spot_img
spot_img

ಪ್ರತಿಭಾ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ

Must Read

ಸಿಂದಗಿ: ಪ್ರತಿಯೊಂದು ಮಗುವಿನಲ್ಲಿ ಒಂದು ಪ್ರತಿಭೆ ಅಡಗಿರುತ್ತದೆ ಆ ಪ್ರತಿಭೆಗೆ ಬೆಲೆ ಕಟ್ಟಲಾಗದು ಪ್ರತಿಭಾ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದ್ದು ಇದನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಂಡು ಉನ್ನತ ಸಾಧಕರಾಗಬೇಕು ಎಂದು ಕ್ಷೇತ್ರ ಸಮನ್ವಧಿಕಾರಿ ಆಯ್.ಎಸ್.ಟಕ್ಕೆ ಹೇಳಿದರು.

ತಾಲೂಕಿನ ಗುಬ್ಬೇವಾಡ ಗ್ರಾಮ ಮುರಾರ್ಜಿ ದೇಸಾಯಿ ವಸ್ತಿ ಶಾಲೆಯ ಆವರಣದಲ್ಲಿ  ಜಿಲ್ಲಾ ಪಂಚಾಯತ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಲಯ ಸಿಂದಗಿ ಹಾಗೂ ಗುಬ್ಬೇವಾಡ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ/ ಕಲೋತ್ಸವ ಉದ್ಘಾಟಿಸಿ ಮಾತನಾಡಿ  ಗ್ರಾಮೀಣ ಪ್ರತಿಭೆಗಳು ದೇಶ ಮಟ್ಟದಲ್ಲಿ ತಮ್ಮ ಪ್ರತಿಭಾ ಅರಳಲು ಈ ಪ್ರತಿಭಾ ಕಾರಂಜಿ ಅವಶ್ಯಕ ಇದೆ  ತಾವು  ವಿದ್ಯಾರ್ಥಿಗಳು ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದÀು ಸಲಹೆ ನೀಡಿದರು.

ಬಿ ಆರ್ ಪಿ ಶ್ರೀಮತಿ ಎಸ್.ಎ.ರೆಬಿನಾಳ ಮಾತನಾಡಿ, ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸಿ ಬೆಳಕಿಗೆ ತರಲು ಶಿಕ್ಷಕರೊಂದಿಗೆ ಪಾಲಕರು ಪಾತ್ರ ಮೇಲು ಕಾಣಬೇಕು ಎಂದರು.

ತಾಲೂಕು ಶಿಕ್ಷಕರ ಸಂಘದ ಪ್ರದಾನ ಕಾರ್ಯದರ್ಶಿ ರಾಯಪ್ಪ ಇವಣಿಗಿ, ಮುರಾರ್ಜಿ ದೇಸಾಯಿ ಶಾಲೆಯ ಪ್ರಾಂಶುಪಾಲ ಎಂ.ಹೆಚ್.ಬೀಳಗಿ ಮಾತನಾಡಿದರು.

ಶಿಕ್ಷಕರಾದ ಬಸವರಾಜ ಅಗಸರ. ಎಸ್.ಡಿ.ಜೇವರಗಿ. ಬಸವರಾಜ ಸೋಮಪೂರ. ಸಾಹೇಬU್ಷಡ ಹರನಾಳ. ಎಸ್.ಎಂ.ಪಾಟೀಲ. ಆರ್.ಜಿ.ಭೂಸನೂರ. ಭೀಮನಗೌಡ ಬಿರಾದಾರ. ಡಿ.ಎ.ನದಾಪ. ಎನ್.ಎಸ್.ಬಿರಾದಾರ. ಮುಖ್ಯಗುರು ಎನ್.ಎಲ್.ಕೊಣ್ಣೂರ, ಡಿ.ಬಿ. ಅಂಬಿಗೇರ. ಭಾಗಣ್ಣ ಬಿ.ಗೋಲಗೇರಿ. ಎಸ್.ಜಿ. ಪಾಟೀಲ. ಎಸ್.ಬಿ.ಶಿರೂರ. ಬಸವರಾಜ ಮೇಲಿನಮನಿ .ಯು.ಎಸ್.ಬಿರಾದಾರ, ಎಂ.ಎಲ್.ಹೊನ್ನಳ್ಳಿ. ಎಸ್.ಆರ್. ರಾಠೋಡ. ಹೆಚ್.ಆರ್.ಬಾಗಲಕೋಟಿ. ಎಲ್.ಆರ್.ಚವ್ಹಾಣ. ಗೊಲ್ಲಾಳಪ್ಪ ಹಡಗಲಿ. ಬಸವರಾಜ ಚಾವರ. ಉಮೇಶ ಬಡಿಗೇರ. ಆರ್.ಎಸ್.ಚಿಟ್ಟಿ. ಕೆ.ಇ.ಕೋಟಾರಗಸ್ತಿ. ಶಿಕ್ಷಕಿಯರಾದ ಜೆ.ವ್ಹಿ.ಅಂಬಿಗೇರ. ಎ.ವ್ಹಿ.ಪಾಟೀಲ. ಆರ್.ಎಂ.ಪೂಜಾರಿ. ಎಸ್.ಎಸ್.ಕೊತಬಾಳ. ಎಸ್.ಎಸ್.ಝಲ್ಪಿ, ಎಸ್.ಎಸ್.ಮುದಗಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಶಿಕ್ಷಕ ಎಸ್ .ಬಿ.ಮಳ್ಳಿ ನಿರೂಪಿಸಿದರು. ಗುಬ್ಬೇವಾಡ ಸಮೂಹ ಸಂಪನ್ಮೂಲ ಕೇಂದ್ರ  ಸಿ ಆರ್ ಪಿ ಪ್ರಭುಗೌಡ ಏವೂರ ಸ್ವಾಗತಿಸಿದರು. ಶಿಕ್ಷಕ ಆರ್.ಎಲ್.ಗುಬ್ಬೇವಾಡ ಹಾಗೂ ಸಂಗಡಿಗರು ಪ್ರಾಥನೆ ಗೀತೆ ಹೇಳಿದರು. ಶಿಕ್ಷಕ ಉಮೇಶ ಬಡಿಗೇರ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!