spot_img
spot_img

ಮಿಸ್ ಇಂಡಿಯಾ 2021 ಟೈಟಲ್ ಗೆದ್ದ ಪೂಜಾ ರಮೇಶ್

Must Read

ಇತ್ತೀಚೆಗೆ ಇನ್ಫಾಂಟ್ ಸ್ಕೂಲ್ ಆಫ್ ಫ್ಯಾಶನ್ ಸಂಸ್ಥೆ ಆಯೋಜಿಸಿದ Mr & Miss India -2021 ಶೋನಲ್ಲಿ ಪೂಜಾ ರಮೇಶ್ ಅವರು ಮಿಸ್ ಇಂಡಿಯಾ 2021 ಟೈಟಲ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

ಅವರಿಗೆ ಬ್ಯೂಟಿಫುಲ್ ಹೇರ್ ಅಂಡ್ ಬೆಸ್ಟ್ ಹೇರ್ ಸ್ಟೈಲ್ ಗೆ ಕೂಡ ಅವಾರ್ಡ ಸಿಕ್ಕಿದ್ದು ಡಬಲ್ ಖುಶಿಯಲ್ಲಿ ಇದ್ದಾರೆ. ಜೀವನ ಚರಿತ್ರೆಯಲ್ಲಿ ಹಲವು ಏಳುಬೀಳು ಗಳನ್ನು ನೋಡಿರುವ ಪೂಜಾ ರಮೇಶ್ , ಸ್ಯಾಂಡಲ್ವುಡ್ ಹಾಗೂ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿ ಚಿರಪರಿಚಿತವಾಗಿದ್ದಾರೆ.

ಪೂಜಾ ರಮೇಶ್ ಅವರು ಫ್ಯಾಷನ್ ಶೋಗಳಲ್ಲೂ ಕೂಡ ತನ್ನದೆಯಾದ ಚಾಪು ಮೂಡಿಸಿದ್ದಾರೆ. ಹಲವು ಶೋ ಗಳಲ್ಲಿ ಕಾಣಿಸಿಕೊಂಡು ಮಾಡೆಲ್ ಕ್ಷೇತ್ರದಲ್ಲೂ ಕೂಡ ಹೆಸರು ಮಾಡಿದ್ದಾರೆ. 2015ರಿಂದ ಚಿತ್ರರಂಗದಿಂದ ದೂರವಿದ್ದ ಪೂಜಾ ರಮೇಶ್ ಈಗ ಫಿಟ್ ಅಂಡ್ ಫೈನ್ ಆಗಿ ಮತ್ತೆ ಕಿರುತೆರೆ ಹಾಗೂ ಧಾರಾವಾಹಿಗಳತ್ತ ಮುಖ ಮಾಡಿದ್ದಾರೆ.

ಫ್ಯಾಶನ್ ಶೋಗಳಲ್ಲಿ Shows topper ಆಗಿ ಕಾಣಿಸಿಕೊಂಡಿದ್ದಾರೆ . 2009ರಲ್ಲಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಪೂಜಾ ರಮೇಶ್ ,ಪೇಪರ್ ದೋಣಿ, ಲಹರಿ, ತಾಂಡವ ಮಹಾಕಾಳಿ ಯಲ್ಲಿ ಅಭಿನಯಿಸಿದ್ದಾರೆ.

ಕೋವಿಡ್ ಟೈಮ್ ನಲ್ಲಿ ಹಲವು ಹಿರಿಯ ಕಲಾವಿದರ ಮನೆ ಬಾಗಿಲಿಗೆ ಹೋಗಿ ಯೋಗಕ್ಷೇಮ ವಿಚಾರಿಸಿ ಅಹಾರ ಕಿಟ್ ನೀಡಿ ಆರ್ಶಿವಾದ ಪಡೆದುಕೊಂಡಿದ್ದಾರೆ .ಈಗ ಮತ್ತೆ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಆಗಿರುವ ಪೂಜಾ ರಮೇಶ್ ಗೆ ಹಲವು ಸಿನಿಮಾ ಆಫರ್ ಗಳು ಬರುತ್ತಿವೆಯಂತೆ ,ಅವರ ಈ ಗುಣ, ಹಾರ್ಡ್ ವರ್ಕ್ ಮತ್ತು ಹಿರಿಯ ಕಲಾವಿದರ ಆರ್ಶಿವಾದವೇ ಈ ಗೆಲುವಿಗೆ ಕಾರಣ.

ಹೀಗೆ ಹಲವು ಶೋ ಹಾಗೂ ಸಿನಿಮಾಗಳಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂಬುದೇ ಟೈಮ್ಸ್ ಆಫ್ ಕರ್ನಾಟಕದ ಆಶಯ. ದೀಪಾವಳಿ ಹಬ್ಬದಂತೆ ನಿಮ್ಮ ಸಾಧನೆಯ ಯಶಸ್ಸು ಬೆಳಗಲಿ, ಆಲ್ ದಿ ಬೆಸ್ಟ್ ಪೂಜಾ ರಮೇಶ್.

- Advertisement -
- Advertisement -

Latest News

ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದಗೆ ೭೬.೦೭ ಲಕ್ಷ ರೂ ಲಾಭ

ಮೂಡಲಗಿ: ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ೨೦೨೩ರ ಮಾರ್ಚ ಅಂತ್ಯಕ್ಕೆ ರೂ.೭೬.೦೭ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ  ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷೆ...
- Advertisement -

More Articles Like This

- Advertisement -
close
error: Content is protected !!