ಸಿಂದಗಿ: ತಾಲೂಕಿನ ನಾಗಾವಿ ಬಿ.ಕೆ.ಮತ್ತು ಕೆಡಿ ಗ್ರಾಮದ ರೈತರಿಗೆ ತೊಗರಿ ಬೀಜ ಬಿತ್ತನೆ ಮಾಡಿ ಕೆಲ ದಿನಗಳೆ ಕಳೆದರು ತೊಗರಿ ಬೆಳೆ ಗೊಣ್ಣೆ ರೋಗ ತಗುಲಿ ಬೆಳೆ ಹಾನಿಯಾಗಿದ್ದು ಕೂಡಲೇ ಕೃಷಿ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡುವಂತೆ ಆಗ್ರಹಿಸಿ ಗ್ರಾಮಸ್ಥರು ಕೃಷಿ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಕೃಷಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತರು ಮಾತನಾಡಿ, ಯಾವುದೋ ಊರಲ್ಲಿ ಕಸಿ ಮಾಡಿದ ತೊಗರಿ ಬೀಜವನ್ನು ಸಬ್ಸಿಡಿ ರೂಪದಲ್ಲಿ ರೈತರಿಗೆ ವಿತರಣೆ ಮಾಡಿದ್ದಾರೆ ಸುಮಾರು 550 ಎಕರೆ ಜಮೀನಿನಲ್ಲಿ ತೊಗರಿ ಬೆಳೆ ಬಿತ್ತನೆ ಯಾಗಿದ್ದು ಇದರ ಬಗ್ಗೆ ನಿಗಾವಹಿಸದೇ ನಿರ್ಲಕ್ಷ ತೋರಿದ್ದಾರೆ. ಈಗ ತೊಗರಿ ಬೆಳೆಗೆ ಕೀಟ ಬಾಧೆ, ಗೊಣ್ಣೆ ರೋಗ ತಗುಲಿ ಬೆಳೆ ಹಾನಿಯಾಗಿದ್ದು ಇದಕ್ಕೆ ಹಲವಾರು ರೀತಿ ರಸಗೊಬ್ಬರ ನೀಡಿದರು ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಕಾರಣ ಕೃಷಿ ಅಧಿಕಾರಿಗಳು ಕಛೇರಿಯಲ್ಲಿ ಕುಳಿತು ಕಾಲಹರಣ ಮಾಡದೇ ರೈತರ ಜಮೀನುಗಳಿಗೆ ಭೇಟಿ ನೀಡಿ ತೊಗರಿ ಬೆಳೆ ಹಾಳಾಗದಂತೆ ಪರಿಹಾರ ಕಂಡುಕೊಳ್ಳಬೇಕು ಇಲ್ಲದಿದ್ದರೆ ಬೀಜ ವಿತರಣೆ ಮಾಡಿದ ಎಜೆನ್ಸಿಯನ್ನು ಮುಟ್ಟುಗೋಲು ಹಾಕಿಕೊಂಡು ಪರಿಹಾರ ಒದಗಿಸಿಕೊಡಬೇಕಲ್ಲದೆ ಸರಕಾರ ಇಂತಹ ಏಜೆನ್ಸಿಗಳಿಗೆ ಟೆಂಡರ ನೀಡಿದ ತಪ್ಪಿಗೆ ತೊಗರಿ ಬೆಳೆ ಹಾನಿಗೆ ಪರಿಹಾರ ಒದಗಿಸಿಕೊಡಬೇಕು ಇಲ್ಲದಿದ್ದರೆ ರೈತರೆಲ್ಲರು ಸೇರಿ ಉಗ್ರವಾದ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಡಿವಾಳಯ್ಯ ಹಿರೇಮಠ, ಮೇಲಪ್ಪಗೌಡ ಪಾಟೀಲ, ಸುರೇಶಗೌಡ ಪಾಟೀಲ, ಸುರೇಶಗೌಡ ರಾಮನಗೋಳ, ಮಲ್ಲಯ್ಯ ಹಿರೇಮಠ, ಶಿವಲಿಂಗಪ್ಪ ಪೂಜಾರಿ, ಭೀಮರಾಯ ಹೊನ್ನಳ್ಳಿ, ನಾಗಪ್ಪ ಪೂಜಾರಿ, ದವತ್ತರಾಯ ಪೂಜಾರಿ, ಶಿವಶರಣಪ್ಪ ಬಿರಾದಾರ, ಶಿವಗಂಗಮ್ಮ ಬಿರಾದಾರ, ಸಾಹೇಬಪಟೇಲ ಮಂದೇವಾಲಿ, ಸಿದ್ದನಗೌಡ ಬಿರಾದಾರ, ಬಾಗಮ್ಮ ಪೂಜಾರಿ, ಗಂಗಾಬಾಯಿ ಪೂಜಾರಿ, ಸಾಹೆಬಗೌಡ ಹೊನ್ನಳ್ಳಿ, ಯಲ್ಲಪ್ಪ ಪೂಜಾರಿ, ಗೋಲ್ಲಾಳಪ್ಪ ಪೂಜಾರಿ, ಶರಣಪ್ಪ ಜೇವರ್ಗಿ, ಅಮೋಗೇಪ್ಪ ಪೂಜಾರಿ, ಕಸ್ತೂರಿಬಾಯಿ ಪೂಜಾರಿ, ಬಸವರಾಜ ಬಿರಾದಾರ, ಚಂದ್ರಶೇಖರ ಪೂಜಾರಿ ರತ್ನಪ್ಪ ವಾಲಿಕಾರ, ಲಕ್ಷ್ಮೀಬಾಯಿ ಬಿರಾದಾರ, ಬಸವಂತ್ರಾಯ ಮಾನಸೂಣಗಿ, ಗೌಡಪ್ಪ ಚಾಗಶೆಟ್ಟಿ, ಕಸ್ತೂರಿಬಾಯಿ ಪುರಾಣಿಕ, ಶರಣಪ್ಪ ಕೆಂಬಾವಿ ಸೇರಿದಂತೆ ಅನೇಕರು ಸರಕಾರಕ್ಕೆ ಒತ್ತಾಯಿಸಿದರು.