Homeಕವನಕವನಗಳು : ಶಶಿಕಾಂತ ಪಟ್ಟಣ

ಕವನಗಳು : ಶಶಿಕಾಂತ ಪಟ್ಟಣ

ನೀನು ನಾನು
_________________

ನೀನು ನಾನು
ನಾನು ನೀನು
ದೈವ ಬೆಸೆದ
ಜಾಲವು

ಹೃದಯ ಭಾಷೆ
ಅರಿವ ಮನಕೆ
ಪ್ರೀತಿ ಬೆರಸಿದ
ಭಾವವು

ನೋವು ಮರೆತು
ನಗುವ ಕಲೆಗೆ
ಕಣ್ಣು ಬೆರೆತ
ನೋಟವು

ದೂರ ಗುರಿಯ
ಹೆಜ್ಜೆ ಪಯಣದಿ
ಕೂಡಿ ಹಾಡುವ
ರಾಗವು

ಕಷ್ಟ ಸುಖಕೆ
ದಾರಿ ಹುಡುಕುವ
ನಮ್ಮ ಬಾಳ
ಬಟ್ಟೆಯು

ಯಾರಿರದ ಹಾದಿಯಲಿ
_____________________
ನಿನ್ನ ಮುಗುಳು ನಗೆ
ಸರಳ ಭಾವ
ಜೀವ ಜಾಲದ
ಬಂಧನ

ಕಲ್ಪನೆಯ ಬೆನ್ನೇರಿ,
ಕನಸುಗಳ ಲೋಕದಿ
ಬಣ್ಣದ ಬದುಕು
ನಾನು ಬದುಕಲಾರೆ

ಮನಸಿಗೆ ಹಿತ
ನಿನ್ನ ಮಧುರ ಮಾತು
ಕೊರೆವ ಚಳಿಯಲ್ಲಿ
ಬಿಸಿ ಅಪ್ಪುಗೆ ಸುಖ

ಬಾ ಹೋಗೋಣ
ನಾನು ನೀನು
ಯಾರಿರದ ಹಾದಿಯಲಿ
ಸ್ನೇಹ ಪ್ರೀತಿಯ ಹಂಚಿ
______________________
ಡಾ. ಶಶಿಕಾಂತ ಪಟ್ಟಣ ರಾಮದುರ್ಗ

RELATED ARTICLES

Most Popular

error: Content is protected !!
Join WhatsApp Group