spot_img
spot_img

ಅಶೋಕ ಮನಗೂಳಿ ಪರ ಮತಯಾಚನೆ

Must Read

spot_img
- Advertisement -

ಸಿಂದಗಿ: ನಮ್ಮ ಮಾವನವರಾದ ದಿ. ಮಾಜಿ ಸಚಿವ ಎಂ.ಸಿ.ಮನಗೂಳಿ ಅವರು ಈ ಕ್ಷೇತ್ರದ ಅಭಿವೃದ್ಧಿ ಕನಸು ಕಂಡು ನೂರಾರು ಕೋಟಿ ಅನುದಾನ ತಂದಿದ್ದರು ಅದು ಅರ್ಧಕ್ಕೆ ನಿಂತಿದ್ದು ಅದನ್ನು ಪೂರ್ಣಗೊಳಿಸಿ ನಮ್ಮ ಮಾನವನವರ ಕನಸು ನನಸು ಮಾಡಲು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗೆ ಮತ ನೀಡಿ ಅತ್ಯಧಿಕ ಮತಗಳ ಅಂತರದಿಂದ ಆಯ್ಕೆ ಮಾಡಿ ಎಂದು ಡಾ. ಸಂಧ್ಯಾ ಮನಗೂಳಿ ಮನವಿ ಮಾಡಿಕೊಂಡರು.

ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರ ಪರ ಮತಯಾಚಿಸಿ ಮಾತನಾಡಿ, ದಿ.ಎಂ.ಸಿ.ಮನಗೂಳಿ ಅವರು ಯಾವಾಗ್ಗೆ ಆಯ್ಕೆಯಾಗಿದ್ದಾರೆ ಹೊಸ ಯೋಜನೆಗಳನ್ನು ರೂಪಿಸಿ ಈ ಭಾಗದಲ್ಲಿ ರೈತರ ಪಾಲಿಗೆ ಬೆಳಕ್ಕಾಗಿ ನಿಂತವರು ಗುತ್ತಿ ಬಸವಣ್ಣ ಏತನೀರಾವರಿ ಯೋಜನೆಗೆ ಬರಿಗಾಲಲ್ಲಿ ತಿರುಗಾಡಿ ಅನುದಾನ ತಂದು ಕಾಮಾಗಾರಿಗೆ ಚಾಲನೆ ಕೊಟ್ಟವರು ಅಲ್ಲದೆ ಈ ಬಾರಿಯು ಕೂಡ ನೂರಾರು ಕೋಟಿ ಅನುದಾನ ತಂದು ಪಟ್ಟಣದ ಶಾಶ್ವತ ನೀರಾವರಿಗೆ ಒಳಪಡಿಸಿದವರು ಮತ್ತು ಹೆಣ್ಣು ಮಕ್ಕಳ ಸಮಸ್ಯೆಯಿಂದ ಹೊರ ಬರಲು ರೂ 92 ಕೋಟಿ ವೆಚ್ಚದ ಒಳಚರಂಡಿ ಕಾಮಗಾರಿ ಹೀಗೆ ಹತ್ತು ಹಲವಾರು ಹೊಸ ಯೋಜನೆಗಳನ್ನು ತಂದು ಜನಾನುರಾಗಿದ್ದಾರೆ ಅಂತವರ ಕೆಲಸಗಳು ಅಜರಾಮರವಾಗಿರಲು ಅವರ ಮಗ ಅಶೋಕ ಮನಗೂಳಿ ಆರ್ಶಿವದಿಸಿ ಎಂದರು.

ಈ ಸಂದರ್ಭದಲ್ಲಿ ಕುಮಾರ ಬಗಲಿ, ಚನ್ನು ಪಟ್ಟಣಶೆಟ್ಟಿ, ಮಹಾನಂದಾ ಬಮ್ಮಣ್ಣಿ, ಜಯಶ್ರೀ ಹದನೂರ ಪೀರಾ ಮಗರಬಿ, ಬಾಸ್ಕರ ಪೂಜಾರಿ, ನಿವೃತ್ತ ಆಡಳಿತಾಧಿಕಾರಿ ಸುಲ್ಪಿ ಸೇರಿದಂತೆ ಹಲವರು ಇದ್ದರು.

- Advertisement -
- Advertisement -

Latest News

ನಗರ ಕೇಂದ್ರ ಗ್ರಂಥಾಲಯದಲ್ಲಿ ವಿಶ್ವ ಮಾನವ ಹಕ್ಕುಗಳ ದಿನ ಆಚರಣೆ

ಬೆಳಗಾವಿ: ಮನುಷ್ಯ ಬದುಕಿನ ಹಕ್ಕುಗಳ ಮಹತ್ವವನ್ನು ಸಾರುವ ದಿನ ಮಾನವ ಹಕ್ಕುಗಳ ದಿನ. ಪ್ರತಿವರ್ಷ ಡಿಸೆಂಬರ್‌ 10 ರಂದು ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. 1948ರಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group