ಸಿಂದಗಿ: ತಾಲೂಕಿನ ಬೂದಿಹಾಳ ಗ್ರಾಮದಿಂದ ಕನ್ನೊಳ್ಳಿ ಗ್ರಾಮಕ್ಕೆ ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆಯಲ್ಲಿ ಸಂಪರ್ಕ ಕಲ್ಪಿಸುವ ನಾಲ್ಕು ಕಿಲೋಮೀಟರ್ ರಸ್ತೆಯು ನಿರ್ಮಾಣವಾಗಿದ್ದು ನಿರ್ಮಾಣ ಮಾಡಲು ಬಳಸಿದ ಮಶಿನರಿಗಳು ಅದೇ ರಸ್ತೆಯಲ್ಲಿ ಇರುವಾಗಲೇ ಡಾಂಬರ್ ಹಾಕಿದ ನಾಲ್ಕೆ ದಿನಗಳಲ್ಲಿ ಡಾಂಬರ್ ಎಲ್ಲೆಂದರಲ್ಲಿ ಕಿತ್ತು ಹೋಗುತ್ತಿದ್ದು ಈ ವಿಷಯಕ್ಕೆ ಸಂಬಂಧಪಟ್ಟಂತೆ ಪಿಎಂಜಿಎಸ್‍ವೈ ಅಧಿಕಾರಿಗಳಾದ ಎಇ ಮತ್ತು ಎಇಇ ಈ ಗುತ್ತಿಗೆದಾರರೊಂದಿಗೆ ಶಾಮಿಯಲಾಗಿ ಕಳಪೆ ಕಾಮಗಾರಿ ಮಾಡಿದ್ದನ್ನು ನೋಡಿದರೆ ಸಂಶಯ ವ್ಯಕ್ತವಾಗುತ್ತಿದೆ ಕಾರಣ ತಕ್ಷಣ ಹಿರಿಯ ಅಧಿಕಾರಿಗಳು ವೀಕ್ಷಣೆ ಮಾಡಿ ಮರು ದುರಸ್ಥಿಗೆ ಆದೇಶ ನೀಡಬೇಕು ಎಂದು ಓತಿಹಾಳ ಸರಕಾರಿ ಶಾಲೆಯ ಎಸ್‍ಡಿ ಎಂಸಿ ಅಧ್ಯಕ್ಷ ಶಿವಾನಂದ ಸಾಲಿಮಠ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಾಸಕ ರಮೇಶ ಭೂಸನೂರ ಅವರು ಮೊದಲ ಬಾರಿ ಆಯ್ಕೆಯಾದ ಸಂದರ್ಭದಲ್ಲಿ ನಿರ್ಮಾಣವಾದ ಈ ರಸ್ತೆ ಅವಾಗ್ಗೆ ಕೂಡಾ ಇದೆ ಕಳಪೆಯಾಗಿ ನಿರ್ಮಾಣವಾಗುತ್ತಿರುವುದನ್ನು ಕೆಲ ಪತ್ರಿಕೆಗಳಲ್ಲಿ ವಿಶೇಷ ವರದಿಗಳು ಪ್ರಕಟವಾಗಿದ್ದವು ಆ ಸಂದರ್ಭದಲ್ಲಿ ಗುತ್ತಿಗೆದಾರ ಡೋಣೂರಮಠ ಅವರು ರಸ್ತೆ ಮರು ನಿರ್ಮಾಣಕ್ಕೆ ಮುಂದಾಗಿದ್ದರು ಮೂರನೇ ಹಂತದ ಅಧಿಕಾರಿಗಳು ಇಲಾಖೆಯಲ್ಲಿ ಕುಳಿತು ಸಮೀಕ್ಷೆ ನಡೆಸದೇ ಸ್ಥಳಕ್ಕೆ ತುರ್ತಾಗಿ ರಸ್ತೆಗೆ ಭೇಟಿ ನೀಡಿ ಕಾಂಟ್ರಾಕ್ಟ್ ಮಾಡಿದ ಕೆಲಸ ಸಂಪೂರ್ಣ ವೀಕ್ಷಣೆ ಮಾಡಿ ಇಲಾಖೆಗೆ ರಿಪೋರ್ಟ್ ಮಾಡಬೇಕು ಹಾಗೂ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.