ಬೀದರ – ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ.ಯೋಗವು ಮನಸ್ಸು ಮತ್ತು ದೇಹ; ಚಿಂತನೆ ಮತ್ತು ಕ್ರಿಯೆ; ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸುತ್ತದೆ ಎಂದು ಸಚಿವ ಪ್ರಭು ಚವ್ಹಾಣ ಹೇಳಿದರು.
ಕೋವಿಡ್ ಹಿನ್ನೆಲೆಯಲ್ಲಿ 7ನೇ ಅಂತಾರಾಷ್ಟ್ರೀಯ ಯೋಗbದಿನಾಚರಣೆಯ ಪ್ರಯುಕ್ತ ಪ್ರಭು ಚವ್ಹಾಣ ಅವರು ಇಂದು ಬೋಂತಿ ತಾಂಡಾದ ತಮ್ಮ ಮನೆಯಲ್ಲಿ ಯೋಗ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಸಚಿವರು ಎಲ್ಲ ಸಾರ್ವಜನಿಕರು ಕೂಡ ತಮ್ಮ-ತಮ್ಮ ಮನೆಗಳಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ಅಂತರಾಷ್ಟ್ರೀಯ ಯೋಗ ದಿನ ಆಚರಿಸಬೇಕೆಂದು ವಿನಂತಿಸಿದರು.
ಹಾಗೆಯೇ ಪ್ರಕೃತಿ ಮತ್ತು ಮನುಷ್ಯ ನಡುವೆ ಸಾಮರಸ್ಯವನ್ನುಂಟು ಮಾಡುತ್ತದೆ. ಯೋಗವು ಆರೋಗ್ಯ ಮತ್ತು ಯೋಗಕ್ಷೇಮದ ಸಮಗ್ರ ವಿಧಾನವಾಗಿದೆ.
ಯೋಗದ ಗುರಿ ಕೇವಲ ದೇಹವನ್ನು ಸರಿಪಡಿಸುವುದು ಮಾತ್ರವಲ್ಲ. ಮನಸ್ಸು, ದೇಹ ಮತ್ತು ಆತ್ಮವನ್ನು ಶುದ್ದೀಕರಿಸಲು ನೆರವಾಗುವ ಅಮೂಲ್ಯ ಸಾಧನವಾಗಿದೆ.ನಮ್ಮ ಪೂರ್ವಜರ ಅತ್ಯಮೂಲ್ಯ ಕೊಡುಗೆಯಾದ ಯೋಗವನ್ನು ಜಗತ್ತಿನ ಅನೇಕ ದೇಶದ ಜನತೆ ತಮ್ಮ ಬದುಕಿನ ಪ್ರಮುಖ ಚಟುವಟಿಕೆಯನ್ನಾಗಿಸಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಚವ್ಹಾಣ ಹೇಳಿದರು.