- Advertisement -
ನಿಲ್ಲದ ನಗೆ
ಚಿಕ್ಕವನಾಗಿದ್ದಾಗ
ಪ್ರಪಂಚ ನೋಡಿ
ಎಲ್ಲರೂ ನನ್ನವರೆಂದು
ಸಂತೋಷದಿಂದ
ನಗು ನಗುತ್ತಿದ್ದೆ,
ವಯಸ್ಸಾದಂತೆ
ಸಮಾಜದ ಎಲ್ಲರೂ
ಆಸ್ತಿ,ಅಂತಸ್ತು, ಸ್ವಾರ್ಥಗಳ
ಬೇಲಿ ಹಾಕಿಕೊಂಡಿದ್ದ ನೋಡಿ
ವಿಷಾದದ ನಗು ನಗಲಾರಂಭಿಸಿದೆ
ಅದೇಕೋ ಏನೋ
ಇನ್ನೂ ನಗು ನಿಲ್ಲಿಸಲಾಗಿಲ್ಲ,
ನಂಗೊಂದು ಹೆದರಿಕೆ
ನಾನೂ ಸಹ ನಗೆ ನಿಲ್ಲಿಸದ
ಲಾಫಿಂಗ್ ಬುದ್ಧ
ಆಗಿ ಬಿಡುತ್ತೇನೋ ಅಂತ..
ವಾಸ್ತವ
- Advertisement -
ಬಾಯಲ್ಲಿ ಜೇನುತುಪ್ಪ ಸುರಿಸುತ್ತಾ
ಹೃದಯದಲ್ಲಿ ವಿಷ ಹರಿಸುವ
ಕಾರ್ಕೋಟಕ ಮನುಜರ ಕಂಡಾಗ
ಪರೋಪಕಾರ ಮಾಡಲೂ ಹೇಸಿಗೆ..
ನೋವಿನ ತುತ್ತತುದಿಯಲ್ಲಿ
ಎಲ್ಲೋ ಬೆಳಕು ಕಾಣಿಸಿದಾಗ,
ಮಾಡಿದ ಸೇವೆಗೆ ಯಾರೋ ಸಹೃದಯರು
ಆತ್ಮಪೂರ್ವಕ ಮೆಚ್ಚುಗೆ ನೀಡಿದಾಗ,
ಮತ್ತೆ ಕತ್ತಲಿಗೆ ಬೆಳಕು ಕಾಣಿಸುವ ಹಂಬಲ..
ಡಾ.ಭೇರ್ಯ ರಾಮಕುಮಾರ್, ಮೈಸೂರು