ಮೂಡಲಗಿ:- ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದು ಅದು ಎಲ್ಲರ ಆಶಾದಾಯಕ ಬಜೆಟ್ ಆಗಿದೆ ಎಂದು ಅರಭಾಂವಿ ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ಶ್ಲಾಘಿಸಿದ್ದಾರೆ.
ಸಿನಿಮಾ ಕ್ಷೇತ್ರಕ್ಕೆ ಉದ್ಯಮ ಸ್ಥಾನಮಾನ ಕರ್ನಾಟಕವು ಶೇ.7.4 ರಷ್ಟು ಜಿಎಸ್‌ಡಿಪಿ ಬೆಳವಣಿಗೆ ದರವನ್ನು ಸಾಧಿಸುವ ವಿಶ್ವಾಸ, ದೇಶೀಯ ಉತ್ಪನ್ನಕ್ಕೆ ಶೇಕಡಾ 8.4 ರಷ್ಟು ಕೊಡುಗೆ,
ಸವದತ್ತಿಯ ರೇಣುಕಾ ಯಲ್ಲಮ್ಮ ಕ್ಷೇತ್ರ ಅಭಿವೃದ್ಧಿಗೆ
ಕ್ರಮ ವಿಶೇಷ ಬಂಡವಾಳ ಯೋಜನೆಯಡಿ ಒಟ್ಟಾರೆ 199 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ಪ್ರಮುಖ ಧಾರ್ಮಿಕ ಸ್ಥಳ
ಸವದತ್ತಿಯ ರೇಣುಕಾ ಯಲ್ಲಮ್ಮ ಕ್ಷೇತ್ರ ಹಾಗೂ
ಬೆಂಗಳೂರಿನಲ್ಲಿರುವ ದೇವಿಕಾರಾಣಿ ರೋರಿಚ್ ಎಸ್ಟೇಟ್
ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು.ಅಂತರ್ಜಲ
ಹೆಚ್ಚಿಸಲು ಯೋಜನೆ,ನೀರಾವರಿ ಯೋಜನೆಗೆ ಸರ್ಕಾರ ಒತ್ತು
ಕೃಷ್ಣಾ ಕಣಿವೆ, ಕಾವೇರಿ ಕಣಿವೆ ಹಾಗೂ ಇತರ ನದಿಗಳ
ಕಣಿವೆಯ ವಿವಿಧ ಯೋಜನೆಗಳಡಿ ಬಾಕಿ ಕಾಮಗಾರಿಗಳ
ಪೂರ್ಣಗೊಳಿಸಲು ಕ್ರಮ. ರಾಜ್ಯಾದ್ಯಂತ ಸಣ್ಣ ನೀರಾವರಿ
ಯೋಜನೆಗಳಿಗೆ 2 ಸಾವಿರ ಕೋಟಿ ರೂ. ಹೀಗೆ ಹತ್ತು ಹಲವು
ಜನಪರ ಹಾಗೂ ಬಡವರ ಪಾಲಿನ ಆಶಾದಾಯಕ ಬಜೆಟ್ ಆಗಿದೆ ಎಂದು ದಳವಾಯಿ ಹೇಳಿದ್ದಾರೆ.