spot_img
spot_img

ಹೋರಾಟಗಾರರ ಮೇಲೆ ಪೊಲೀಸ್ ದೌರ್ಜನ್ಯ

Must Read

spot_img
- Advertisement -

ಕರ್ನಾಟಕ ಆದಿ ಜಾಂಬವ ಜನಸಂಘದಿಂದ ಪ್ರತಿಭಟನೆ

ಸಿಂದಗಿ: ಇದೇ 11 ರಂದು ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ಒಳಮೀಸಲಾತಿ ಪರವಾಗಿ ಹೋರಾಟ ಮಾಡುತ್ತಿದ್ದ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಂಧನ ಮಾಡಿರುವ ನೀತಿಯನ್ನು ಖಂಡಿಸಿ ಕರ್ನಾಟಕ ಆದಿಜಾಂಬವ ಜನಸಂಘ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಗ್ರೇಡ್ ತಹಶೀಲ್ದಾರ ಪ್ರಕಾಶ ಸಿಂದಗಿ ಅವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ಸಮಯದಲ್ಲಿ ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಸಾಯಬಣ್ಣ ದೇವರಮನಿ  ಮಾತನಾಡಿ,  ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ  ವರದಿ ಅಂಗೀಕಾರದ ಬೇಡಿಕೆಗಾಗಿ ಕಳೆದ ನ. 28 ರಿಂದ ಹಾವೇರಿ ಜಿಲ್ಲೆಯ ಹರಿಹರ ತಾಲೂಕಿನ ಡಿ.ಎಸ್.ಎಸ್. ಸಂಘಟನೆಯ ಸಂಸ್ಥಾಪಕ ಪ್ರೊ. ಬಿ. ಕೃಷ್ಣಪ್ಪರವರ ಸಮಾಧಿಯಿಂದ ಬೆಂಗಳೂರಿನ ವರೆಗೆ ಸುಮಾರು 350 ಕಿ.ಮೀ.ಪಾದಯಾತ್ರೆಯ ಮುಖಾಂತರ ಕಾಲ್ನಡಿಗೆಯಿಂದ ಬಂದು ಬೆಂಗಳೂರಿನಲ್ಲಿ ಡಿ.11 ರಂದು ಶಾಂತಿಯುತ ಹೋರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಪೋಲಿಸ ಇಲಾಖೆ ಸಿಬ್ಬಂದಿಗಳು ನೆರೆದಿರುವ ಸುಮಾರು 20 ರಿಂದ 30 ಸಾವಿರ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ ಮಾಡಿ ಹಲವಾರು ಜನರನ್ನು ಗಾಯಗೊಳಿಸಿ ಚದುರಿಸುವ ಮುಖಾಂತರ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಯ ಪ್ರಮುಖ ಹೋರಟಗಾರರನ್ನು ಬಂಧಿಸಿ ಅವರ ಮೇಲೆ ಕೇಸನ್ನು ದಾಖಲಿಸಿದ್ದಾರೆ. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಕೈಗೊಂಡು ಹೋರಾಟಗಾರರ ಮೇಲೆ ದಾಖಲಾದ ಕೇಸನ್ನು ರದ್ದುಗೊಳಿಸಿ ನೊಂದ ಸಮುದಾಯಕ್ಕೆ ನ್ಯಾಯ ದೊರಕಿಸಿ ಕೊಡಬೇಕೆಂದು ರಾಜ್ಯಾದ್ಯಂತ ಮಾದಿಗ ಸಮುದಾಯದ ಜನರ ಆಶೋತ್ತರಗಳಿಗೆ ಅನುಗುಣವಾಗಿ ಈ ರಾಜ್ಯದ ಗೌರವಾನ್ವಿತ ಸ್ಥಾನದಲ್ಲಿರುವ ರಾಜ್ಯಪಾಲರು ಮಧ್ಯೆ ಪ್ರವೇಶಿಸಿ ಶೋಷಿತ ಸಮುದಾಯದ ನ್ಯಾಯಯುತ ಬೇಡಿಕೆಗೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದರು.

- Advertisement -

ಈ ಸಂದರ್ಭದಲ್ಲಿ ಮಲ್ಲೇಶಿ ಕೆರೂರ, ರಾಜು ಗುಬ್ಬೇವಾಡ, ಬೀಮು ರತ್ನಾಕರ, ಹರ್ಷವರ್ಧನ ಪೂಜಾರಿ ಸರಕಾರದ ವಿರುದ್ಧ ಮಾತನಾಡಿ ತೀವ್ರವಾಗಿ ಖಂಡಿಸಿದರು. ಏಕನಾಥ ದ್ವಾಶಾಳ, ರಾಯಪ್ಪ ಬಡಿಗೇರ, ಶರಣಪ್ಪ ಬೂದಿಹಾಳ, ಮಂಜುನಾಥ ದೊಡಮನಿ, ಹಣಮಂತ ಹೊಸಮನಿ, ಮುಖೇಶ ಬಡಿಗೇರ, ರಾಮು ವಗ್ಗರ, ಸಾಯಿನಾಥ ಕಟ್ಟಿಮನಿ, ಪ್ರದೀಪ ಶಂಬೇವಾಡ, ಸುನೀಲ ಶಂಬೇವಾಡ, ಮಲ್ಲಪ್ಪ ಜೇರಟಗಿ ಪ್ರತಿಭಟನೆ ನೇತೃತ್ವವಹಿಸಿದ್ದರು.

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group