ಕವನ: ಸುಸಂಸ್ಕೃತಿಯ ದೇಶ ನಮ್ಮ ಭಾರತ

Must Read

ಸುಸಂಸ್ಕೃತಿಯ ದೇಶ ನಮ್ಮ ಭಾರತ

ನಮ್ಮ ಭಾರತದ ಸಂಸ್ಕೃತಿ
ಇತಿಹಾಸ ಪುಟದಲ್ಲಿ ಕೀರ್ತಿ
ಶಿಲಾಶಾಸನಗಳೇ ಸಂಕೇತ.

ಭಾಷೆಗಳು ಅನೇಕಾನೇಕ
ವೇಷಭೂಷಣಗಳು ಆಕರ್ಷಕ
ವಿವಿಧತೆಯಲ್ಲಿ ಏಕತೆ ಮನಮೋಹಕ

ಸಾಹಿತ್ಯ ಲೋಕದ ಸಾಗರ
ವಚನಗಳೇ ಸುವರ್ಣಭಂಡಾರ
ಕನ್ನಡ ಜ್ಞಾನಪೀಠವು ಭರಪೂರ

ಕ್ರೀಡಾಂಗಣದೊಳು ಸಾಧನೆ
ಭಾರತ ಪಡೆದಿದೆ ಮುಂಚೂಣಿ
ಕನಕ,ಕಂಚು ರಜತ ಪದಕವನ್ನೇ

ವಿಜ್ಞಾನಿ ಡಾ. ಅಬ್ದುಲ್ ಕಲಾಂ
ಜ್ಞಾನಿ ಸುಧಾಮೂರ್ತಿ ಮೇಡಂ
ವಿದ್ವತ್,ದೇಶ ಒಂದೇ ಮಾತರಂ

ದೇಶದ ಬೆನ್ನೆಲುಬು ರೈತ
ಸೈನಿಕ ದೇಶದ ಕಣ್ ಆತ
ವೀರ,ಧೀರರ ದೇಶ ಭಾರತ

ನಿಸರ್ಗ ಸಂಪನ್ಮೂಲದ ಗುಡಿ
ಹೊನ್ನು ರತ್ನ,ಶ್ರೀಗಂಧದ ಗುಡಿ
ಮತಬೇಡ, ಇರಿ ಒಂದುಗೂಡಿ

ಎಲ್ಲರಿಗಿರಲಿ ಹೆಮ್ಮೆಅಭಿಮಾನ
ಎಲ್ಲರಿಗಿರಲಿ ಭಾಷಾಭಿಮಾನ
ಎಲ್ಲರಿಗಿರಲಿ ರಾಷ್ಟ್ರಾಭಿಮಾನ


ಶ್ರೀಮತಿ ಪಾರ್ವತಿ ದೇವಿ. ಎಂ.ತುಪ್ಪದ ಬೆಳಗಾವಿ

Latest News

ಸಾಮೂಹಿಕ ಪ್ರಾರ್ಥನೆ ವಚನ ವಿಶ್ಲೇಷಣೆ ಕಾರ್ಯಕ್ರಮ

ಬೆಳಗಾವಿ - ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶ ನಗರ ಲಿಂಗಾಯತ ಸಂಘಟನೆ ಬೆಳಗಾವಿಯಲ್ಲಿ ದಿನಾಂಕ.09.11.2025ರಂದು ಸಾಮೂಹಿಕ ಪ್ರಾರ್ಥನೆ ವಚನ ವಿಶ್ಲೇಷಣೆ,...

More Articles Like This

error: Content is protected !!
Join WhatsApp Group