ಕವನ: ಹೊಟ್ಟೆ ಪಾಡು

Must Read

ಹೊಟ್ಟೆ ಪಾಡು

ಹೊಟ್ಟೆಯ ಹಸಿವನು | ಶಮನವ ಮಾಡಲು
ಚಿಂದಿಯ ಆಯುವ | ಕೆಲಸವ ಹಿಡಿದೆ
ನಿನ್ನನು ನೋಡಿ | ಕಲಿಯಲೆ ಬೇಕು
ಸ್ವಾಭಿಮಾನದಿ | ಬದುಕಲು ಸಾಕು

ಬಾಗಿದ ಬೆನ್ನಿನ | ಮೇಲಿದೆ ಹೊರೆಯು
ಬಾಳ ಬಂಡೆಯಾ | ಬವಣೆಯ ಭಾರವು
ಜೀವನ ಸಾಗಿಸೆ | ದೇಹಕೆ ಶಕ್ತಿಯ
ತುಂಬಲು ಬೇಕಿದೆ | ತುತ್ತು ಅನ್ನವು

ನೆರೆತ ಕೂದಲು | ಸೊರಗಿದ ದೇಹ
ಆದರೂ ದುಡಿದೇ | ತಿನ್ನುವ ಹಂಬಲ
ಮಿಥ್ಯದಿ ಗಳಿಸಲು | ಇಲ್ಲ ವ್ಯಾಮೋಹ
ಮೆಚ್ಚಿದೆ ತಾಯಿ | ನಿನ್ನ ಮನೋಬಲ

ಹೆಜ್ಜೆ ಹೆಜ್ಜೆಗೂ | ಮಿಥ್ಯವ ನುಡಿದು
ಗಳಿಸುವರಲ್ಲ | ಪರರನು ಹೊಡೆದು
ಭಿಕ್ಷೆಯ ಬೇಡದ | ಧ್ಯೇಯ ನಿನ್ನದು
ನಿನಗೆ ನಮಿಸುವಾ | ಬಯಕೆ ನನ್ನದು

ದುಡಿಯದೇ ತಿನ್ನುವ | ಜನರಿಗೆ ಮಾದರಿ
ಕಾಯಕ ನಂಬಿಹ | ಯೋಗಿಯು ನೀನು
ಚಿಂದಿಯಾರಿಸುವ | ಕೆಲಸವೆ ಆದರು
ಸಾರುತಲಿರುವೆ | ದುಡಿಮೆ ಘನತೆಯ


ಶ್ರೀಮತಿ ಜ್ಯೋತಿ ಕೋಟಗಿ
ಶಿಕ್ಷಕಿ ಸ ಮಾ ಪ್ರಾ ಶಾಲೆ ತಲ್ಲೂರ

Latest News

ಶ್ರೇಷ್ಠ ಜಾನಪದ ಸಂಶೋಧಕ ಡಾ ದೇವೇಂದ್ರ ಕುಮಾರ ಹಕಾರಿ

ಅಪ್ಪಟ ದೇಸಿ ಪ್ರಜ್ಞೆಯ ಒಬ್ಬ ಶ್ರೇಷ್ಠ ಜಾನಪದ ಸಂಶೋಧಕ ಕಲಾವಿದ ಲೋಕಗೀತೆ ರಂಗಗೀತೆಗಳನ್ನು ಹೊಸ ದಾಟಿ ಶೈಲಿಯಲ್ಲಿ ರಚಿಸಿ ನಾಟಕ ಅನುವಾದ ವಿಮರ್ಶೆ ಹೀಗೆ ಕನ್ನಡ...

More Articles Like This

error: Content is protected !!
Join WhatsApp Group