ಪ್ರಗತಿಯ ಪಥ
ಶಾಂತಿ ಅಹಿಂಸೆ ಬಲಿದಾನದ
ಪ್ರತೀಕ ನಮ್ಮ ಸ್ವಾತಂತ್ರ್ಯ
ಆಗಸ್ಟ್ 15 ನಮಗೆಲ್ಲ ಸಂತಸ
ಅಲ್ಲಿ ನೋಡು ಪ್ರಗತಿಯತ್ತ ಸಾಗುತ್ತಿದೆ ನನ್ನ ಭಾರತ.
ಬ್ರಿಟಿಷರ ಆಡಳಿತ
ದಬ್ಬಾಳಿಕೆ ನೋವು ತುಂಬಿ
ನಲಿವುಗಳ ದಿನ ಬರಲು ಹೋರಾಟದ ಹಾದಿ ನೆನೆಯಲು
ಪ್ರತಿ ಆಗಷ್ಟ್ 15 ಇತಿಹಾಸದ
ಪುನರವಲೋಕನ
ಈಗ ನೋಡು ವಿಶ್ವದೆಲ್ಲೆಡೆ
ಸಾಧನೆಗೈಯುತ್ತಿದೆ ನನ್ನ ಭಾರತ.
ವೀರ ಯೋಧರ ಸಾಧನೆ
ವೀರಾಧಿವೀರರನ್ನು ಹೊಂದಿದ ನನ್ನ ಭಾರತ
ಸಂಸ್ಕೃತಿಯಲ್ಲಿ ಸಂಸ್ಕಾರದಲ್ಲಿ
ಮಿಂದೆದ್ದ ನನ್ನ ಭಾರತ.
ಕ್ರಿಕೆಟ್ನಲ್ಲಿ ಮೊದಲ ಸ್ಥಾನ
ಪ್ಯಾರಲಿಂಪಿಕ್ನಲ್ಲಿ ಕೂಡ ಪ್ರಥಮ ನನ್ನ ಭಾರತ.
ಸೌಂದರ್ಯದ ಸೊಬಗು
ಸಹೃದಯಿಗಳ ಸಂಪತ್ತು ನನ್ನ ಭಾರತ.
ಸಿನೆಮಾರಂಗದಿಂದ ಚಂದ್ರಯಾನ
ಆಪತ್ತಿನಲ್ಲಿ ಸಿಲುಕಿದ ದೇಶಗಳಿಗೆ ಸಹಾಯಹಸ್ತ ನೀಡುತ್ತಿರುವ ನನ್ನ ಭಾರತ.
ವಿಶ್ವಕ್ಕೆ ಮಾದರಿ ವಿಶ್ವಗುರು
ಆದರ್ಶದ ಆಡಳಿತದ ಪ್ರತೀಕ
ನನ್ನ ಹೆಮ್ಮೆಯ ಭಾರತ
ಆಸ್ಕರ್ ಗೆದ್ದು ಬೀಗಿ,ಒಂದು ಕಾಲದಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿದ್ದ ಭಾರತ ಈಗ ವಿಶ್ವದ ದೊಡ್ಡಣ್ಣನಾಗುವತ್ತ ಸಾಗುತ್ತ ವಿಶ್ವಕ್ಕೆ ಸಲಹೆ ನೀಡುತ್ತ ವಿಶ್ವವ್ಯಾಪಿ ಕಂಪ್ಪು ಹರಡುತ್ತಿರುವ ನನ್ನ ಭಾರತ…
.ಬೋಲೋ ಭಾರತ್ ಮಾತಾಕಿ ಜೈ.
ವಂದೆ ಮಾತರಂ
ಅಖಂಡತೆಯ ಏಕತೆ
ಸೌಹಾರ್ದ ಬದುಕಿನ ಸಹಜತೆ
ದಿನ ನಿತ್ಯ ಬದುಕಿನ ಶಾಂತಿ ಸಹಬಾಳ್ವೆ ಸದಾ ಬರಲಿ
ಭಾರತ ಮಾತಾ ಕೀ ಜೈ
ನಂದಿನಿ ಸನಬಾಲ್, ಶಿಕ್ಷಕಿ, ಕಲಬುರಗಿ
ರೇಖಾಚಿತ್ರ:ರೇಖಾ ಮೊರಬ ಹುಬ್ಬಳ್ಳಿ