪೋತ, ತರ್ಲೆತುಂಟ, ಜಾಣರ ಜಾಣ
ಸಿದ್ಧಿಪ್ರದಾಯಕ ಮುದ್ದು ಶ್ರೀ ಗಣಪ
ವ್ಯಾಸವಿರಚಿತ ಮಹಾಭಾರತ ಗ್ರಂಥ ಲಿಪಿಕಾರ
ಶ್ರೀಗಣೇಶ ನಿನಗೆ ಕೋಟಿ ಕೋಟಿ ನಮನ//


ಶ್ರೀಮತಿ ಗಿರಿಜಾ ಹಿರೇಮಠ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!