ಕವಿಗಳು ಸಾಮಾಜಿಕ‌ ಜವಾಬ್ದಾರಿ ಮೂಡಿಸಬೇಕು: ಡಾ.ಭೇರ್ಯ ರಾಮಕುಮಾರ್

Must Read

ಶಿಕ್ಷಕನ ವೃತ್ತಿಯಲ್ಲಿ ಅಧ್ಯಯನ, ಹೊಸ ಆಲೋಚನಾ ಕ್ರಮ, ಕ್ರಿಯಾಶೀಲ ಬೋಧನೆ ಅಗತ್ಯ – ಡಾ. ಅಣ್ಣಾಸಾಹೇಬ ಎಂ. ಗುರವ

ಸವದತ್ತಿ: ಆವಿಷ್ಕಾರ, ಸೃಜನಶೀಲತೆ ಮತ್ತು ಶಿಕ್ಷಣ ಈ ಇವುಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡಲು ಶಿಕ್ಷಕರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಠ್ಯವನ್ನು...

ಆದರ್ಶ ವಿದ್ಯಾಲಯದ ಪ್ರಕಟಣೆ

ಸಿಂದಗಿ: ಆದರ್ಶ ವಿದ್ಯಾಲಯಕ್ಕೆ 2021-22ನೇ ಸಾಲಿನ 6ನೇ ತರಗತಿಗೆ ದಾಖಲಾತಿ ಪಡೆಯಲು ನಡೆಸುವ ಪ್ರವೇಶ ಪರೀಕ್ಷೆಯು ಜುಲೈ 27 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ...

ಜಾನುವಾರು ವೈದ್ಯ ಸಿಬ್ಬಂದಿ ಒದಗಿಸಲು ಆಗ್ರಹ

ಸಿಂದಗಿ: ತಾಲೂಕಿನ ಗೋಲಗೇರಿ ಗ್ರಾಮದ ಪಶು ಆಸ್ಪತ್ರೆಗೆ ವೈದ್ಯಾಧಿಕಾರಿ ಸೇರಿದಂತೆ ಸಿಬ್ಬಂದಿ ನೇಮಕ ಮಾಡುವಂತೆ ಆಗ್ರಹಿಸಿ ಕರ್ನಾಟಕ ಟಿಪ್ಪು ಸುಲ್ತಾನ ಮಹಾವೇದಿಕೆ ಕಾರ್ಯಕರ್ತರು ಮತ್ತು ರೈತರು...

ಕವಿಗಳು ಸಾಮಾಜಿಕ ಪರಿವರ್ತನೆಯ ಹರಿಕಾರರು.ಈ ಹಿಂದೆ ನಡೆದ ರಷ್ಯಾ ಕ್ರಾಂತಿ,ಫ್ರಾನ್ಸ್ ಕ್ರಾಂತಿ, ಭಾರತದ ಸ್ವಾತಂತ್ರ್ಯ ಹೋರಾಟಗಳ ಮೇಲೆ ಕವಿಗಳ,ಲೇಖಕರ ಪ್ರಭಾವ ಅಪಾರ. ಗ್ರಾಮೀಣ ಪ್ರದೇಶಗಳ ಜನರು ರಚಿಸಿದ ಲಾವಣಿಗಳು ಸ್ವಾತಂತ್ರ್ಯ ಜಾಗೃತಿಗೆ ಕಾರಣವಾದವು ಎಂದು ಹಿರಿಯ ಸಾಹಿತಿ,ಪತ್ರಕರ್ತ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಡಾ.ಭೇರ್ಯ ರಾಮಕುಮಾರ್ ನುಡಿದರು.

ರಾಜ್ಯ ಬರಹಗಾರರ ಬಳಗವು ಇಂದು ಏರ್ಪಡಿಸಿದ್ದ ರಾಜ್ಯಮಟ್ಟದ ಅಂತರ್ಜಾಲ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಈ ಹಿಂದೆ ರಂಗಭೂಮಿ ನಾಟಕಗಳು, ಯಕ್ಷಗಾನ ಪ್ರಸಂಗಗಳು, ತೊಗಲು ಬೊಂಬೆಯಾಟಗಳು, ಲಾವಣಿಗಳು, ಜಾನಪದ ಗೀತೆಗಳು ಸಾಮಾಜಿಕ‌ ಜಾಗೃತಿ ಮೂಡಿಸುತ್ತಿದ್ದವು.

ಆದರೆ ಇತ್ತೀಚೆಗೆ ದೂರದರ್ಶನ ಚಾನೆಲ್‌ಗಳ ಧಾರವಾಹಿಗಳು ಹಾಗೂ ಮೊಬೈಲ್ ಹಾವಳಿಯಿಂದಾಗಿ ನಾಡು-ನುಡಿ, ಸಂಸ್ಕೃತಿ ವಿನಾಶದತ್ತ ಸಾಗಿದೆ. ಮಹಿಳೆಯರು ಟಿವಿ ಧಾರಾವಾಹಿಗಳಿಂದಾಗಿ, ಯುವಜನತೆ ಮೊಬೈಲ್ ಹಾವಳಿಯಿಂದಾಗಿ ಬಸವಳಿದಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಜವಾಬ್ದಾರಿ ಸಾಹಿತಿಗಳ ಮೇಲಿದೆ ಎಂದು ಕಿವಿಮಾತು ನುಡಿದರು.

- Advertisement -

ಸಮಾಜವನ್ನು ಕಾಡುತ್ತಿರುವ ಭ್ರಷ್ಟಾಚಾರ, ಜಾತೀಯತೆ, ಪರಿಸರ ನಾಶ, ವನ್ಯ ಪ್ರಾಣಿಗಳ ಬೇಟೆ,ವರದಕ್ಷಿಣೆ ಹಾವಳಿ, ಬಾಲಕಾರ್ಮಿಕರ ಸಮಸ್ಯೆ, ಬಾಲ್ಯವಿವಾಹ, ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ದ ಕವಿಗಳು ತಮ್ಮ ಕವನಗಳ ಮೂಲಕ ಜಾಗೃತಿ ಮೂಡಿಸಬೇಕು. ರಕ್ತದಾನ, ದೇಹದಾನ, ನೇತ್ರದಾನ, ಸ್ವಚ್ಛತೆ, ಪರಿಸರ ಸಂರಕ್ಷಣೆ ಕುರಿತಂತೆ ಕವಿಗಳು ತಮ್ಮ ಕಾವ್ಯ ರಚಿಸಬೇಕು‌ ಎಂದು ನುಡಿದರು.

ಕಳೆದ ಒಂದು ವರ್ಷದಿಂದಲೂ ರಾಷ್ಟ್ರದ ಜನರನ್ನು‌ ಕರೋನ ಕಾಯಿಲೆ ಕಾಡುತ್ತಿದೆ.ಇತ್ತೀಚಿಗೆ ಉಂಟಾದ ಎರಡನೇ ಅಲೆಯ ಸಂದರ್ಭದಲ್ಲಂತೂ ಸಾವು-ನೋವು ಅಪಾರವಾಗಿದೆ. ಗ್ರಾಮೀಣ ಜನರು ತತ್ತರಿಸಿದ್ದಾರೆ. ಇಂತಹ ಕಠೋರ ಸಂದರ್ಭದಲ್ಲಿ ಕವಿಗಳು ತಮ್ಮ ಕವನಗಳಲ್ಲಿ‌ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಪಾಡುವಿಕೆ, ಕೈ ತೊಳೆಯುವುದು ಮೊದಲಾದ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಡಾ.ಭೇರ್ಯ ರಾಮಕುಮಾರ್ ಕವಿಗಳಿಗೆ ಕಿವಿಮಾತು ನುಡಿದರು.
“ಜನರ ಹೃದಯ ಮುಟ್ಟುವಂತೆ,ಮನಸಿಗೆ ತಟ್ಟುವಂತೆ ಕವನ ಬರೆಯಿರಿ.ಆಗ ಮಾತ್ರ ನಿಮ್ಮ ಕಾವ್ಯ ರಚನೆ ಸಾರ್ಥಕವಾಗುತ್ತದೆ” ಎಂದವರು ಕರೆ ನೀಡಿದರು.

ಈ ಅಂತರ್ಜಾಲ ಕವಿ ಗೋಷ್ಠಿಯಲ್ಲಿ ಸುಮಾರು 24 ಕವಿಗಳು ಪಾಲ್ಗೊಂಡಿದ್ದರು.ಕರ್ನಾಟಕ ರಾಜ್ಯ ಬರಹಗಾರರ ಬಳಗದ ಅಧ್ಯಕ್ಷರಾದ ಮಧುನಾಯ್ಕ ಲಂಬಾಣಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಕವಿ ಕಾಯಕ ಯೋಗಿ ಫೌಂಡೇಶನ್ ನ ಅಧ್ಯಕ್ಷ ರಾದ ಎಂ.ಶಿವಕುಮಾರ್ ಹಾಗೂ ರಾಜ್ಯ ಬರಹಗಾರರ ಬಳಗದ ಉಪಾಧ್ಯಕ್ಷರಾದ ಖಂಡು ಬಜಾರ್ ಮುಖ್ಯ ಅತಿಥಿಗಳಾಗಿದ್ದರು. ರಾಜ್ಯ ಬರಹಗಾರರ ಬಳಗದ ಮೈಸೂರು ಜಿಲ್ಲಾ ಅಧ್ಯಕ್ಷರಾದ ಸುಹಾಸ್ ಎಂ.ಕನ್ನಾಯಕನಹಳ್ಳಿ ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿಕ್ಷಕನ ವೃತ್ತಿಯಲ್ಲಿ ಅಧ್ಯಯನ, ಹೊಸ ಆಲೋಚನಾ ಕ್ರಮ, ಕ್ರಿಯಾಶೀಲ ಬೋಧನೆ ಅಗತ್ಯ – ಡಾ. ಅಣ್ಣಾಸಾಹೇಬ ಎಂ. ಗುರವ

ಸವದತ್ತಿ: ಆವಿಷ್ಕಾರ, ಸೃಜನಶೀಲತೆ ಮತ್ತು ಶಿಕ್ಷಣ ಈ ಇವುಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡಲು ಶಿಕ್ಷಕರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಠ್ಯವನ್ನು...
- Advertisement -

More Articles Like This

- Advertisement -
close
error: Content is protected !!