spot_img
spot_img

ಜ್ಞಾನ ಗಂಗೋತ್ರಿಯಲ್ಲಿ ಸಂಭ್ರಮದ ಪ್ರಜಾ ರಾಜ್ಯೋತ್ಸವ

Must Read

- Advertisement -

ಮೂಡಲಗಿ: ತಾಲೂಕಿನ ರಾಜಾಪೂರ ಗ್ರಾಮದ ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ 74ನೇ ಪ್ರಜಾ ರಾಜ್ಯೋತ್ಸವ ದಿನವನ್ನು ಭವ್ಯವಾದ ಮೆರವಣಿಗೆ ಮೂಲಕ ಆಚರಿಸಲಾಯಿತು.

ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರಾದ ರಾಮಚಂದ್ರ ಗುಂಡಪ್ಪಗೋಳ ಇವರು ಧ್ವಜಾರೋಹಣ ಮಾಡಿ ಧ್ವಜ ವಂದನೆಯನ್ನು ಸಲ್ಲಿಸಿದರು.

ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ, ರಾಷ್ಟ್ರಮಾತೆ ಭಾರತಾಂಬೆ, ರಾಷ್ಟ್ರಪಿತ ಮಹಾತ್ಮ ಗಾಂಧಿ, ಸ್ವಾತಂತ್ರ್ಯ ಹೋರಾಟಗಾರರಾದ ಸುಭಾಸಚಂದ್ರ ಬೋಸ್, ಜವಹರಲಾಲ್ ನೆಹರು, ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ, ಕಿತ್ತೂರ ಚೆನ್ನಮ್ಮ, ಭಕ್ತ ಕನಕದಾಸರನ್ನು ಒಳಗೊಂಡಂತೆ ನಾಡಿನ ಕಲೆ, ಸಾಹಿತ್ಯ, ದೇಶ ಪ್ರೇಮವನ್ನು ಬಿಂಬಿಸುವ ಹಲವರ ವೇಷ ಧರಿಸಿದ ಮಕ್ಕಳನ್ನು ಒಳಗೊಂಡು ವಿಶಿಷ್ಟವಾಗಿ 74ನೇ ಪ್ರಜಾ ರಾಜ್ಯೋತ್ಸವವನ್ನು ಆಚರಿಸಲಾಯಿತು.

- Advertisement -

ಶಿಕ್ಷಕರಾದ ಬಾಬು ದೊಡಮನಿ, ಶಿಕ್ಷಕಿ ದೀಪಾ ಕಪ್ಪಲಗುದ್ದಿ, ಮಾಯಾ ಕುರುಬರ ಮಾತನಾಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಶಿವಪುತ್ರ ಗುಂಡಪ್ಪಗೋಳ, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಪಾಲಕರು-ಪೋಷಕರು, ಮಕ್ಕಳು-ಶಿಕ್ಷಕರು ಸೇರಿದಂತೆ,  ಅಪಾರ ಸಂಖ್ಯೆಯ ಗ್ರಾಮಸ್ಥರು ಉಪಸ್ಥಿತರಿದ್ದರು.

ಶಾಲೆಯ ಶಿಕ್ಷಕ ಶೀಧರ ನಿರೂಪಿಸಿದರು, ಪ್ರೌಢ ಶಾಲೆಯ ಪ್ರಧಾನ ಗುರುಗಳಾದ ಮಹೇಶ ಡಿ ಸ್ವಾಗತಿಸಿದರು, ಪ್ರಾಥಮಿಕ ಶಾಲೆಯ ಪ್ರಧಾನ ಗುರುಮಾತೆ  ಕುಮಾರಿ ದೀಪಾ ಬಬಲಿ ವಂದಿಸಿದರು.

- Advertisement -
- Advertisement -

Latest News

ಹಾಲವಾಣ(ಹೊಂಗಾರಕ)

ಸಣ್ಣ ವಯಸ್ಸಿನಲ್ಲಿ ಕೈಗೆ ಮದರಂಗಿ ಕಟ್ಟಲು ಬಳಸುತ್ತಿದ್ದ ಎಲೆ ಹಾಲವಣ. ಇದರ ಬಳಕೆ ಒಂದೇ ಎರಡೇ. ರೈತರ ಹೊಲದಲ್ಲಿ ನೆಟ್ಟು ಎಲೆ ಬಳ್ಳಿ ಮೆಣಸಿನ ಬಳ್ಳಿ ಹಬ್ಬಿಸಲು....
- Advertisement -

More Articles Like This

- Advertisement -
close
error: Content is protected !!
Join WhatsApp Group