spot_img
spot_img

ಕವನ: ಏಕೋ ನೆನಪಾದರು ಇವರು…

Must Read

spot_img

ಏಕೋ ನೆನಪಾದರು ಇವರು…

ನಿನ್ನೆ ಮೊನ್ನೆಯತನಕ
ನಮ್ಮೊಂದಿಗಿದ್ದವರು
ಒಮ್ಮೆಲೇ ಎದ್ದು
ಹೊರಟುಬಿಟ್ಟರು
ಹೊರಗೆ ಹೋಗುವಾಗೆಲ್ಲ
“ಬಾರೋ ದೋಸ್ತ” ಎಂದು
ಕರೆದೊಯ್ಯುತ್ತಿದ್ದವರು
ಈಸಲ ಯಾರನ್ನೂ ಕರೆಯಲೇ ಇಲ್ಲ,

ಏನೇನೋ ತಲೆಯಲ್ಲಿ ತುಂಬಿಕೊಂಡು
ಎಲ್ಲವನ್ನೂ ಮಾಡುತ್ತೇನೆ ಎಂದು ಹೊರಟು
ಅರ್ಧಕ್ಕೇ ಬಿಟ್ಟು
ಮತ್ತೇನೋ ನೆನಪಾಗಿ
ಇನ್ನೊಂದಕ್ಕೆ ಕೈಹಾಕಿ
ಅದೂ ಬೇಸರವಾಗಿ
ಮತ್ತೊಂದಕ್ಕೆ ನೆಗೆದು
ಕನ್ಫ್ಯೂಸ್ ಮಾಡುತ್ತಿದ್ದವರು

ಒಂದು ಕಡೆ ಪ್ರೀತಿಯಿಂದ
ಬಯ್ಯುತ್ತಲೇ
ಮತ್ತೊಂದು ಕಡೆ ಚಾ ಕುಡಿಸಿ
ಇನ್ನೊಂದು ಕಡೆ ತಿಂಡಿ ಕೊಡಿಸಿ
ಹತ್ತಿಪ್ಪತ್ತು ಕೆಲಸಗಳ
ನೆನಪು ಮಾಡಿಕೊಳ್ಳುತ್ತ
ಬಿರುಗಾಳಿಯಂತೆ ಎತ್ತೆತ್ತಲೋ
ಸುತ್ತಿ ಸುಳಿದು ಮತ್ತೆ
ಹಸಿರು ಕ್ರಾಂತಿಯಲಿ ಕುಳಿತು
ಯೋಜನೆಗಳ ರೂಪಿಸುತ್ತಿದ್ದ
ನಮ್ಮ ಪ್ರೀತಿಯ  “ದೋಸ್ತ”
ಈಗೆಲ್ಲೂ ಕಾಣಿಸುತ್ತಿಲ್ಲ..
ಕಂಡರೆ ಹೇಳಿ…
ಮತ್ತೆ ಮತ್ತೆ ನೆನಪಾಗುತ್ತಾರೆ

ಹೋಗುವ ಮುನ್ನ ಹೇಳಿಯಾದರೂ
ಹೋಗಬಾರದಿತ್ತೇ
ಎಲ್ಲಿಗೆ ಹೋಗುತ್ತೀಯೆಂದು
ದೋಸ್ತ ?


ಎಲ್. ಎಸ್. ಶಾಸ್ತ್ರಿ

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!