ಕವನ: ಹೆಮ್ಮೆ ಪಡು ಭಾರತೀಯ ಮನವೆ

Must Read

 

ಹೆಮ್ಮೆ ಪಡು ಭಾರತೀಯ ಮನವೆ

ಹೆಮ್ಮೆ ಪಡು ಭಾರತೀಯ ಮನವೆ

ಸ್ವಾಭಿಮಾನದ ಸೌಧ 

ತಲೆಯೆತ್ತಿದೆಯೆಂದು !

ಕರ್ತವ್ಯ ಪಥದಲ್ಲಿಂದು

ಭಾರತ ಮುನ್ನಡೆಯುತ್ತಿದೆಯೆಂದು !

ತಳ್ಳಿ ಬಿಡು 

ಒಣ ಪೂರ್ವಗ್ರಹವ

ಜೋತು ಬಿದ್ದ ಆ ‘ಮನು’ ಮನದ

ಬಿಳಲಿನಿಂದ ಕೆಳಗಿಳಿ

ಹೆಮ್ಮೆ ಪಡು ಇಂದಾದರೂ ಭಾರತ ವಿಶ್ವಗುರುವಾಗಿದೆಯೆಂದು !

ಬಿಟ್ಟು ಬಿಡು ಜಾತ್ಯತೀತತೆಯೆಂಬ 

ನಾಟಕವ

ಕಣ್ದೆರೆ, ಎದೆ ಮುಟ್ಟಿಕೋ

ತಟ್ಟಿ ಕೋ ಸ್ವ- ಹೃದಯವ

ಆತ್ಮ ವಂಚನೆಯನ್ನು ಬಿಸುಟು

ಪ್ರಶ್ನಿಸಿಕೋ ನಿನ್ನ ನೀನು

ನಿಜವಾಗಲೂ ನೀ ಜಾತ್ಯತೀತನೆ….ಎಂದು !

ಈ ಸೌಧವಿದು ಆತ್ಮಾಭಿಮಾನದ ಸೌಧ

ಭಾರತವ ತಲೆಯೆತ್ತಿ ನಿಲ್ಲಿಸಿದ ಸೌಧ

ಪ್ರಾಮಾಣಿಕ, ದೇಶಪ್ರೇಮಿಯೊಬ್ಬನ ಕನಸಿನ ಸೌಧ

ಇನ್ನಾದರೂ ತೊರೆದು ಬಿಡು

ನೆಪದ ನೆಟಿಗೆಗಳ,

 ಹುಸಿ ದೇಶಭಕ್ತಿಯ,

ಮನಬಿಚ್ಚಿ ಆಸ್ವಾದಿಸು,

ಗರ್ವ ಪಡು,

ಎದೆಯುಬ್ಬಿಸಿ ನಿಂತು

ಹೆಮ್ಮೆ ಪಡು ಭಾರತೀಯ ಮನವೇ

ಇದು ನನ್ನ ಸೌಧವೆಂದು !


ಉಮೇಶ ಬೆಳಕೂಡ, ಮೂಡಲಗಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group