spot_img
spot_img

ರಾಜಕಾರಣ ನಿಂತ ನೀರಲ್ಲ, ಯಾರ ಸ್ವತ್ತೂ ಅಲ್ಲ – ಲಕ್ಷ್ಮಿ ಹೆಬ್ಬಾಳಕರ

Must Read

- Advertisement -

ಗೋಕಾಕ ಮತ್ತು ಅರಭಾವಿ ಕಾಂಗ್ರೆಸ್ ಮುಖಂಡರು,  ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭ

ಮೂಡಲಗಿ- ರಾಜಕಾರಣ ನಿಂತ ನೀರಲ್ಲ ಇದು ಯಾರ ಸ್ವತ್ತೂ ಅಲ್ಲ ಇವತ್ತು ನಮ್ಮದಾಗಿದ್ದು ನಾಳೆ ಯಾರದೋ ಆಗುತ್ತದೆ. ಆದರೆ ಗೆದ್ದಾಗ ಬೀಗದೆ, ಸೋತಾಗ ಕೊರಗದೆ ಎಲ್ಲರನ್ನೂ ಕರೆದುಕೊಂಡು ಹೋಗುವುದೇ ರಾಜಕಾರಣ ಎಂಬುದು ನನ್ನ ಭಾವನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಘಟಪ್ರಭಾದ ಶ್ರೀ ಬಸವೇಶ್ವರ ಸಭಾ ಮಂಟಪದಲ್ಲಿ ನಡೆದ ೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಶ್ರಮಿಸಿದ ಗೋಕಾಕ ಮತ್ತು ಅರಭಾಂವಿ ಕ್ಷೇತ್ರಗಳ ಕಾಂಗ್ರೆಸ್  ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಅರ್ಪಿಸುವ ಕೃತಜ್ಞತಾ ಸಮಾರಂಭದಲ್ಲಿ ಅವರು ಮಾತನಾಡಿದರು.

- Advertisement -

ಹುಬ್ಬಳ್ಳಿಯ ನೇಹಾ ಹತ್ಯೆ ಕಾರಣ ಇರಬಹುದು, ಮೋದಿ ಅಲೆ ಇರಬಹುದು ಒಟ್ಟಿನಲ್ಲಿ ನಮಗೆ ಸೋಲಾಗಿದೆ ಅದಕ್ಕೆ ಕಾರಣಗಳನ್ನು ನಾವು ಹುಡುಕುತ್ತಿದ್ದೇವೆ. ರಾಮ ಮಂದಿರ ಕಟ್ಟಿದ ಬಿಜೆಪಿಯನ್ನೇ ಜನ ಸೋಲಿಸಿದರು. ದೊಡ್ಡ ದೊಡ್ಡ ನಾಯಕರೇ ಸೋತಿದ್ದಾರೆ. ಆದರೆ ಅವರ್ಯಾರೂ ಕೊರಗುತ್ತ ಕೂರದೇ ಮತ್ತೆ ಮತ್ತೆ ಎದ್ದು ಗೆದ್ದು ಬಂದಿದ್ದಾರೆ ಅಂಥವರೇ ನಮಗೆ ಆದರ್ಶ. ಇನ್ನೂ ನಾಲ್ಕು ವರ್ಷ ನಮ್ಮದೇ ಸರ್ಕಾರ ಇರುತ್ತದೆ ಇನ್ನು ಮುಂದೆ ಯಾವತ್ತೂ ನಿಮ್ಮ ಜೊತೆ ನಾವಿರುತ್ತೇವೆ.ಸೋಲಿನಿಂದ ನಾವು ಯಾರೂ ಧೃತಿಗೆಡೋದು ಬೇಡ ಈಗಾಗಲೇ ಅತ್ಯಂತ ಪ್ರಾಮಾಣಿಕತೆಯಿಂದ ಕೆಲಸ ಮಾಡಿರುವ ತಾವು ಇನ್ನು ಮುಂದೆಯೂ ನಮ್ಮ ಜೊತೆ ಇರಬೇಕು ಎಂದು ಮನವಿ ಮಾಡಿಕೊಂಡರು.

ಕೆಲವು ಕ್ಷೇತ್ರಗಳಲ್ಲಿ ಸತೀಶ ಜಾರಕಿಹೊಳಿಯವರು ಸ್ಪರ್ಧೆ ಮಾಡಿದಾಗ ಅವರಿಗೆ ಸಿಕ್ಕ ಮತಗಳಿಗಿಂತಲೂ ಮೃಣಾಲ್ ಹೆಬ್ಬಾಳಕರ ಅವರಿಗೆ ಹೆಚ್ಚು ಮತ ಬಿದ್ದಿದ್ದು ಆದರೂ ನಾವು ಸೋತಿದ್ದೇವೆ ನಾವು ಸೋಲನ್ನು ಸ್ವೀಕರಿಸುತ್ತೇವೆ ಎಂದು ಹೆಬ್ಬಾಳಕರ ಹೇಳಿದರು.

ಲೋಕಸಭೆಯ ಪರಾಜಿತ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಮಾತನಾಡಿ, ಚುನಾವಣೆಯಲ್ಲಿ ಪ್ರಚಾರ ಸಭೆಗಳಿಗೆ ಅಸಂಖ್ಯ ಪ್ರಮಾಣದಲ್ಲಿ ಜನರು ಬರುತ್ತಿದ್ದರು ಆದರೂ ನಮಗೆ ಸೋಲಾಗಿದೆ ನಾವು ಸೋತಿರಬಹುದು ಆದರೆ ನಾವು ಕ್ಷೇತ್ರದ ಪ್ರತಿಯೊಬ್ಬರ ಮನಸಿನಲ್ಲಿಯೂ ಇದ್ದೇವೆ. ನಾನು ಸೋಲು ಒಪ್ಪಿಕೊಳ್ಳುವ ಜಾಯಮಾನದವನಲ್ಲ ಎಲ್ಲಿ ಸೋತಿರುವೆನೋ ಅಲ್ಲಿಂದಲೇ ಗೆದ್ದು ಬರುವ ಮನಸು ನನ್ನದು ಇನ್ನು ಮುಂದೆಯೂ ಕೂಡ ನಿಮ್ಮ ಮನೆಯ ಮಗನಾಗಿ ಮುಂದುವರೆಯುತ್ತೇನೆ. ಮುಂಬರುವ ತಾಲೂಕಾ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ನಿಮ್ಮೆಲ್ಲರ ಪರವಾಗಿ ನಾನು ಶ್ರಮಿಸುತ್ತೇನೆ ಎಂದರು

- Advertisement -

ಮಹಾಂತೇಶ ಕಡಾಡಿ ಎಲ್ಲರನ್ನೂ ಸ್ವಾಗತಿಸಿ ಮಾತನಾಡುತ್ತಾ, ಕಳೆದ ಲೋಕಸಭಾ ಚುನಾವಣೆಗಿಂತಲೂ ಈ ಸಲದ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಮತ್ತಷ್ಟು ಬಲಿಷ್ಠವಾಗಿದೆ. ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾದಂತೆ ಕಂಡುಬಂದಿತು. ಗೋಕಾಕ ಕ್ಷೇತ್ರದಲ್ಲಿ ೩೦ ಸಾವಿರ ಹಾಗೂ ಅರಭಾವಿ ಕ್ಷೇತ್ರದಲ್ಲಿ ೨೨ ಸಾವಿರ ಮತಗಳು ಕಡಿಮೆ ಬಂದಿವೆ. ಕೆಲವೊಂದು ಕೊರತೆಗಳು ಇದಕ್ಕೆ ಕಾರಣ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಉತ್ಸಾಹದಿಂದ ಶ್ರಮಿಸೋಣ. ನಮ್ಮ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಮತ್ತು ಮೃಣಾಲ್ ಅವರು ಪಕ್ಷ ಸಂಘಟನೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದಾರೆ ಎಂದರು.

ಅಶೋಕ ಪೂಜೇರಿ ಮಾತನಾಡಿ, ಇದು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವ ಸಮಾರಂಭ ಹೀಗಾಗಿ ಚುನಾವಣೆಯಲ್ಲಿ ಸೋಲು ಗೆಲುವಿನ ವಿಮರ್ಶೆ ಮಾಡುತ್ತ ಕೂರುವುದು ಸರಿಯಲ್ಲ. ಮೃಣಾಲ್ ಅವರು ಸೋತಿರಬಹುದು ಈ ಸೋಲಿನಿಂದ ಅವರು ಧೃತಿಗೆಡದೆ ಮುಂಬರುವ ಚುನಾವಣೆಗಳಲ್ಲಿ ಅವರ ತಾಯಿ ಲಕ್ಷ್ಮಿ ಹೆಬ್ಬಾಳಕರ ಅವರ ಮಾರ್ಗದರ್ಶನದಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಲಿ ಎಂದರು.

ಮೂಡಲಗಿ ತಾಲೂಕಾ ಗ್ಯಾರಂಟಿ ಅನುಷ್ಠಾನ ವೇದಿಕೆಯ ಅಧ್ಯಕ್ಷ ಅನಿಲ ದಳವಾಯಿ, ಸಿದ್ಧಲಿಂಗ ದಳವಾಯಿ ಮಾತನಾಡಿದರು.

ಸಮಾರಂಭದಲ್ಲಿ ಸಚಿವೆ ಹೆಬ್ಬಾಳಕರ ಅವರನ್ನೂ ಮತ್ತು ಮೃಣಾಲ್ ಹೆಬ್ಬಾಳಕರ ಅವರನ್ನೂ ಕಾಂಗ್ರೆಸ್ ಕಾರ್ಯಕರ್ತರು ಸತ್ಕರಿಸಿದರು.

ವೇದಿಕೆಯ ಮೇಲೆ ಲಕ್ಕಣ್ಣ ಸವಸುದ್ದಿ, ರಮೇಶ ಉಟಗಿ, ಬಾಬಾ ಜಮಖಂಡಿ, ಚಂದ್ರಶೇಖರ ಕೊಣ್ಣೂರ, ಗಂಗಾಧರ ಬಡಕುಂದ್ರಿ, ಜಾಕಿರ್ ನದಾಫ, ಪ್ರಕಾಶ ಭಾಗೋಜಿ, ವಿನಾಯಕ ಹಾಜಿ, ಪರವೀನ ಗೋಶಾಳ, ರಾವಸಾಬ ಬೆಳಕೂಡ, ಲಗಮಣ್ಣ ಕಳಸಣ್ಣವರ, ಬಿ ಬಿ ಹಂದಿಗುಂದ, ಸುಭಾಸ ಪೂಜೇರಿ, ಎಸ್ ಆರ್ ಸೋನವಾಲಕರ, ವೆಂಕನಗೌಡಾ ಪಾಟೀಲ, ಗುರು ಗಂಗಣ್ಣವರ ಮುಂತಾದವರು ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವೇದವ್ಯಾಸರ ಸ್ಮರಣಾರ್ಥ ಗುರು ಪೂರ್ಣಿಮಾ

ಗುರುಪೂರ್ಣಿಮಾ ವಿಶೇಷ ಅರಿವಿಗೆ ಅನಂತ ಶಯನನಾಗಿ ಜ್ಞಾನ ಜ್ಯೋತಿ ಬೆಳಗುತ್ತಿರುವ ಗುರಿತೋರುವ ನೇತಾರ ಬದುಕು ಭವಿಷ್ಯದ ಹಾದಿಯ ದಿಟ್ಟ ಹೆಜ್ಜೆಯಿಡಲು ಗುರಿ ತೋರುವ ದೈವದ ಗುರಿಕಾರ ಜ್ಞಾನದ ತೃಷೆಯನ್ನು ತಣಿಸಿದ ಬದುಕನ್ನು ಹದಗೊಳಿಸುವ ಗುರುಬಲದ ಶಿಲ್ಪಿಗಾರ ಸಕಲ ಜ್ಞಾನವಾಹಿನಿ ಜಾಗೃತಿ ಜಗಕೆ...
- Advertisement -

More Articles Like This

- Advertisement -
close
error: Content is protected !!
Join WhatsApp Group