Mudalagi: ತುಕ್ಕಾನಟ್ಟಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಸಂಭ್ರಮದಿಂದ ಕತ್ತೆಗಳಿಗೆ ಮದುವೆ

Must Read

ಮೂಡಲಗಿ: ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಎಲ್ಲ ವಿಧಿ ವಿಧಾನಗಳೊಂದಿಗೆ ಗ್ರಾಮಸ್ಥರು ರವಿವಾರದಂದು ಕತ್ತೆಗಳ ಮದುವೆ ಕಾರ್ಯ ನೆರವೇರಿಸಿದರು.

ಕತ್ತೆಗಳ ಮದುವೆ ಕಾರ್ಯ ನೆರವೇರಿಸಿದರೆ ಮಳೆ ಬರುತ್ತದೆ ಎಂಬ ನಂಬಿಕೆಯಿಂದ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮಸ್ಥರು ಒಂದು ಗಂಡು ಮತ್ತು ಹೆಣ್ಣು ಕತ್ತೆಗಳನ್ನು ಗ್ರಾಮಕ್ಕೆ ಬರಮಾಡಿಕೊಂಡು ಗ್ರಾಮದ ಗ್ರಾಮ ಪಂಚಾಯತ ಎದುರಿಗೆ ಮದುವೆ ಮಂಟಪ ನಿರ್ಮಿಸಿ ಮನುಷ್ಯರ ಮದುವೆ ಸಮಾರಂಭಗಳಲ್ಲಿ ನಡೆಸಲಾಗುವ ಎಳ್ಳಕ್ಕಿ ಸಂತೆ, ಹಂದರ ತಪ್ಪಲ ತರುವದು, ಎದುರು ಭೇಟಿ, ಮದುಮಗಳನ್ನು ಕರೆತರುವುದು, ಭಷ್ಟಗಿ ಕಾರ್ಯಕ್ರಮ, ಸುರಿಗೆ ಸುತ್ತುವರೆಯುವದು, ಮಂಟಪಾಲಂಕಾರ, ಜೊತೆಗೆ ಮಂತ್ರ ಜಪಿಸಿ ಅಕ್ಷತೆ ನೆರವೇರಿಸಿ ಸಡಗರ ಸಂಭ್ರಮದಿಂದ ಮದುವೆ ಮಾಡಿ ನಂತರ ಗ್ರಾಮದ ಪ್ರಮುಖ ರಸ್ತೆಗಳ ಮೆರವಣಿಗೆ ಮೂಲಕ ಮಹಾಲಕ್ಷ್ಮೀದೇವಿ ದೇವಸ್ಥಾನ, ಕರಿಸಿದ್ಧೇಶ್ವರ ದೇವಸ್ಥಾನ, ದುರ್ಗಾದೇವಿ ದೇವಸ್ಥಾನ, ಸಿದ್ಧಾರೂಢ ಮಠ ಸೇರಿದಂತೆ ಗ್ರಾಮದ ಎಲ್ಲ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಮಾಡಿಸಿದರು.  

ಕತ್ತೆಗಳಿಗೆ ಗ್ರಾಮದ ಮಹಿಳೆಯರು ಆರತಿ ಎತ್ತಿ ಆಶೀರ್ವದಿಸಿದರು. 

ಈ ಸಂಧರ್ಭದಲ್ಲಿ ತುಕ್ಕಾನಟ್ಟಿ ಗ್ರಾಮದ ಹಿರಿಯರು, ಪಂಚಾಯತ ಸದಸ್ಯರು, ಸಾರ್ವಜನಿಕರು ಹಾಗೂ ಮಹಿಳೆಯರು ಭಾಗವಹಿಸಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group