- Advertisement -
ಮೂಡಲಗಿ ಸಿ.ಆರ್.ಸಿ ಮಟ್ಟದ ಪ್ರತಿಭಾಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಶುಕ್ರವಾರದಂದು ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿ.ಪ್ರಾ ಶಾಲೆ, ಸ.ಕ.ಗಂ.ಶಾಲೆ ಮತ್ತು ಸ.ಉ.ಶಾಲೆ ಆವರಣದಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ.ಮನ್ನಿಕೇರಿ, ಅತಿಥಿಗಳಾಗಿ ಪುರಸಭೆ ಸದಸ್ಯರಾದ ಶ್ರೀಮತಿ ಖುರಷಾದ.ಅ.ನದಾಫ, ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ಯಮನಪ್ಪ ಸನ್ನಪ್ಪಗೋಳ ಮತ್ತು ಮುಖಂಡರಾದ ರಾಮು ಝಂಡೇಕುರುಬರ, ಬಸು ಝಂಡೇಕುರುಬರ , ಶ್ರೀಮತಿ ಸೀಮಾ ದೋಂಗಡಿ, ಪ್ರಾ.ಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾದ ಎಲ್.ಎಮ್.ಬಡಕಲ್, ಶಿಕ್ಷಣ ಇಲಾಖೆಯ ಸಂಯೋಜಕರಾದ ಬಸವರಾಜು.ಟಿ, ಸತೀಶ.ಬಿ.ಎಸ್, ಸಿ.ಆರ್.ಪಿ .ಎಸ್.ಎನ್.ದಬಾಡಿ, ಸಮೂಹದ ಎಲ್ಲ ಶಾಲೆಗಳ ಪ್ರಧಾನಗುರುಗಳು, ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆ ಎಡ್ವಿನ‌್ ಪರಸನ್ನವರ ನಡೆಸಿಕೊಟ್ಟರು ಮತ್ತು ಸಿ.ಆರ್.ಪಿ ಎಸ್.ಎನ್.ದಬಾಡಿ ಸ್ವಾಗತಿಸಿದರು.