ಸಿಂದಗಿ: ಮಕ್ಕಳ ಮುಂದಿನ ಶೈಕ್ಷಣಿಕ ಜೀವನದಲ್ಲಿ ಸಾಧನೆಗೈಯಲು ಮತ್ತು ಮುಂದಿನ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಪ್ರತಿಭಾ ಪುರಸ್ಕಾರ ಉತ್ತೇಜನ ನೀಡುತ್ತದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಬಸವ ಮಂಟಪದಲ್ಲಿ ಕರ್ನಾಟಕ ರಾಜ್ಯ ತಳವಾರ ಮಹಾಸಭಾ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ ಸ್ವಾಮಿಗಳ 76ನೇ ಹುಟ್ಟು ಹಬ್ಬ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ನೂತನ ಶಾಸಕರಿಗೆ ಸನ್ಮಾನ ಹಾಗೂ ತಳವಾರ ನೌಕರರ ಮಹಾಸಭಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮಾಜದ ಒಳಿತಿಗಾಗಿ ಹಾಗೂ ಧರ್ಮದ ಒಳಿತಿಗಾಗಿ ಇಡೀ ರಾಜ್ಯಾದ್ಯಂತ ಧರ್ಮ ಪ್ರಚಾರ ಮಾಡಿಕೊಳ್ಳುತ್ತ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಸಮಾಜದ ಸೇವೆಯಲ್ಲಿ ತೊಡಗಿದ ಶ್ರೀಗಳ ಕಾರ್ಯ ಶ್ಲ್ಯಾಘನೀಯ ಎಂದರು.
ಶ್ರೀ ಶಾಂತಗಂಗಾಧರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ರಾಜ್ಯ ತಳವಾರ ಮಹಾಸಭಾ ರಾಜ್ಯ ಉಪಾಧ್ಯಕ್ಷ ರಾಜಶೇಖರ ನರಗೋದಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಶರಣಪ್ಪ ಸುಣಗಾರ, ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಅಂಬಣ್ಣ ಸುಣಗಾರ, ತಾಲೂಕು ಅಧ್ಯಕ್ಷ ಮಹಾಂತೇಶ ಯರನಾಳ, ಸಿಪಿಐ ಬಿ.ಡಿ.ಧೂಳಖೇಡ, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಭು ವಾಲೀಕಾರ, ಪುರಸಭೆ ಮಾಜಿ ಅಧ್ಯಕ್ಷ ಹಣಮಂತ ಸುಣಗಾರ, ಕಲ್ಲು ಕಣಮೇಶ್ವರ, ಬಸವರಾಜ ತಾವರಖೇಡ, ಮಹಾನಂದಾ ಬಮ್ಮಣ್ಣಿ, ಜಯಶ್ರೀ ಹದನೂರ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.
ಶಿಕ್ಷಕ ಬಿ.ಎಸ್.ಬೂದಿಹಾಳ ಪ್ರಾರ್ಥನಾ ಗೀತೆ ಹಾಡಿದರು. ಭರತೇಶ ಹಿರೋಳ್ಳಿ ಸ್ವಾಗತಿಸಿದರು. ಸಂಜೀವ ಡಾಂಗೆ ನಿರೂಪಿಸಿದರು. ಚಂದ್ರಕಾಂತ ಬೂದಿಹಾಳ ವಂದಿಸಿದರು.