ಸಂಗಾತಿ
________
ನನ್ನ ನಿನ್ನ
ಬೆಸೆದವರು
ಅಲ್ಲ ಅಪ್ಪ ಅಮ್ಮ
ಬಂಧು ಬಳಗ
ಮೇಲಿರುವ
ಯಜಮಾನ
ಭಾಷೆ ಬರೆದನು
ಕೂಡಿ ನಡೆಯಲು
ಅರಿತು ಬಾಳಲು
ಮನವ ಅರಿಯಲು
ಜೀವ ಜೀವಕೆ
ನೀನೆನಗೆ
ಸವಿ ಸಂಗಾತಿ
_________
ನಾನು ಬೇವು
_______________
ನಾನು ಬೇವು
ನೀನು ಬೆಲ್ಲ
ಕಳೆವ ಕ್ಷಣವೇ
ಯುಗ ಯುಗಾದಿ
ನೋವು ಮರೆತು
ನಗೆಯ ಹರಿಸಿ
ಬಿಸಿ ಅಪ್ಪುಗೆ
ನವರಾತ್ರಿ
ನೀನು ಎಣ್ಣೆ
ನಾನು ಬತ್ತಿ
ಪ್ರೀತಿ ಒಲವೇ
ದೀಪಾವಳಿ
ನೋವು ಮರೆತು
ನಗೆಯ ಹರಿಸಿ
ಸ್ನೇಹ ಒಲವು
ಸಂಕ್ರಾಂತಿ
ಮೈ ಮುರಿದು
ಹೊಲದಿ ದುಡಿವ
ನಮ್ಮ ಹೆಜ್ಜೆ
ನವರಾತ್ರಿ
ಹುಟ್ಟು ಸಂಭ್ರಮ
ಸಾವು ಸೂತಕ
ಬದುಕು ನಿತ್ಯ
ಮಹಾನವಮಿ
_____________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ