ಅಜ್ಞಾನದಿಂದ ರಾಜಕೀಯ ನಡೆಸಬಹುದು, ರಾಜಯೋಗ ಸಿಗುವುದಿಲ್ಲ

Must Read

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...

ಸ್ನೇಹಿತರ ದಿನಾಚರಣೆಯ ಶುಭಾಷಯಗಳು

ನಮ್ಮಲ್ಲಿ ಎಷ್ಟೋ ದಿನಾಚರಣೆಗಳಿವೆ. ಇದರಲ್ಲಿ ಸ್ನೇಹಕ್ಕೆ ಕೊಡುವ ಬೆಲೆ ಯಾವುದಕ್ಕೂ ಕೊಡಲಾಗದು ಎನ್ನುತ್ತಾರೆ. ಕಾರಣ ಇಲ್ಲಿ ಸ್ವಾರ್ಥ ಅಹಂಕಾರವಿರದೆ ಶುದ್ದ ಭಾವನೆಗಳ ಸಮ್ಮಿಲನವಿರುತ್ತದೆ. ಬಡವ ಬಡವನನ್ನು...

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

ಸಿಂದಗಿ: ರಾಜ್ಯದಲ್ಲಿ ಪಿಂಜಾರ, ನದಾಫ್ ಸಮುದಾಯಗಳು ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಈ ಜನಾಂಗ ಉದ್ದಾರವಾಗಬೇಕಾದರೆ ಪಿಂಜಾರ್ ಅಭಿವೃದ್ಧಿ ನಿಗಮ ಅವಶ್ಯಕತೆ ಇದೆ. ಪ್ರವರ್ಗ...

ಸರ್ಕಾರಿ ಶಾಲೆಗಳಿಗೆ ಶುಕ್ರದೆಸೆ. ಖಾಸಗಿಶಾಲೆಯಿಂದ ಸರ್ಕಾರಿ ಶಾಲೆಗೆ ಸೇರುತ್ತಿರುವ ಮಕ್ಕಳ ಸಂಖ್ಯೆಯ ದಾಖಲೆ ವಲಸೆ. ಧರ್ಮಾಂತರ, ಜಾತ್ಯಂತರ, ಪಕ್ಷಾಂತರ,ದೇಶಾಂತರದವರೆಗೆ ಬೆಳೆದ ದೇಶವೀಗ ಶಾಲಾಂತರವನ್ನೂ ತಲುಪಿದೆ.

ಈ ಅಂತರವನ್ನು ಜ್ಞಾನದಿಂದ ಸರಿಪಡಿಸಿಕೊಂಡು ಸಮಾಂತರ ಮಾಡೋ ಶಿಕ್ಷಣ ವ್ಯವಸ್ಥೆ ಸರ್ಕಾರ ಮಾಡಿದರೆ ಭಾರತದ ಭವಿಷ್ಯ ಉತ್ತಮವಾಗಿರುತ್ತದೆ. ಶಿಕ್ಷಣವೇ ಈ ಅಂತರವನ್ನು ಹೆಚ್ಚಿಸಿರೋದು. ಹಣದಿಂದ ಶಿಕ್ಷಣ ಖರೀದಿಸಿ ದೊಡ್ಡ ದೊಡ್ಡ ಹುದ್ದೆ ಅಲಂಕರಿಸಿದವರಿಗೆ, ಹಾಗು ಸಾಮಾನ್ಯಜನರ ಮನಸ್ಥಿತಿ, ಪರಿಸ್ಥಿತಿ, ಆರ್ಥಿಕಸ್ಥಿತಿಯ ಬಗ್ಗೆ ಅರಿವಿಲ್ಲದವರೂ ಶಿಕ್ಷಣದಲ್ಲಿ ಬದಲಾವಣೆ ತರಲು ಕಷ್ಟ.

ಅಜ್ಞಾನದಿಂದ ರಾಜಕೀಯ ನಡೆಸಬಹುದಷ್ಟೆ.ರಾಜಯೋಗ ಸಿಗೋದಿಲ್ಲ. ಭಾರತದಂತಹ ರಾಜಯೋಗಿಗಳ ದೇಶವನ್ನು ರಾಜಕೀಯದ ಶಿಕ್ಷಣದಿಂದ ಮುಂದೆ ನಡೆಸುತ್ತಾ ಮಕ್ಕಳು ಮಹಿಳೆಯರೂ ಮನೆಯಿಂದ ಹೊರಬಂದು ಮನರಂಜನೆಯ ಸಾಧನವಾದರು.

- Advertisement -

ಆದರೆ ಇದನ್ನು ತಡೆಯಲು ಮಹಾಶಕ್ತಿ ಕೊರೊನ ಬಂದು ಮತ್ತೆ ಮನೆ ಸೇರಿಸಿ ಪೋಷಕರಿಗೆ ಸರಿಯಾದ ಸತ್ಯದರ್ಶನ ಮಾಡಿಸಿದೆ. ಮಕ್ಕಳ ಭವಿಷ್ಯವನ್ನು ರೂಪಿಸಬೇಕಾದ ಶಿಕ್ಷಣಕ್ಷೇತ್ರವೇ ತಮ್ಮ ಸ್ವಾರ್ಥ ಬಿಡದೆ ಪೋಷಕರನ್ನು ಆಳಲು ಹೋದರೆ ಸಾಮಾನ್ಯರಿಗೆ ಅರ್ಥ ಆಗೋದಕ್ಕೆ ಅವರೇನೂ ದಡ್ಡರಲ್ಲ ಸಾಧ್ಯವಿದೆ. ಹಣವಿದ್ದವರು ಖಾಸಗಿ ಶಿಕ್ಷಣ ನೀಡಬಹುದು.

ಸಾಲ ಮಾಡಿ ಮಕ್ಕಳಿಗೆ ಕಲಿಸುವ ವಿಷಯವೇ ಸರಿಯಿಲ್ಲದ ಮೇಲೆ ಇದು ಶಿಕ್ಷೆಯಾಗಿ ಪೋಷಕರಿಗೆ ತಿರುಗಿ ಬರುತ್ತದೆ. ಇಲ್ಲಿ ಶಿಕ್ಷಣದಲ್ಲಿ ಸದ್ವಿಚಾರ ಸತ್ಯ ಧರ್ಮವೇ‌ ಮರೆಯಾಗಿ ರಾಜಕೀಯತೆ ತುಂಬಿ ಆಳಿದರೆ ಮೇಲಿನ‌ಶಕ್ತಿಗೆ ಕಾಣುವುದಿಲ್ಲವೆ? ಇದಕ್ಕಾಗಿ ಪ್ರತಿಯೊಂದು ಅಧರ್ಮದ ವ್ಯವಹಾರಕ್ಕೆ ತಡೆ ಹಾಕಿ ಆತ್ಮ ಚಿಂತನೆಗೆ ಕೊರೊನ ಅವಕಾಶ ನೀಡಿದೆ ಎನ್ನುವುದು ಒಂದು ಆಧ್ಯಾತ್ಮ ಸತ್ಯ.

ಈಗ ಸರ್ಕಾರದ ಶಾಲೆಗಳನ್ನು ಉತ್ತಮ ರೀತಿಯಲ್ಲಿ ಪುನರಾರಂಭಿಸಲು‌ ಹಿಂದಿನ ಹಿರಿಯರ ಕಾಲದ ಪಠ್ಯಪುಸ್ತಕವನ್ನು ಅಳವಡಿಸಿದರೆ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳು ಶಾಂತಿಯಿಂದ ಶಿಕ್ಷಣ ಪಡೆದು ಮುಂದೆ ಅವರವರ ಜ್ಞಾನ,ಪ್ರತಿಭೆಗೆ ತಕ್ಕಂತೆ ಶಿಕ್ಷಣದ ಆಯ್ಕೆ ಮಾಡಿಕೊಳ್ಳುವಷ್ಟು ಸ್ವತಂತ್ರ ರಾಗಬಹುದು.

ಸರ್ಕಾರದ ಕೆಲಸ, ಸಾಲ, ಸೌಲಭ್ಯಗಳನ್ನು ಪಡೆದು ಶಿಕ್ಷಣವನ್ನು ಮಾತ್ರ ಖಾಸಗಿಯವರ ಕಡೆ ನೀಡಿದರೆ ಅಧರ್ಮ. ದೇಶದ ನೆಲಜಲ ಎಲ್ಲಾ ಬೇಕು ಆದರೆ ಶಿಕ್ಷಣದಲ್ಲಿಯೇ ಧರ್ಮ, ಸತ್ಯ,ನ್ಯಾಯ ನೀತಿ,ಸಂಸ್ಕೃತಿ, ಭಾಷೆಗೆ ವಿರುದ್ದ ಮಕ್ಕಳನ್ನು ಬೆಳೆಸಿದರೆ ಇದರ ಪ್ರತಿಫಲ ವೂ ವಿರುದ್ದವಾಗೇ ಇರುತ್ತದೆ.

ನಮ್ಮೊಳಗೆ ಏನಿದೆಯೋ ಅದೇ ನಾವಾಗಿರೋದು. ನಮ್ಮ ಮೂಲ ಧರ್ಮ ಕರ್ಮಕ್ಕೆ ವಿರುದ್ದ ನಡೆದರೆ ತಿರುಗಿ ಬರೋವರೆಗೆ ಆತ್ಮಕ್ಕೆ ಮುಕ್ತಿ ತೃಪ್ತಿ ಸಿಗೋದಿಲ್ಲವೆನ್ನುವುದೆ ಆಧ್ಯಾತ್ಮ ಸತ್ಯ. ಏನೇ ಇರಲಿ,ಎಲ್ಲೇ ಇರಲಿ ನಮ್ಮಮೂಲ ಮರೆಯಬಾರದು.

ಬೆಳೆಸಲಾಗದಿದ್ದರೂ ಅಳಿಸಬಾರದಷ್ಟೆ. ಕಾಲಚಕ್ರ ತಿರುಗುತ್ತಿರುತ್ತದೆ. ಮಾನವ ಮಾತ್ರ ಬದಲಾವಣೆಗೆ ಸ್ಪಂಧಿಸುವಾಗ ಧರ್ಮದ ಪರವಿದ್ದರೆ ಮಹಾತ್ಮನಾಗುತ್ತಾನೆ. ಯೋಗಿಗಳ ದೇಶವನ್ನು ಯೋಗ್ಯ ಶಿಕ್ಷಣದಿಂದ ಸರಿಪಡಿಸುವುದಕ್ಕೆ ಯೋಗ್ಯ ಶಿಕ್ಷಕರ ಅಗತ್ಯವಿದೆ. ಶಿಕ್ಷಣವನ್ನು ವ್ಯಾಪಾರ ಮಾಡಿಕೊಳ್ಳದೆ ಧಾರ್ಮಿಕವಾಗಿ ಅರ್ಥ ಮಾಡಿಕೊಂಡರೆ ಉತ್ತಮ ಶಿಷ್ಯರು ಹುಟ್ಟಬಹುದು.

ಗುರುವೇ ಸರಿಯಿಲ್ಲವಾದರೆ ಶಿಷ್ಯರ ಗತಿ ಏನು? ವಿಷಯದಲ್ಲಿಯೇ ವಿಷ ಇದ್ದರೆ ಜೀವ ಉಳಿಯುವುದೆ? ಜೀವ ಇದ್ದರೂ ಆತ್ಮ ಜ್ಞಾನವಿಲ್ಲವಾದರೆ ಮಹಾತ್ಮರು ಅರ್ಥ ಆಗುವರೆ? ಎಲ್ಲದ್ದಕ್ಕೂ ಇತಿಮಿತಿ ಇರಬೇಕಷ್ಟೆ. ಜ್ಞಾನ ವಿಜ್ಞಾನ ಎರಡೂ ಒಂದೇ ನಾಣ್ಯದ ಎರಡು ಮುಖ.

ಒಟ್ಟಿನಲ್ಲಿ ಎಷ್ಟೋ ವರ್ಷದಿಂದಲೂ ನಮ್ಮ ಜ್ಞಾನಿಗಳು ಶಿಕ್ಷಣದಲ್ಲಿ ಬದಲಾವಣೆ ತರಬೇಕೆಂದು ಮಾಡಿದ‌ ಹೋರಾಟದಲ್ಲಿ ಹಿಂದೆ
ಸರಿದವರು ತಾವೂ ಆಧುನಿಕ ಜೀವನಕ್ಕೆ ಶರಣಾದರು. ಈಗ ಕೊರೊನ ತನ್ನ ಕೆಲಸ ಮಾಡಿಕೊಟ್ಟಿದೆ. ಈಗಲೂ ಭಾರತೀಯರಿಗೆ ರಾಜಕೀಯವೇ ಮುಖ್ಯವಾದರೆ ಅಜ್ಞಾನ.

ಯಾವುದೇ ರೀತಿಯ ರಾಜಕೀಯತೆ ಶಿಕ್ಷಣದಲ್ಲಿ ಧರ್ಮಸತ್ಯ ತರೋದು ಕಷ್ಟ. ಆದರೆ ಇದಕ್ಕೆ ಪ್ರಜೆಗಳ ಸಹಕಾರವಿದ್ದರೆ ಎಲ್ಲಾ ಸಾಧ್ಯವಿದೆ. ಈಗ ಅವಕಾಶವಿದೆ. ಸದ್ಬಳಕೆ ಮಾಡಿಕೊಂಡವರು ಪುಣ್ಯವಂತರು. ಆಗಿದ್ದು ಆಗಿಹೋಗಿದೆ. ಮಕ್ಕಳ ಭವಿಷ್ಯಕ್ಕಾಗಿ ನಾವು ಬದಲಾದರೆ ಉತ್ತಮ. ನಮ್ಮನ್ನು ನಾವು ಆಳಿಕೊಳ್ಳಲು ನಮ್ಮ ಭಾರತೀಯ ಶಿಕ್ಷಣ
ಅಗತ್ಯವಿದೆ.

ಸರ್ಕಾರದ ಪರ ನಿಂತು ಉತ್ತಮ ವಿಚಾರಗಳ ಪಠ್ಯಪುಸ್ತಕದಿಂದ ಮಕ್ಕಳ ಆತ್ಮಜ್ಞಾನ , ಸಾಮಾನ್ಯಜ್ಞಾನದಿಂದ ಮೇಲೆತ್ತುವುದೇ ಭಾರತೀಯರ ಧರ್ಮ. ಹೊರಗಿನ ಪ್ರಚಾರ,ಪ್ರವಚನ,ಭಾಷಣ ಮಾಡುವ ಜ್ಞಾನಿಗಳು ಸ್ವಯಂ ಶಿಕ್ಷಕರಾಗಿ ಸೇವೆ ಸಲ್ಲಿಸಿದರೆ ಮಕ್ಕಳಿಗೆ ತಮ್ಮ ಜ್ಞಾನವನ್ನು ನೇರವಾಗಿ ಹಂಚಬಹುದು.

ಧಾರ್ಮಿಕ ಕ್ಷೇತ್ರಗಳನ್ನು ಪ್ರವಾಸಿ ತಾಣ ಮಾಡೋ ಬದಲು ಶಿಕ್ಷಣ ಕೇಂದ್ರವನ್ನಾಗಿ ದೇಶೀಯ ಶಿಕ್ಷಣ ನೀಡುವುದರಿಂದ ಮಾನವ ಧರ್ಮರಕ್ಷಣೆ ಸಾಧ್ಯ. ದೇವರಿರೋದು ಸತ್ಯದಲ್ಲಿ ಮಕ್ಕಳೇ ದೇವರು ಎನ್ನುವುದಕ್ಕೆ ಕಾರಣವೆ ಮಕ್ಕಳಲ್ಲಿ ಸತ್ಯ ಇರುತ್ತದೆ.

ಅದಕ್ಕೆ ತಕ್ಕಂತೆ ಶಿಕ್ಷಣ ನೀಡೋ ಬದಲು ಮಿಥ್ಯ ಜ್ಞಾನ‌ನೀಡಿ ಮೆರೆಸಿದರೆ ಮಾನವೀಯತೆ ಹಾಳಾಗೋದಿಲ್ಲವೆ. ಇದರಲ್ಲಿ ಅರ್ಥ ವಾಗದ್ದು ಏನೂ ಇಲ್ಲ. ಸಾಮಾನ್ಯರಲ್ಲಿ ರುವ ಸಾಮಾನ್ಯಜ್ಞಾನದ ಕೊರತೆ ಇಂದು ಭ್ರಷ್ಟಾಚಾರ ಬೆಳೆಸಿದೆ.

ಭ್ರಷ್ಟರು ರಂಗೋಲಿ ಕೆಳಗೆ ನುಸುಳಿಕೊಂಡರೂ ಭೂಮಿಯೇ ಸಾಕ್ಷಿಯಾಗಿದ್ದು ತನ್ನ ಸಣ್ಣ ಅಣು ಮೂಲಕವೆ ಸತ್ಯ ದರ್ಶನ ಮಾಡಿಸುತ್ತದೆನ್ನುವುದನ್ನು ಮಾನವ ತಿಳಿದರೆ ಜೀವನದಲ್ಲಿ ಸನ್ಮಾರ್ಗ ಹಿಡಿಯಬಹುದು. ಇದು ನಮಗೆ ಕೊರೊನ ಸಮಯದಲ್ಲಿ ಪ್ರಕೃತಿ ಮೂಲಕ ಕಲಿತ ಪಾಠ. ಅರ್ಥವಾದವರು ಪಾಸಾಗುತ್ತಾರೆ. ಇಲ್ಲವಾದರೆ ಮತ್ತೆ ಅದೇ ಸೋಲು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಖಾಸಗಿ ಹಾಗು ಸರ್ಕಾರಿ ಶಾಲಾ ಕಾಲೇಜ್ಗಳಲ್ಲಿ ಜಾರಿಗೆ ತಂದರೆ‌ ಉತ್ತಮ ಬೆಳವಣಿಗೆ. ಶಿಕ್ಷಣದಲ್ಲಿ ರೀತಿ ನೀತಿ ಮಕ್ಕಳ ಸಂಸ್ಕೃತಿ ಭಾಷೆ ಬೆಳೆಸುವಂತಿದ್ದರೆ ಮಾನವ ಧರ್ಮ ರಕ್ಷಣೆಯಾಗುತ್ತದೆ.

ಸಮಾನ ಶಿಕ್ಷಣದಲ್ಲಿ ಮಕ್ಕಳ ಜ್ಞಾನಕ್ಕೆ ತಕ್ಕಂತೆ ಶಿಕ್ಷಣ ಪಡೆಯೋ ಅವಕಾಶ, ಸಹಕಾರ ಸಿಗಬೇಕು. ಯಾರಿಗೆ ಗೊತ್ತು ಯಾವ ಮಕ್ಕಳಲ್ಲಿ ಯಾವ ಮಹಾತ್ಮನಿರುವರೋ? ಮಕ್ಕಳು ಪ್ರದರ್ಶನದ ವಸ್ತುವಲ್ಲ. ಅಮೃತಾತ್ಮರು. ವಿಷದ ವಿಷಯವನ್ನು ದೂರವಿಟ್ಟು ಅಮೃತದ ವಿಷಯ ತಿಳಿಸಲು ಪ್ರಾಥಮಿಕ ಶಿಕ್ಷಣದಲ್ಲಿ ಸಾಧ್ಯವಾದರೆ ಮಹಾತ್ಮರನ್ನು ನಾವು ಕಾಣಬಹುದು.

ಖಾಸಗಿ ಶಾಲೆಯಾದರೇನು ಸರ್ಕಾರದ ಶಾಲೆಯಾದರೇನು ವಿಷಯಗಳು ಸ್ವಚ್ಚ, ಸತ್ಯವಾಗಿದ್ದರೆ ಆತ್ಮನಿರ್ಭರ ಭಾರತ ಸಾಧ್ಯವಿದೆ. ಕಲಿಸುವ ಶಿಕ್ಷಕರು ಮೊದಲು ಇದರ ಬಗ್ಗೆ ಹೆಚ್ಚು ತಿಳಿಯುವುದಷ್ಟೆ ಮುಖ್ಯ. ಶಿಕ್ಷಣದಲ್ಲಿ ರಾಜಕೀಯದ ಅಗತ್ಯವಿಲ್ಲ.ರಾಜಯೋಗದ ಅಗತ್ಯವಿದೆ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...
- Advertisement -

More Articles Like This

- Advertisement -
close
error: Content is protected !!