ಬೀದರ – ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ ಎಂಬ ಗಾದೆ ಮಾತಂತೆ ಗಡಿ ಜಿಲ್ಲೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಕಳೆದ ವರ್ಷದಿಂದ ಕರೋನಾ ವೈರಸ್ ಸೊಂಕಿಗೆ ಸುಮಾರು ಐದು ನೂರಕ್ಕಿಂತಲು ಹೆಚ್ಚು ಜನರ ಬಲಿಯಾದ ಮೇಲೆ ಇಂದು ಜ್ಞಾನೋದಯ ವಾಗಿದ್ದು ಔರಾದ ತಾಲ್ಲೂಕಿನ ಸಂತಪೂರ ಹಾಗೂ ಕೌಠಾ ಪಂಚಾಯಿತಿಗಳಿಗೆ ದಿಢೀರ್ ಭೇಟಿ ನೀಡಿದರು.
ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯವೈಖರಿಯನ್ನು ಪರಿಶೀಲಿಸಿದ ಸಚಿವರು ಕಛೇರಿಗೆ ಭೇಟಿ ನೀಡುತ್ತಿದ್ದಂತೆ ಕರ್ತವ್ಯಕ್ಕೆ ಹಾಜರಾಗಿರುವ ಸಿಬ್ಬಂದಿಗಳು ಮತ್ತು ಗೈರಾಗಿರುವ ಸಿಬ್ಬಂದಿಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಪ್ರತಿಯೊಂದು ಸಿಬ್ಬಂದಿಯನ್ನು ಮಾತನಾಡಿಸಿ, ತಮ್ಮ ಜವಾಬ್ದಾರಿಗಳೇನು ಎಂದು ಪ್ರಶ್ನಿಸಿದರು.
ಬೆಳಗ್ಗೆಯಿಂದ ಅವರು ಮಾಡಿರುವ ಕೆಲಸ-ಕಾರ್ಯಗಳ ಬಗ್ಗೆ ವಿವರಣೆಯನ್ನು ಪಡೆದ ಸಚಿವರು, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎಷ್ಟು ಜನರಿಗೆ ಪಾಸಿಟಿವ್ ದೃಢಪಟ್ಟಿದೆ ?, ಎಷ್ಟು ಜನ ಹೋಮ್ ಐಸೋಲೇಶನ್‍ನಲ್ಲಿದ್ದಾರೆ ?, ಎಷ್ಟು ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ? ಎಷ್ಟು ಜನ ಮೃತಪಟ್ಟಿದ್ದಾರೆ ? ಎಂಬ ಇತ್ಯಾದಿ ಮಾಹಿತಿ ಯನ್ನು ಪಡೆಯುವ ಮೂಲಕ ಸೋಂಕು ನಿಯಂತ್ರಣಕ್ಕಾಗಿ ಪಂಚಾಯಿತಿ ಹೇಗೆ ಕೆಲಸ ಮಾಡಬೇಕೆನ್ನುವ ಕುರಿತು ನಿರ್ದೇಶನ ನೀಡಿದರು.
ಸರಿಯಾದ ಉತ್ತರ ನೀಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇಲ್ಲಿಯವರೆಗೆ ಏನು ಮಾಡಿದ್ದೀರೋ ಗೊತ್ತಿಲ್ಲ. ಇನ್ನು ಮುಂದೆ ರಾಜ್ಯಕ್ಕೆ ಕಂಟಕ ವಾಗಿ ಪರಿಣಮಿಸಿ ಇರುವ ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಸಹಕಾರ ನೀಡಬೇಕು ಎಂದು ತಿಳಿಸಿದರು.
ದಾಖಲಾತಿಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಸಂತಪೂರ ಹಾಗೂ ಕೌಠಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಸರಿಯಾಗಿ ಕೆಲಸ ಮಾಡದ ಎಲ್ಲಾ ಪಿಡಿಓಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಇದೇ ವೇಳೆ ಸಮರ್ಪಕ ಮಾಹಿತಿ ನೀಡಲು ವಿಫಲರಾದ ತಾಲ್ಲೂಕು ಆರೋಗ್ಯಾಧಿಕಾರಿ ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕರ ಅಧಿಕಾರಿಯನ್ನು ಸಚಿವರು ತೀವ್ರ ತರಾಟೆಗೆ ತೆಗೆದುಕೊಂಡರು. ಇದನ್ನೆಲ್ಲ ನೋಡಿದರೆ ಈ ಮೇಲಿನ ಗಾದೆ ನೆನಪಿಗೆ ಬರುತದೆ ಏಕೆಂದರೆ ಸಚಿವರು ಈ ಕೆಲಸ ಕಳೆದ ವರ್ಷ ಕರೋನಾ ಬಂದಾಗಲೆ ಮಾಡಿದರೆ ಜಿಲ್ಲೆಯಲ್ಲಿ ಇಷ್ಟೊಂದು ಜನರು ಕರೋನಾ ವೈರಸ್ ಬಲಿಯಾಗುತಿರಲಿಲ್ಲ ಎಂಬುದು ಜನರ ಮಾತಾಗಿದೆ.
ಅಲ್ಲದೆ ಕುಂಭಕರ್ಣನನ್ನು ಮೀರಿಸುವ ನಿದ್ರೆ ಯಲ್ಲಿ ಇರುವ ಸರ್ಕಾರ ಸಚಿವರು ಇರುವದರಿಂದ ನಮ್ಮ ರಾಜ್ಯದ ಜನತೆಯ ಸಾವಿರಾರು ಜನರನ್ನು ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಹೇಳಬಹುದು. ಒಂದು ವರ್ಷದ ನಂತರವಾದರು ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜ್ಞಾನೋದಯ ವಾದಂತೆ ದೇಶದ ಇತರ ಜನಪ್ರತಿನಿಧಿ ಗಳಿಗೆ ಆಗಿ ನಮ್ಮ ಜನರು ಬದುಕುಳಿಯಲು ಸಹಾಯ ಮಾಡುವಂತೆ ಜನರು ದೇವರಲ್ಲಿ ಪ್ರಾರ್ಥನೆ ಸಲ್ಲಿಸುವತಾಗಿದೆ.
ವರದಿ : ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ