spot_img
spot_img

ರಸ್ತೆ ಅಪಘಾತದಲ್ಲಿ ಪೊಲೀಸ್ ಕಾನ್ಸಟೇಬಲ್ ಕುಟುಂಬ ಬಲಿ

Must Read

ಹಸುಳೆಯನ್ನೂ ಬಲಿ ಪಡೆದ ಯಮರಾಜ

ಬೀದರ:ಇಡೀ ದೇಶ 75ನೇ ಆಜಾದಿ ಕಾ ಅಮೃತ ಮಹೋತ್ಸವದ ಆಚರಣೆಯ ಸಂಭ್ರಮದಲ್ಲಿ ಇದ್ದರೆ ಇತ್ತ ಈ ಕಾನ್ಸ್ಟೇಬಲ್ ಕುಟುಂಬದ ಕುರಿತಂತೆ ಯಮರಾಜನಿಗೆ ಬೇರೆಯದೇ ಯೋಚನೆ ಇದ್ದಂತಿತ್ತು.

ತಮ್ಮ ಎಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ ದೇವರ ದರ್ಶನಕ್ಕೆಂದು ಗಾಣಗಾಪುರಕ್ಕೆ ಹೋಗುವ ಸಂದರ್ಭದಲ್ಲಿ ಸಂಭವಿಸಿದ ಈ ದುರ್ಘಟನೆ ನೋಡಿದರೆ ಆ ದೇವರು ಎಷ್ಟು ಕ್ರೂರಿ ಎಂಬುದು ಅರಿವಾಗುತ್ತದೆ.

ಗಾಣಗಾಪುರಕ್ಕೆ ಹೋಗಿ ದೇವರ ದರ್ಶನ ಪಡೆಯುವ ಹಂಬಲದಲ್ಲಿದ್ದ ಕಾನ್ಸ್ಟೇಬಲ್ ಕುಟುಂಬದ ಎರ್ಟಿಗಾ ಕಾರಿಗೆ ಎಲ್ಲಿಂದಲೋ ಯಮರಾಜನಾಗಿ ಬಂದ ಕಂಟೇನರ್‌ ಲಾರಿ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ, ಐವರು ಗಂಭೀರವಾಗಿ ಗಾಯಗೊಂಡರು.ಅಪಘಾತದ ದೃಶ್ಯಗಳನ್ನು ನೋಡಿದ ಯಾರಿಗಾದರೂ ಭೀತಿ ಹುಟ್ಟುವಂತಿತ್ತು. ಅದರಲ್ಲೂ ಮುಗ್ಧ ಹಸುಳೆಯೊಂದು ಈ ಘಟನೆಯಲ್ಲಿ ಸಾವನ್ನಪ್ಪಿದ್ದು ಇನ್ನೂ ಜಗತ್ತನ್ನೂ ನೋಡದೆ ಕಣುಚ್ಚಿದ ಮುಗುವಿಗಾಗಿ ಸಾವಿರಾರು ಹೃದಯಗಳು ಮರುಗಿದವು. ಘಟನೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಭಂಗೂರ ಬಳಿ‌ ನಡೆದಿದೆ.

ಘಟನೆಯಲ್ಲಿ ಹೈದರಾಬಾದ್ ಮೂಲದ ಪೊಲೀಸ್​ ಕಾನ್ಸ್​ಟೇಬಲ್​ ಗಿರಿಧರ್ (45), ಪತ್ನಿ ಅನಿತಾ (36), ಮಗಳು ಪ್ರೀತಿ (14), ಮಗ ಮಯಂಕ್ (02) ಹಾಗೂ ಕಾರು ಚಾಲಕ ದಿನೇಶ್ (35) ಮೃತಪಟ್ಟವರೆಂದು ಗುರುತಿಸಲಾಗಿದೆ. ಇತರೆ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!