ಸವದತ್ತಿ: ಸವದತ್ತಿ ಉತ್ತರ, ದಕ್ಷಿಣ ಮತ್ತು ಇನಾಂ ಹೊಂಗಲ ಸಮೂಹ ಸಂಪನ್ಮೂಲ ಕೇಂದ್ರಗಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳನ್ನು ಸ ಹಿ ಪ್ರಾ ಶಾಲೆ ನಂ1 ಸವದತ್ತಿ ಮತ್ತು ಸ ಉ ಹಿ ಪ್ರಾ ಶಾಲೆ ಸವದತ್ತಿ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಗುರುಭವನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷರಾಗಿ ಸವದತ್ತಿ ಪುರಸಭೆಯ ನೂತನ ಅಧ್ಯಕ್ಷರಾದ ಶ್ರೀಮತಿ ಚಿನ್ನವ್ವ ಗಿರೆಪ್ಪ ಹುಚ್ಚನ್ನವರ ಉಪಸ್ಥಿತರಿದ್ದು ಉದ್ಘಾಟನೆ ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಮ್ ಎನ್ ದಂಡಿನ ಭಾಗವಹಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ “ಪ್ರತಿಭಾ ಕಾರಂಜಿ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವ ವೇದಿಕೆ ಯಾಗಿದೆ.ಇಲ್ಲಿ ಸೂಕ್ತ ಪ್ರತಿಭೆ ಗಳನ್ನು ಗುರುತಿಸಿ ತಾಲೂಕು ಮಟ್ಟದ ಸ್ಪರ್ಧೆ ಗಳಿಗೆ ಕಳುಹಿಸಲು ತಿಳಿಸಿದರು”.
ನಂತರ ನೂತನ ಪುರಸಭೆ ಅಧ್ಯಕ್ಷರಿಗೆ ಸತ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಪಿ. ಕೆ. ಪಿ. ಎಸ್. ಅಧ್ಯಕ್ಷರಾದ ಬಿ ಎನ್.ಪ್ರಭುನವರ.ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾದ ಮೈತ್ರಾದೇವಿ ವಸ್ತ್ರ ದ, ಪುರಸಭೆ ಸದಸ್ಯರಾದ ಭಾಗ್ಯಶ್ರೀ ಸಾಲೋಣಿ, ಸಂಗಮೇಶ ಹಾದಿಮನಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ದಾವಲಸಾಬ ಸಣ್ಣಕ್ಕಿ , ಉರ್ದು ಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಖಿಲ ದೊಡವಾಡ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಸಂಘದ ತಾಲೂಕಿನ ಅಧ್ಯಕ್ಷರಾದ ಕಿರಣ ಕುರಿ , ಸಂಘದ ನಿರ್ದೇಶಕರಾದ ಜಿ ಎಸ್ ಬಡಿಗೇರ, ಪ್ರಕಾಶ ಹೆಮ್ಮರಡಿ, ಎಸ್ ಎನ್ ತೋಟಗೇರ,ವಿರೇಶ ಚಂದರಗಿ,ಬಿಆರ್ ಪಿಗಳಾದ ರತ್ನಾ ಬಿ ಸೇತಸನದಿ, ಪ್ರಧಾನ ಗುರುಗಳಾದ ಕೆ ಎಸ್ ಸಿಂದೋಗಿ, ಶ್ರೀಮತಿ ಟಿ ಎಸ್ ಪೀರಜಾದೆ.ಸಮೂಹ ಸಂಪನ್ಮೂಲ ಕೇಂದ್ರದ ವ್ಯಕ್ತಿಗಳಾದ ಮಂಜುನಾಥ ಗಡೇಕಾರ, ಕ್ಲಸ್ಟರ್ ಗಳ ಎಲ್ಲ ಶಾಲಾ ಪ್ರಧಾನ ಗುರುಗಳು, ಸಹಶಿಕ್ಷಕರು ಮತ್ತು ಶಾಲಾ ಮಕ್ಕಳು ಭಾಗವಹಿಸಿದರು.ಕಾರ್ಯಕ್ರಮವನ್ನು ಟಿ ಆರ್ ಏಗನಗೌಡ್ರ ನಿರೂಪಿಸಿದರು.ಸಿ ಆರ್ ಪಿ ಯಾದ ರವಿ ಪಿ ನಲವಡೆ ಸ್ವಾಗತಿಸಿದರು.ಸಿಆರ್ ಪಿ ಎಚ್ ಎಲ್ ನದಾಫ ವಂದಿಸಿದರು.