ಮುನವಳ್ಳಿ: ಪಟ್ಟಣದ ಪ್ರೇರಣಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆ.೨೬ ರಂದು ಜಿ.ಪಂ.ಬೆಳಗಾವಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವರ ಸಹಯೋಗದಲ್ಲಿ ಪ್ರಾಥಮಿಕ ಶಾಲೆಗಳ ಮುನವಳ್ಳಿ, ಅರ್ಟಗಲ್ಲ, ಶಿಂದೋಗಿ ಕ್ಲಸ್ಟರ್ಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಜರುಗಿತು.
ಶಿಂದೋಗಿ ಕ್ಲಸ್ಟರ್ ಸಿಆರ್ಪಿ ನಾಗೇಶ ಹೊನ್ನಳ್ಳಿ ಪ್ರಾಸ್ತವಿಕವಾಗಿ ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಕಲೆಗಳನ್ನು ಉತ್ತೇಜಿಸುವ ಮೂಲಕ ಶಾಲಾ ವಿದ್ಯಾರ್ಥಿಗಳ ಕಲಾತ್ಮಕ ಪ್ರತಿಭೆ ಸೃಜನಾತ್ಮಕ ಕೌಶಲ್ಯಗಳನ್ನು ಹೊರತರಲು ಉತ್ತಮ ವೇದಿಕೆಯಾಗಿದೆ.ಕೊರೊನಾದಿಂದ ಸ್ಥಗಿತಗೊಂಡಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಮತ್ತೆ ಪ್ರಾರಂಭವಾಗಿವುದು ಮಕ್ಕಳಿಗೆ ಸಂತಸ ತಂದಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಪುರಸಭೆ ಕಾರ್ಯಾಲಯದ ವ್ಯವಸ್ಥಾಪಕರಾದ ಉಮಾ ಬೆಟಗೇರಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ವೈ.ಬಿ.ಕಡಕೋಳ ಮಾತನಾಡಿ “ ಪ್ರತಿಯೊಂದು ಮಗುವಿನಲ್ಲಿಯೂ ಒಂದು ಪ್ರತಿಭೆ ಅಡಗಿರುತ್ತದೆ. ಪ್ರತಿಭೆಗೆ ಬೆಲೆ ಕಟ್ಟಲಾಗದು. ಪ್ರತಿಭೆಯ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆತಾಗಿದ್ದು ಇದನ್ನು ಸದುಪಯೋಗ ಮಾಡಿಕೊಂಡು ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡುವಂತೆ “ ಕರೆ ನೀಡಿದರು. ಹಾಗೂ ಕಿಟಧಾಳ ಶಾಲೆ ಮುಖ್ಯಾಧ್ಯಾಪಕ ಗುರುನಾಥ ಪತ್ತಾರ ಮಾತನಾಡಿ “ಮಕ್ಕಳಲ್ಲಿರುವ ಆಗಾಧವಾದ ಪ್ರತಿಭೆಯನ್ನು ಹೊರಹೊಮ್ಮಿಸಲು ಪ್ರತಿಭಾ ಕಾರಂಜಿಯಂಥ ಕಾರ್ಯಕ್ರಮಗಳು ನಿರಂತರವಾಗಿ ಜರುಗಬೇಕು. ಮಕ್ಕಳಲ್ಲಿ ಪಠ್ಯದ ಜೊತೆಗೆ ಸೃಜನಾತ್ಮಕತೆ, ಕ್ರಿಯಾಶೀಲತೆ ಬೆಳೆಸುವುದು ಶಿಕ್ಷಕರ ಮತ್ತು ಪಾಲಕರ ಕರ್ತವ್ಯ,. ವಿದ್ಯಾರ್ಥಿಗಳು ಚಟುವಟಿಕೆಯಿಂದ ಕೂಡಿದ್ದರೆ ಮೆದುಳು ಚುರುಕಾಗಿ ಸರ್ವಾಂಗೀಣ ಅಭಿವೃದ್ದಿ ಹೊಂದುತಾರೆ”ೆ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಲಕ್ಷ್ಮೀನಗರ ಜಕಬಾಳ ಶಾಲೆ ಮುಖ್ಯಾಧ್ಯಾಪಕ ಬಿ.ಬಿ.ಹುಲಿಗೊಪ್ಪ. ಜಕಬಾಳ ಶಾಲೆಯ ಸಹ ಶಿಕ್ಷಕಿ ಎಸ್.ಐ.ವಡವಡಗಿ, ಪ್ರೌಢಶಾಕಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸುಧೀರ ವಾಗೇರಿ, ಖಜಾಂಚಿ ರುದ್ರಪ್ಪ ನಿಲುಗಲ್, ಅರ್ಟಗಲ್ ಶಾಲೆಯ ಶಿಕ್ಷಕಿ ಎ.ಎಸ್.ಪಾತಾಳಿ, ಕಿಟದಾಳ ಶಾಲೆಯ ಮಹಾದೇವಿ ಪಡೆಣ್ಣವರ. ಹಳ್ಳೂರು ಶಾಲೆಯ ಪ್ರಭಾರಿ ಮುಖ್ಯಾದ್ಯಾಪಕಿ ಪುಷ್ಪಾ ಗೌಡರ, ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆಗೈದ ಡಾ. ಸವಿತಾ ಗದಿಗೆನ್ನವರ, ಕುಮಾರೇಶ್ವರ ಅನುದಾನಿತ ಶಾಲೆಯ ಶಿಕ್ಷಕ ಸಂತೋಷ ಹೂಲಿ, ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೇರಣಾ ಶಾಲೆಗಳ ವ್ಯವಸ್ಥಾಪಕ ಗಿರೀಶ ಚನ್ನಪ್ಪಗೌಡ್ರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಹೇಶ ಕಲಕುಟಕರ, ಪುರಸಭೆ ಸದಸ್ಯ ಬಸವರಾಜ ದೊಡಮನಿ. ಶಿಕ್ಷಕರ ಸಂಘದ ಎಂ.ಎಸ್.ಹೊಂಗಲ, ಎ.ಎಸ್.ಮದನಬಾಂವಿ,ಆರ್.ಎಸ್.ಮೂಲಿಮನಿ, ಪ್ರೇರಣಾ ಶಾಲೆ ಮುಖ್ಯಾಧ್ಯಾಪಕ ಆನಂದ ಪ್ರಭುನವರ, ವಾಯ್.ಎಫ್.ಶ್ಯಾನಬೋಗ, ವೀರಣ್ಣ ಕೊಳಕಿ.ರಾಚಪ್ಪ ನೀಲಾಕಾರಿ,ಸುಧೀರ ಕಮ್ಮಾರ ಹೂವಪ್ಪ ಭಜಂತ್ರಿ, ಗಣೇಶ ಕಳನ್ನವರ,ಶಂಕರ ರಾಠೋಡ. ಎಸ್.ಸಿ.ಕುರಿ.ಎಸ್.ವೈ.ನಿಪ್ಪಾಣಿ.,ಮೈನುದ್ದೀನ ಕೊಳಚಿ. ಡಾ.ಚಲವಾದಿ. ಸುವರ್ಣಾ ಯಡಾಲ.ಎಚ್.ಜಿ.ನದಾಫ.ದಾಮಿನಿ ಪರಸನ್ನವರ.ಪುಷ್ಪಕರ್ಣವತಿ ಮುನವಳ್ಳಿ. ಭಾಗ್ಯಲಕ್ಷ್ಮೀ ಹೊನ್ನಳ್ಳಿ. ಪ್ರಾಚಾರ್ಯ ಆನಂದ ಪ್ರಭುನವರ. ರವಿ ಬೇವಿನಗಿಡದ. ರೂಪಾ ಚಕ್ಕಡಿ.ರಾಜಶೇಖರ ನಾಯ್ಕರ ಸಿ.ಟಿ.ಕುಲಮೂರ. ವೈ.ಟಿ.ತಂಗೋಜಿ.ಭಾರತಿ ಸಂದೀಮನಿ. ಹೇಮಾವತಿ ಹೊನ್ನಳ್ಳಿ.ನಾಗರಾಜ ಕಿತ್ತೂರ. ಮಹಾದೇವಿ ಹುಕ್ಕೇರಿ.ರಾಜೇಶ್ವರಿ ನಲವಡೆ. ಲಕ್ಕನ್ನವರ.ಅರ್ಟಗಲ್ಲ ಸಿಆರ್ಪಿ. ಜಿ.ಎಸ್.ಚಿಪ್ಪಲಕಟ್ಟಿ ಮುನವಳ್ಳಿ ಸಿಅರ್ಪಿ. ಎಂ.ಎಂ.ಮುರನಾಳ. ಸೇರಿದಂತೆ ವಿವಿಧ ಶಾಲಾ ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕರು ಇದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಶಾಲಾ ಮಕ್ಕಳಿಂದ ಭಕ್ತಿಗೀತೆಯ ನೃತ್ಯ ಪ್ರದರ್ಶನ ಜರುಗಿತು.
ವಿವಿಧ ಶಾಲಾ ಮಕ್ಕಳು ಚಿತ್ರಕಲೆ, ಭಾಷಣ, ಕ್ಲೇ ಮಾಡಲಿಂಗ್, ಛದ್ಮವೇಷ,ಅಭಿನಯ ಗೀತೆ, ಧಾರ್ಮಿಕ ಪಠಣ,ಕಥೆ,ಹೇಳುವುದು, ಆಶು ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನದೊಂದಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಉಮಾದೇವಿ ಏಣಗಿಮಠ ಪ್ರಾರ್ಥನಾ ಗೀತೆ ಹೇಳಿದರು. ಎನ್.ಎ. ಹೊನ್ನಳ್ಳಿ ಸ್ವಾಗತಿಸಿದರು. ರಾಚಪ್ಪ ನೀಲಾಕಾರಿ ವಂದಿಸಿದರು.