spot_img
spot_img

‘ಕಲ್ಪನಾ ಛಾಯೆಯಲಿ…’ ಕವನ ಸಂಕಲನವು ವಾಸ್ತವತೆಯನ್ನು ಪ್ರತಿಬಿಂಬಿಸುವಂತಿದೆ – ಅರವಿಂದ ಜತ್ತಿ

Must Read

ಬೆಳಗಾವಿ: ಕವಿತೆಗಳು ಬದುಕನ್ನು ಬದಲಿಸುವ ಶಕ್ತಿ ಹೊಂದಿವೆ. ಕಲ್ಪನಾ ಛಾಯೆಯಲಿ ಕವನ ಸಂಕಲನವು ವಾಸ್ತವತೆಯ ಪ್ರತಿಬಿಂಬದಂತಿದೆ ಎಂದು ಬೆಂಗಳೂರಿನ ಕೇಂದ್ರ ಬಸವ ಸಮಿತಿ ಅಧ್ಯಕ್ಷರಾದ ಅರವಿಂದ ಜತ್ತಿ ಹೇಳಿದರು.

ನಗರದ ಚನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ರವಿವಾರ ನಡೆದ ಇಟಗಿಯ ಕಿರಣ ಕ. ಗಣಾಚಾರಿ ಇವರ ‘ಕಲ್ಪನಾ ಛಾಯೆಯಲಿ…’ ಕವನ ಸಂಕಲನ ಲೋಕಾರ್ಪಣೆ ಹಾಗೂ ಸಂಭ್ರಮ ಫೌಂಡೇಶನ್ ಉದ್ಘಾಟನೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತಮ ಕಾವ್ಯದಿಂದ ಅಂತರಂಗ ಬಹಿರಂಗ ಶುದ್ದೀಕರಣವಾಗುತ್ತದೆ ಹಾಗೂ ವ್ಯಕ್ತಿತ್ವ ವಿಕಸನ ಹೊಂದಿ ಸಮಾಜ ಸುಧಾರಣೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಬಾಗಲಕೋಟೆಯ ಖ್ಯಾತ ಸಾಹಿತಿಗಳಾದ ಪ್ರಕಾಶ ಗ.ಖಾಡೆ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿ ಸಾಹಿತ್ಯ ಮನಸ್ಸಿಗೆ ಖುಷಿ ಕೊಡುವುದಲ್ಲದೆ ಜೀವನದ ಸಾರ್ಥಕತೆಗೆ ಸಾಕ್ಷಿಯಾಗುತ್ತದೆ ಎಂದು ಹೇಳಿದರು. ಮನದಾಳದ ಭಾವನೆಗಳನ್ನು ಸುಂದರ ಸಾಲುಗಳಲ್ಲಿ ಸೆರೆಹಿಡಿದು ಓದುಗರ ಹೃದಯಕ್ಕೆ ಮುಟ್ಟಿಸುವ ಕವಿಯ ತುಡಿತಕ್ಕೆ ಬೆಲೆ ಕಟ್ಟಲಾಗದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾದ ಪ್ರೊ. ಹೇಮಾವತಿ ಸೊನೊಳ್ಳಿ ಕೃತಿ ಪರಿಚಯ ಮಾಡುತ್ತ ಕಿರಣ ಕೆ.ಗಣಾಚಾರಿ ಅವರ ಚೊಚ್ಚಲ ಕವನ ಸಂಕಲನ ಕಲ್ಪನಾ ಛಾಯೆಯಲಿ ಉತ್ತಮ ಕವನಗಳನ್ನು ಒಳಗೊಂಡಿದ್ದು ಎಲ್ಲರೂ ಓದಲೇಬೇಕಾದ ಕೃತಿಯಾಗಿದೆ ಎಂದು ಹೇಳಿದರು. ಕೃತಿಯಲ್ಲಿ ಕವಿಗಳು ಬದುಕಿನ ವಿವಿಧ ಸ್ತರಗಳನ್ನು ಅತ್ಯಂತ ಮಾರ್ಮಿಕವಾಗಿ ವ್ಯಕ್ತಪಡಿಸಿದ್ದಾರೆ. ಅವರ ಕಾವ್ಯ ಪ್ರೌಢಿಮೆ, ಶೈಲಿ, ಪದಗಳ ಬಳಕೆ ಶ್ಲಾಘನೀಯವಾದದ್ದು ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿತ್ತಿನ ಜಿಲ್ಲಾಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಮಾತನಾಡಿ ಸಂಭ್ರಮ ಫೌಂಡೇಶನ್ ವತಿಯಿಂದ ಸಮಾಜಮುಖಿ ಕಾರ್ಯಗಳು ನಡೆಯಲಿ ಹಾಗೂ ಕನ್ನಡ ಸಾಹಿತ್ಯವನ್ನು ಇನ್ನಷ್ಟೂ ಶ್ರೀಮಂತಗೊಳಿಸುವಂತಹ ಕೆಲಸ ಆಗಲಿ ಎಂದು ಶುಭ ಹಾರೈಸಿದರು. ಕವಿ ಕಿರಣ ಕೆ.ಗಣಾಚಾರಿ ಮಾತನಾಡಿ ಬಾಲ್ಯದ ದಿನಗಳಲ್ಲಿ ಮೂಡಿದ ಭಾವನೆಗಳನ್ನು ಹಾಳೆಗಳಲ್ಲಿ ಗೀಚುತ್ತಿದ್ದ ನೆನಪು ಮನಸ್ಸಿಗೆ ಬಹಳ ಖುಷಿ ಕೊಡುತ್ತಿತ್ತು. ಸಾಹಿತ್ಯದ ಒಲವು ಬರೆಯಲು ಒತ್ತಾಯಿಸುತ್ತಿತ್ತು ಎಂದು ಹೇಳಿದರು. ಮೊದಲ ಕವನ ಸಂಕಲನ ಹೊರಬರಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ್ಡ ಮಾತನಾಡಿ ಸಾಹಿತ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವುದರ ಮೂಲಕ ಕನ್ನಡದ ಕಂಪನ್ನು ವಿಶ್ವದಾದ್ಯಂತ ಪಸರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಕಲ್ಲಪ್ಪ ವೀರಭದ್ರಪ್ಪ ಗಣಾಚಾರಿ, ಬಸವ್ವ ಕಲ್ಲಪ್ಪ ಗಣಾಚಾರಿ ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸಿದ್ದರು.

ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿಶ್ವ ಪರಿಸರ ದಿನದ ಅಂಗವಾಗಿ ಸಸಿಗೆ ನೀರೆರೆವ ಮೂಲಕ ಪರಿಸರ ಜಾಗೃತಿ ಸಂದೇಶವನ್ನು ನೀಡಲಾಯಿತು. ಅಶ್ವಿನಿ ಬಾಗನವರ, ಅನುರಾಧಾ ಬಾಗನವರ, ತಬಲಾ ವಾದಕರಾದ ಶರಣಪ್ಪ ಶೆಟ್ಟರ್, ಹಾರ್ಮೋನಿಯಂ ವಾದಕರಾದ ಮಂಜುನಾಥ ಸುಣಗಾರ ಅವರು ವಚನ ಗಾಯನ ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ವಿಜಯಶ್ರೀ ಗಂ. ಪಾಟೀಲ, ಕವಿಗಳ ಕುಟುಂಬಸ್ಥರು, ಸ್ನೇಹಿತರು, ಬಂಧುಗಳು, ಸಂಭ್ರಮ ಫೌಂಡೇಶನ್ ಪದಾಧಿಕಾರಿಗಳು ಹಾಗೂ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು. ವಿಜಯಲಕ್ಷ್ಮೀ ಗಣಾಚಾರಿ ಪ್ರಾರ್ಥಿಸಿದರು. ಎನ್.ಆರ್.ಠಕ್ಕಾಯಿ ನಿರೂಪಿಸಿದರು. ಡಾ. ಫಕೀರನಾಯ್ಕ ಗಡ್ಡಿಗೌಡರ ವಂದಿಸಿದರು.

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!