ಸಿಂದಗಿ: ಪ್ರತಿ ವರ್ಷದಂತೆ ಆ.15 ರಂದು ಆಚರಿಸಲಾಗುತ್ತಿರುವ ಸ್ವಾತಂತ್ರ್ಯೋತ್ಸವ ಸಮಾರಂಭವನ್ನು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸೋಣ ಅದಕ್ಕೆ ಎಲ್ಲ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ಪ್ರಬಾರಿ ತಹಶೀಲ್ದಾರ ಸುರೇಶ ಚಾವಲಾರ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಸ್ವಾತಂತ್ರ್ಯೋತ್ಸವ ಸಿದ್ಧತೆ ಕುರಿತು ಹಮ್ಮಿಕೊಂಡ ಪೂರ್ವಬಾವಿ ಸಭೆಯಲ್ಲಿ ಮಾತನಾಡಿ, ಸರಕಾರದ ಶಿಷ್ಟಾಚಾರದಂತೆ ಜಿಲ್ಲಾ ಉಸ್ತುವಾರಿ ಸಚಿವರನ್ನು, ವಿಧಾನ ಪರಿಷತ್ ಸದಸ್ಯರನ್ನು, ನಿಗಮ ಮಂಡಳಿ ಅದ್ಯಕ್ಷರನ್ನು, ಸ್ಥಳೀಯ ಶಾಸಕರ ಹೆಸರುಗಳನ್ನು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿ ಆಹ್ವಾನ ನೀಡುವುದು ಅಲ್ಲದೆ ಶಾಲಾ ಮಕ್ಕಳಿಂದ ವಿವಿಧ ರೀತಿಯ ಮನರಂಜನೆ ಕಾರ್ಯಕ್ರಮಗಳು, ಪ್ರಭಾತಪೇರಿಯ ಮೂಲಕ ಎಸಿಸಿ ವಿದ್ಯಾರ್ಥಿಗಳಿಂದ ಧ್ವಜವಂದನೆ, ಕವಾಯತ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಸಿಪಿಐ ಡಿ.ಹುಲಗೆಪ್ಪ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರಾಜಶೇಖರ ಕೂಚಬಾಳ, ಸಬ್ ರಜಿಸ್ಟ್ರಾರ ಎಂ.ಆರ್.ಪಾಟೀಲ, ಜಿ ಪಂ ಎಇ ಅಶೋಕ ಪಾಟೀಲ, ಸಮಾಜ ಕಲ್ಯಾಣಾಧಿಕಾರಿ ಎನ್.ಎಸ್.ಭೂಸಗೊಂಡ, ಅಬಕಾರಿ ಇಲಾಖೆಯ ಆರತಿ ಖೈನೂರ, ತೋಟಗಾರಿಕೆ ಇಲಾಖೆಯ ರಾಘವೇಂದ್ರ ಬಗಲಿ, ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿ ಸುನೀಲ ಕಮತಗಿ, ದೈಹಿಕ ಶಿಕ್ಷಕ ಆರ್.ಆರ್.ನಿಂಬಾಳಕರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.