ಕವನ: ನಮಿಪೆ ಗಣಪ

Must Read

ನಮಿಪೆ ಗಣಪ

ಣೇಶ ನಿನ್ನಯ ಬರುವಿಕೆಯಿಂದ
ಸಂತಸ ಸಂಭ್ರಮ ಮನೆ ತುಂಬ ||

ಗಾ ಯನ ಲಹರಿಯ ಹರಿಸುತ ಎಲ್ಲ
ಸಿಹಿಯನು ಸವಿಯುತಿಹರು ಮೆಲ್ಲ ||

ಗಿ ಟುಕು ಕೊಬ್ಬರಿಗೆ ಬೆಲ್ಲವ ಸೇರಿಸಿ
ಮೋದಕ ತಯಾರಿ ನಡೆಸಿಹೆವು ||

ಗೀ ತ ಪ್ರೀಯ ನೀ ಗಣಪತಿರಾಯ
ಶಿರವನು ಬಾಗಿಸಿ ಮುಗಿವೆವು ಕೈಯ ||

ಗು ಡಿಯೊಳು ನೀನೇ ಪ್ರಥಮ ಪೂಜಿತನು
ದೇವ ದೇವತೆಗಳ ನಾಯಕನು ||

ಗೂ ಡನು ಕಟ್ಟುವ ಮುನ್ನದಿ ನಾವು
ಕಷ್ಟನಿವಾರಿಸೆ ಬೇಡುವೆವು ||

ಗೆ ಲುವಿನ ಕಾರಣ ಕರ್ತನೆ ನೀನು
ಜಯವನು ನಿನ್ನಲಿ ಬೇಡುವೆವು ||

ಗೇ ಣು ಬಟ್ಟೆಗೆ ಪರದಾಟವು ಇರೆ
ನಿಲ್ಲಿಸು ನಮ್ಮಯ ಅಲೆದಾಟ ||

ಗೈ ವೆವು ಆದರದಾ ಸ್ವಾಗತವನು
ಅನುದಿನ ಗಣಪನ ಪೂಜಿಪೆವು ||

ಗೊ ಣಗಾಟವನು ದೂರೀಕರಿಸುವ
ವಿಘ್ನ ವಿನಾಶಕ ಆಗಿರುವೆ ||

ಗೋ ಕರ್ಣದಲಿ ವಟುವಿನ ವೇಷದಿ
ಆತ್ಮಲಿಂಗವನು ಹಿಂಪಡೆದೆ ||

ಗೌ ರಿತನಯ ಗಜವದನನು ನೀ
ಹೇ ಲಂಬೋದರ ಹರಿಸೆಮ್ಮ ||

ಗಂ ಧಧೂಪಾರತಿ ಬೆಳಗುತ ನಾವು
ರಾಗದಿ ಮಂಗಲ ಹಾಡುವೆವು ||

ಗಃ ಹ ಗಃಹ ನಕ್ಕಾ ಚಂದಿರನನ್ನು
ಕ್ಷಮಿಸಿ ಬಿಡೆಂದು ಬೇಡುವೆವು ||


ಶ್ರೀಮತಿ ಜ್ಯೋತಿ ಕೋಟಗಿ
ಶಿಕ್ಷಕಿ ಸ ಮಾ ಪ್ರಾ ಶಾಲೆ ತಲ್ಲೂರ.

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...

More Articles Like This

error: Content is protected !!
Join WhatsApp Group