spot_img
spot_img

ನವ್ಯೋತ್ತರ ಕಾವ್ಯ ಭಾಷೆ ಸಂಕೀರ್ಣ ಮತ್ತು ವೈವಿಧ್ಯಮಯ ಅರ್ಥ ವ್ಯಾಪ್ತಿಯುಳ್ಳದ್ದು : ಡಾ ಹರೀಶ್ ಕೂಲ್ಕಾರ

Must Read

- Advertisement -

ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಆಶ್ರಯದಲ್ಲಿ ಲಿಂ.ಗಂಗಾ ಕಂಬಾರ ದತ್ತಿ ಕಾರ್ಯ ಕ್ರಮದಲ್ಲಿ ಶ್ರೀಮತಿ ಯಮುನಾ ಕಂಬಾರ ಅವರ ತ್ರಿವಳಿ ಸಾಹಿತ್ಯ ಕೃತಿ ಬಿಡುಗಡೆಯ ಸಮಾರಂಭದ ನಡೆಯಿತು.

ಸಮಾರಂಭದಲ್ಲಿ ಪ್ರೀತಿ ಅಂದರೆ.. ಕವನ ಸಂಕಲನ ಕುರಿತು ಮಾತನಾಡಿದ ಬೆಳಗಾವಿಯ ಆರ್.ಪಿ. ಡಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ ಹರೀಶ ಕೊಲ್ಕಾರ ಅವರು, ನವ್ಯ,ನವ್ಯೋತ್ತರದ ಕಾವ್ಯ ಭಾಷೆಯು ಪ್ರತಿಮಾತ್ಮಕ ಮಾತ್ರವಲ್ಲದೇ ಇಂದಿನ ಸಂಕೀರ್ಣ ಬದುಕಿನ ಪ್ರತಿಬಿಂಬದಂತೆ ಇದೆ,ಕಾವ್ಯಾರಾಧಕರ ಚಿಂತನೆಯ ತೀಕ್ಷ್ಣತೆ,ತೀವ್ರತೆ ಯನ್ನು ಚುರುಕುಗೊಳಿಸುವಂತಿದೆ. ವಿಶ್ರಾಂತ ಆದರ್ಶ ಶಿಕ್ಷಕಿ ಯಮುನಾ ಕಂಬಾರ ಅವರ ಕಾವ್ಯವು ಪ್ರಚಲಿತ ವಿದ್ಯಮಾನಗಳ ಧ್ಯಾನಸ್ಥ ಅವಲೋಕನವಾಗಿದೆ,ವ್ಯವಸ್ಥೆಯ ಅಸ್ತವ್ಯಸ್ತ ಸ್ಥಿತಿಯನ್ನು ಸಾಮೂಹಿಕ ಧ್ವನಿಯಾಗಿ ಅಭಿವ್ಯಕ್ತಿಸುವಲ್ಲಿ ಯಶಸ್ವಿಯಾಗಿದೆ ಎಂದು ಅಭಿಪ್ರಾಯ ಪಟ್ಟರು.

ಯಮುನಾ ಕಂಬಾರ ಅವರ ಕಥಾ ಸಂಕಲನ, ಎರಡು ಫೈಲುಗಳ ನಡುವೆ ಕೃತಿ ಕುರಿತು ಮಾತನಾಡಿದ ಪ್ರಾಚಾರ್ಯ ಡಾ ನಿರ್ಮಲಾ ಬಟ್ಟಲ ಅವರು, ಇಂದಿನ ಪರಿಸರದ ಸ್ಥಿತಿ ಗತಿಗಳ ಮೇಲೆ ಬೆಳಕೆರೆವ ಯಮುನಾ ಅವರ ಕತೆಗಳು ಸಂದೇಶ ಪ್ರಧಾನ ವಾಗಿವೆ, ಕತೆಗಳ ಪಾತ್ರ ಮತ್ತು ನಿರೂಪಕರ ಭಾಷೆಯಲ್ಲಿ ಭಿನ್ನತೆಯಿರುವದು ಅಪೇಕ್ಷಣೀಯ ಎಂದರು.ಕತೆಗಳ ವಸ್ತು ವಿಷಯವನ್ನು ಕುತೂಹಲಕರವಾಗಿ ವಿಶ್ಲೇಷಿಸಿದರು.

- Advertisement -

ಯಮುನಾ ಅವರ ಎರಡನೆಯ ಇಂಗ್ಲಿಷ್ ಕವನ ಸಂಕಲನ ವಾದ My Shadow ಕೃತಿ ಕುರಿತು ಮಾಡಿದ ವಿಶ್ರಾಂತ ಇಂಗ್ಲಿಷ್ ಉಪನ್ಯಾಸಕಿ ಡಾ.ಗುರುದೇವಿ ಹುಲೆಪ್ಪನವರ ಮಠ ಅವರು ಯಮುನಾ ಅವರು ಕನ್ನಡದಲ್ಲಿ ಬರೆಯುವಷ್ಟೆ ಸಮರ್ಥ ವಾಗಿ ಇಂಗ್ಲೀಷ್ ದಲ್ಲಿಯೂ ಬರೆಯುತ್ತಿ ದ್ದು,ಅವರ ಕಾವ್ಯ ಭಾಷೆಯು ಮನೋವಿಶ್ಲೇಷಣೆಯ ತಾತ್ವಿಕ ಸೊಬಗಿನಿಂದ ಕೂಡಿದೆ ಎಂದು ಸೋದಾಹರಣವಾಗಿ ವಿವರಿಸಿದರು.

ತ್ರಿವಳಿ ಕೃತಿ ಬಿಡುಗಡೆ ಮಾಡಿದ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ರಾದ ರಾಮಯ್ಯ ಅವರು ಜಿಲ್ಲೆಯ ಬರಹಗಾರರ ಸಾಹಿತ್ಯ ಕೃಷಿಯು ಗುಣ ಗಾತ್ರಗಳೆರಡರಲ್ಲಿಯೂ ಮೌಲಿಕ ವಾಗಿದೆ,ಅದು ಓದುಗರ ಸಂತಸವನ್ನು ಹೆಚ್ಚಿಸಿದೆ ಎಂದು ಹೇಳಿದರು. ದ್ವಿಭಾಷಾ ಲೇಖಕಿ ಯಮುನಾ ಕಂಬಾರ ತಮ್ಮ ಬರಹ ಕೃಷಿಯ ಪ್ರೇರಕರನ್ನು ಕೃತಜ್ಞತೆಯಿಂದ ನೆನೆದರು.

- Advertisement -

ಬೆಳಗಾವಿ ಜಿಲ್ಲೆ ಯ ಲೇಖಕಿಯರ ಸಂಘ ದ ಅಧ್ಯಕ್ಷೆ ,ಸಾಹಿತಿ ಡಾ ಹೇಮಾ ಸೋನೋಳಿ ಅವರು ಪ್ರಾಸ್ತವಿಕವಾಗಿ ಮಾತನಾಡಿದರು,ರಾಷ್ಟ್ರ ಪ್ರಶಸ್ತಿ ವಿಭೂಷಿ ತ ಶಿಕ್ಷಕಿ,ಕವಯಿತ್ರಿ ಹಮಿದಾ ಬೇಗಂ ದೇಸಾಯಿ ಸ್ವಾಗತಿಸಿದರು,ಕವಯಿತ್ರಿ ಇಂದಿರಾ ಮೋಟೇಬೆನ್ನೂ ರ ವಂದಿಸಿದರು, ಪ್ರಾಚಾರ್ಯ ಡಾ ರಾಜನಂದಾ ಘಾರ್ಗಿ ಕಾರ್ಯಕ್ರಮ ನಿರೂಪಿಸಿದರು. ಶರಣೆ ಲಲಿತಾ ಪರ್ವತಿಕರ ವಚನ ಪ್ರಾರ್ಥನೆ ಸಲ್ಲಿಸಿದರು. ಹಿರಿಯ ಲೇಖಕಿ ನೀಲಗಂಗಾ ಚರಂತಿಮಠ ವೇದಿಕೆಯ ಮೇಲಿದ್ದರು.

ಸಮಾರಂಭದಲ್ಲಿ ಸ.ರಾ ಸುಳಕೂಡೆ ಎಮ್ ವೈ ಮೆಣಸಿನಕಾಯಿ, ಶಿವಾನಂದ ತಲ್ಲೂರ,ಬಸವರಾಜ ಹಿರೇಮಠ,ಅಪ್ಪಾಸಾಬ ಜಾಧವ,ಮಂಜುನಾಥ ಕಂಬಾರ ಕವಯಿತ್ರಿ

ಆಶಾ ಕಡಪಟ್ಟಿ ಮತ್ತು ಲೇಖಕಿಯರ ಸಂಘದ ಸದಸ್ಯೆಯರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group